ಬ್ರಿಟಿಷರು ಭಾರತ ಬಿಟ್ಟು ಹೋಗಲು ನೇತಾಜಿ ಬೋಸ್ ಕಾರಣ?

ಶತಮಾನಗಳಷ್ಟು ಸುದೀರ್ಘಕಾಲ ಭಾರತವನ್ನು ಆಳಿದ ಬ್ರಿಟೀಷರು ಭಾರತ ಬಿಟ್ಟು ಹೋಗಲು ಕಾರಣ ಮಹಾತ್ಮ ಗಾಂಧಿಯೇ ಅಥವಾ ಬ್ರಿಟೀಷ್ ಸೇನೆ ವಿರುದ್ಧ ಎದೆ ಕೊಟ್ಟು ನಿಂತ ನಿತಾಜಿ ಬೋಸ್ ಅವರ ಸೇನೆಯೇ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ...
ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ (ಸಂಗ್ರಹ ಚಿತ್ರ)
ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ (ಸಂಗ್ರಹ ಚಿತ್ರ)

ನವದೆಹಲಿ: ಶತಮಾನಗಳಷ್ಟು ಸುದೀರ್ಘಕಾಲ ಭಾರತವನ್ನು ಆಳಿದ ಬ್ರಿಟೀಷರು ಭಾರತ ಬಿಟ್ಟು ಹೋಗಲು ಕಾರಣ ಮಹಾತ್ಮ ಗಾಂಧಿಯೇ ಅಥವಾ ಬ್ರಿಟೀಷ್ ಸೇನೆ ವಿರುದ್ಧ ಎದೆ ಕೊಟ್ಟು ನಿಂತ  ನಿತಾಜಿ ಬೋಸ್ ಅವರ ಸೇನೆಯೇ ಎಂಬ ವಿಚಾರ ಚರ್ಚೆಗೆ ಕಾರಣವಾಗಿದೆ.

ಕೇ೦ದ್ರ ಸರ್ಕಾರ ಇತ್ತೀಚೆಗೆ ಬಹಿರ೦ಗಗೊಳಿಸಿರುವ ನೇತಾಜಿ ಸುಭಾಷ್‍ಚ೦ದ್ರ ಬೋಸ್‍ಗೆ ಸ೦ಬ೦ಧಿಸಿದ ಕಡತಗಳು ಹಲವು ಮಹತ್ವದ ಅ೦ಶಗಳನ್ನು ಹೊರಹಾಕಿದ್ದು, ಜತೆಗೆ  ಹಲವುವಿವಾದಗಳನ್ನೂ ಹುಟ್ಟುಹಾಕಿವೆ. ಈ ಮಧ್ಯೆ, ಮಿಲಿಟರಿ ಇತಿಹಾಸಕಾರ ಜಿ.ಡಿ.ಭಕ್ಷಿ ಅವರ ಪುಸ್ತಕವೊಂದನ್ನು ರಚಿಸಿದ್ದು, ಇದರಲ್ಲಿ ಬ್ರಿಟಿಷರು ಭಾರತವನ್ನು ತ್ಯಜಿಸಿದ ಕಾರಣಗಳನ್ನು  ಅನ್ವೇಷಿಸಿದ್ದಾರೆ ಎಂದು ತಿಳಿದುಬಂದಿದೆ. ಭಾರತಕ್ಕೆ ಸ್ವಾತ೦ತ್ರ ನೀಡುವ ಸ೦ಬ೦ಧ ಒಪ್ಪ೦ದಕ್ಕೆ ಸಹಿ ಹಾಕಿದ್ದ ಆಗಿನ ಬ್ರಿಟಿಷ್ ಪ್ರಧಾನಿ ಕ್ಲೆಮೆ೦ಟ್ ಅಟ್ಲಿ, ನೇತಾಜಿಯಿ೦ದಾಗಿಯೇ ಭಾರತಕ್ಕೆ  ಸ್ವಾತ೦ತ್ರ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು ಎ೦ದು ಹೇಳಿದ್ದಾಗಿ  ಜಿ.ಡಿ.ಭಕ್ಷಿ ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ ಎಂದು ಹೇಳಲಾಗಿದೆ.

1946ರಲ್ಲಿ ಬ್ರಿಟಿಷರ ಆಡಳಿತದ ವಿರುದ್ಧ ಯಾವುದೇ ಗ೦ಭೀರ ಪ್ರತಿಭಟನೆ ನಡೆದಿರಲಿಲ್ಲ. ಆದರೂ ಯಾಕೆ ಬ್ರಿಟಿಷರು ಸ್ವಾತ೦ತ್ರ ನೀಡುವ ನಿಧಾ೯ರ ಕೈಗೊ೦ಡರು ಎ೦ಬ ಪ್ರಶ್ನೆಗೆ  ಉತ್ತಿರಿಸಿರುವ ಅಟ್ಲಿ ಈ ಮಾತು ಹೇಳಿದ್ದರು ಎಂದು ತಿಳಿದುಬಂದಿದೆ. 1956ರಲ್ಲಿ ಪ.ಬ೦ಗಾಳ ಜಸ್ಟಿಸ್ ಆಗಿದ್ದ ಪಿ.ಬಿ ಚಕ್ರವತಿ೯ ಮತ್ತು ಅಟ್ಲಿ ನಡುವಿನ ಸ೦ಭಾಷಣೆಯನ್ನು "ಬೋಸ್‍- ಆ್ಯನ್  ಇ೦ಡಿಯನ್ ಸಮುರಾಯ್' ಕೃತಿಯಲ್ಲಿ ಭಕ್ಷಿ ಉಲ್ಲೇಖಿಸಿದ್ದಾರೆ.

ಬ್ರಿಟಿಷರು ನಿರ್ಮಿಸಿರುವ ಭಾರತೀಯ ಸೇನೆಯ ಮೇಲೆ ಇ೦ಗ್ಲೆ೦ಡ್ ರಾಣಿಗೆ ವಿಶ್ವಾಸ ಕಡಿಮೆಯಾಗಿತ್ತು. ನೇತಾಜಿ ರೂಪಿಸಿದ್ದ  ಸೇನೆ ಇದಕ್ಕೆ ಕಾರಣ ಎ೦ದು ಅಟ್ಲಿ ಹೇಳಿದ್ದರು. ಅಲ್ಲದೆ ಗಾ೦ಧೀಜಿ ನಡೆಸುತ್ತಿರುವ ಅಹಿ೦ಸಾತ್ಮಕ ಚಳವಳಿಯ ಪ್ರಭಾವ ಬ್ರಿಟಿಷರ ಮೇಲೆ ಎಷ್ಟರ ಮಟ್ಟಿಗೆ ಉ೦ಟಾಗಿದೆ ಎ೦ದು ಕೇಳಿದ್ದಕ್ಕೆ  "ಕನಿಷ್ಠ ಮಟ್ಟದ್ದು' ಎ೦ದು ಅಟ್ಲಿ ಹೇಳಿದ್ದರು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com