ಪಶ್ಚಿಮ ರಾಷ್ಟ್ರಗಳು ಮುಸ್ಲಿಂ ಜಗತ್ತಿನಲ್ಲಿ ಭಯೋತ್ಪಾದನೆ ಹೆಚ್ಚಿಸುತ್ತಿವೆ: ಇರಾನ್

ಪಶ್ಚಿಮ ದೇಶಗಳು ಮುಸ್ಲಿಂ ಜಗತ್ತಿನಲ್ಲಿ ಭಯೋತ್ಪಾದನೆಯನ್ನು ಬೆಳೆಸುತ್ತಿವೆ ಎಂದು ಹೇಳಿ ಇರಾನ್ ನ ಅಧಿನಾಯಕ ಅಯಾತೊಲ್ಲಾ ಅಲಿ ಖಮೇನಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಇರಾನ್ ನ ಅಧಿನಾಯಕ ಅಯಾತೊಲ್ಲಾ ಅಲಿ ಖಮೇನಿ
ಇರಾನ್ ನ ಅಧಿನಾಯಕ ಅಯಾತೊಲ್ಲಾ ಅಲಿ ಖಮೇನಿ
ತೆಹ್ರಾನ್: ಪಶ್ಚಿಮ ದೇಶಗಳು ಮುಸ್ಲಿಂ ಜಗತ್ತಿನಲ್ಲಿ ಭಯೋತ್ಪಾದನೆಯನ್ನು ಬೆಳೆಸುತ್ತಿವೆ ಎಂದು ಹೇಳಿ ಇರಾನ್ ನ ಅಧಿನಾಯಕ ಅಯಾತೊಲ್ಲಾ ಅಲಿ ಖಮೇನಿ ಬುಧವಾರ ವಾಗ್ದಾಳಿ ನಡೆಸಿದ್ದಾರೆ. 
"ನಿಜ ಇಸ್ಲಾಮ್ ನಲ್ಲಿ ನಕಲಿ ಇಸ್ಲಾಮ್ ಸೃಷ್ಟಿಸಲು ಪ್ರಯತ್ನಿಸಿಯುತ್ತಿರುವ ಭಯೋತ್ಪಾದಕರಿಂದ ದುರದೃಷ್ಟವಶಾತ್ ಈ ವರ್ಷದ ಈದ್ ಉಲ್-ಫಿತ್ರ್ ಹಲವು ಮುಸ್ಲಿಂ ದೇಶಗಳಲ್ಲಿ ಶೋಕಾಚರಣೆಯಾಗಿ ಪರಿಣಮಿಸಿದೆ" ಎಂದು ತೆಹ್ರಾನ್ ನಲ್ಲಿ ಬೆಳಗಿನ ಪ್ರಾರ್ಥನೆಯ ವೇಳೆಯಲ್ಲಿ ಮುಂದಾಳತ್ವ ವಹಿಸಿದ್ದ ಸಮಯದಲ್ಲಿ ಅಯಾತೊಲ್ಲಾ ಹೇಳಿದ್ದಾರೆ. 
"ಅಮೆರಿಕಾ, ಇಸ್ರೇಲ್ ಮತ್ತು ಬ್ರಿಟನ್ ದೇಶಗಳ ಬೇಹುಗಾರಿಕಾ ಸಂಸ್ಥೆಗಳು ಹೆಚ್ಚಿಸಿರುವ ಭಯೋತ್ಪಾದನೆಯಿಂದಲೇ ಇಂಹತ ಘೋರ ಹಿಂಸೆಯ ಅಪರಾಧಗಳು ಜರುಗುತ್ತಿರುವುದು" ಎಂದು ಅಯಾತೊಲ್ಲಾ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. 
ಈ ಭಯೋತ್ಪಾದನೆಯ ಸೃಷ್ಟಿಕರ್ತರು ಈ ಭಯೋತ್ಪಾದಕರ ಅಪರಾಧಗಳಿಂದ ರಕ್ಷಣೆ ಪಡೆಯಲು ಹೆಚ್ಚಿನ ದಿನಗಳವರೆಗೆ ಸಾಧ್ಯವಿಲ್ಲ ಎಂದು ಕೂಡ ಅವರು ಎಚ್ಚರಿಸಿದ್ದಾರೆ. 
ಪವಿತ್ರ ತಿಂಗಳು ರಂಜಾನ್ ನ ಕೊನೆಯ ದಿನವಾದ ಈದ್ ಉಲ್-ಫಿತ್ರ್ ಆಚರಣೆಗಾಗಿ ಇರಾನ್ ನಾಗರಿಕರು ಬುಧವಾರ ಬೆಳಗ್ಗೆ ಮಸೀದಿಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com