ಪಾಕ್ ನಿರಾಶ್ರಿತ ಹಿಂದೂಗಳಿಗೆ ಭಾರತದ ಅಭಯ!

ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿ ನಿರಾಶ್ರಿತರಾಗಿರುವ ಹಿಂದೂಗಳಿಗೆ ಭಾರತ ಸರ್ಕಾರ ಅಭಯ ನೀಡಿದ್ದು, ಪಾಕ್ ಹಿಂದೂಗಳಿಗೆ ಭಾರತ ಪೌರತ್ವ ನೀಡಲು ನೂತನ ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.
ಪಾಕಿಸ್ತಾನದ ಹಿಂದೂ ನಿರಾಶ್ರಿತರು (ಸಂಗ್ರಹ ಚಿತ್ರ)
ಪಾಕಿಸ್ತಾನದ ಹಿಂದೂ ನಿರಾಶ್ರಿತರು (ಸಂಗ್ರಹ ಚಿತ್ರ)

ನವದೆಹಲಿ: ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿ ನಿರಾಶ್ರಿತರಾಗಿರುವ ಹಿಂದೂಗಳಿಗೆ ಭಾರತ ಸರ್ಕಾರ ಅಭಯ ನೀಡಿದ್ದು, ಪಾಕ್ ಹಿಂದೂಗಳಿಗೆ ಭಾರತ ಪೌರತ್ವ ನೀಡಲು ನೂತನ  ಕಾಯ್ದೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ.

ಪ್ರಸ್ತುತ ಜಾರಿಯಲ್ಲಿರುವ ಕಾನೂನಿಗೆ ಮಹತ್ವದ ತಿದ್ದುಪಡಿ ತರಲು ಕೇ೦ದ್ರ ಸರ್ಕಾರ ಮು೦ದಾಗಿದ್ದು, ತಿದ್ದುಪಡಿ ಜಾರಿಯಾಗಿದ್ದೇ ಆದರೆ ಪಾಕಿಸ್ತಾನದಿ೦ದ ವಲಸೆ ಬರುವ ಹಿ೦ದುಗಳಿಗೆ  ಭಾರತೀಯ ಪೌರತ್ವ ಸುಲಭವಾಗಿ ಲಭ್ಯವಾಗಲಿದೆ. ಮೂಲಗಳ ಪ್ರಕಾರ ಭಾರತೀಯ ಪೌರತ್ವ ಕಾಯ್ದೆ 1955ಕ್ಕೆ ತಿದ್ದುಪಡಿ ತರಲು ಕೇ೦ದ್ರ ಸಕಾ೯ರ ಈಗಾಗಲೇ ಸಿದ್ಧತೆ ಆರ೦ಭಿಸಿದ್ದು,  ಜುಲೈ-ಆಗಸ್ಟ್ ನಲ್ಲಿ ನಡೆಯಲಿರುವ ಮು೦ಗಾರು ಅದಿವೇಶನದ ವೇಳೆ ಇದು ಸ೦ಸತ್‍ನಲ್ಲಿ ಮ೦ಡನೆಯಾಗುವ ಸಾಧ್ಯತೆ ಇದೆ.

ಈಗಾಗಲೇ ತಿದ್ದುಪಡಿ ಕುರಿತು ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾವನೆ ಸಿದ್ಧಪಡಿಸಲಾಗುತ್ತಿದ್ದು, ಇದೇ ತಿಂಗಳ ಅಂತ್ಯದಲ್ಲಿ ಕರಡು ಅ೦ತಿಮಗೊಳಿಸಲಾಗುತ್ತದೆ ಎ೦ದು ಕೇ೦ದ್ರ ಗೃಹ  ಸಚಿವಾಲಯದ ಮೂಲಗಳು ತಿಳಿಸಿವೆ. ಧಾಮಿ೯ಕ ಕಿರುಕುಳ ಸೇರಿ ಹಲವು ರೀತಿಯ ದೌಜ೯ನ್ಯಗಳನ್ನು ಅನುಭವಿಸಿ, ಆತ೦ಕದಲ್ಲಿ ಜೀವನ ನಡೆಸುತ್ತಿರುವ ಪಾಕಿಸ್ತಾನದ ಹಿ೦ದುಗಳು ಮತ್ತು  ಅಲ್ಲಿಂದ ಭಾರತಕ್ಕೆ ವಲಸೆ ಬರುವ ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ ನೀಡುವ ನಿಯಮವನ್ನು ಸರಳೀಕರಿಸುವುದು ತಿದ್ದುಪಡಿಯ ಪ್ರಮುಖ ಉದ್ದೇಶ ಎನ್ನಲಾಗಿದೆ.

ಕಳೆದ ಲೋಕಸಭಾ ಚುನಾವಣೆ ಸ೦ದರ್ಭದಲ್ಲೇ, ಪಾಕಿಸ್ತಾನದ ನಿರಾಶ್ರಿತ ಹಿ೦ದುಗಳಿಗೆ ಆಶ್ರಯ ಒದಗಿಸುವ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ತನ್ನ ಪ್ರಸ್ತಾಪಿಸಿತ್ತು. ಪಾಕಿಸ್ತಾನದಲ್ಲಿ ಹಿ೦ಸೆ,  ದೌಜ೯ನ್ಯ ಅನುಭವಿಸುತ್ತಿರುವ ಹಿ೦ದುಗಳನ್ನು ಭಾರತ ಸ್ವಾಗತಿಸುತ್ತದೆ ಎ೦ದು ಹೇಳಿತ್ತು. ಕೇ೦ದ್ರದಲ್ಲಿ ಅಧಿಕಾರಕ್ಕೆ ಬ೦ದು 2 ವಷ೯ ಪೂರೈಸಿರುವ ಸ೦ದಭ೯ದಲ್ಲಿ ಬಿಜೆಪಿ ಈ ಭರವಸೆ  ಈಡೇರಿಸುವತ್ತ ಮಹತ್ವದ ಹೆಜ್ಜೆ ಇಟ್ಟಿದೆ.

ಏನಿದು ನೂತನ ಪ್ರಸ್ತಾವನೆ?
ಪಾಕಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೊಳಗಾಗಿ ಭಾರತದಲ್ಲಿ ನೆಲೆಸಲು ಬಯಸುವ ನಿರಾಶ್ರಿತ ಹಿ೦ದುಗಳಿಗೆ ಭಾರತದಲ್ಲಿ ವಾಸಿಸುವ ಅವಕಾಶ ಕಲ್ಪಿಸುವ ಕಾನೂನಾತ್ಮಕ ಪ್ರಕ್ರಿಯೆಯೇ ಈ  ನೂತನ ಕಾಯ್ದೆಯಾಗಿದ್ದು, ಈ ಕಾಯ್ದೆಯನ್ವಯ ಪಾಕಿಸ್ತಾನದಿಂದ ಭಾರತಕ್ಕೆ ವಲಸೆ ಬರುವ ಹಿಂದೂಗಳಿಗೆ ಹಲವು ರಿಯಾಯಿತಿಗಳನ್ನು ನೀಡಲು ಉದ್ದೇಶಿಸಲಾಗಿದೆ. ಭಾರತೀಯ ಪೌರತ್ವಕ್ಕಾಗಿ  ಅಜಿ೯ ಸಲ್ಲಿಸಲು ಹಾಗೂ ನೋ೦ದಾವಣಿಗಾಗಿ ಪ್ರಸ್ತುತ ಪ್ರತಿ ವ್ಯಕ್ತಿ 5 ಸಾವಿರ ರು. ಶುಲ್ಕ ಭರಿಸಬೇಕಾಗುತ್ತದೆ. ಆದರೆ, ಹೊಸ ಕಾಯ್ದೆಯಲ್ಲಿ ಇದನ್ನು ಪ್ರತಿ ವ್ಯಕ್ತಿಗೆ 100 ರು.ಗೆ ಇಳಿಸುವ ಪ್ರಸ್ತಾವನೆ  ಇದ್ದು, ಭಾರತೀಯ ಪೌರತ್ವಕ್ಕಾಗಿ ಜಿಲ್ಲಾಮಟ್ಟದಲ್ಲೂ ಅಜಿ೯ ಸಲ್ಲಿಸುವ ಸೌಲಭ್ಯ ಒದಗಿಸಲು ನಿಧ೯ರಿಸಲಾಗಿದೆ. ಜಿಲ್ಲಾ ಮ್ಯಾಜಿ ಸ್ಟ್ರೇ ಟ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಇದರ  ಉಸ್ತುವಾರಿ ನೀಡಲಾಗುತ್ತದೆ.

ಹೀಗಾಗಿ ಭಾರತದ ಯಾವುದೇ ಭಾಗದಲ್ಲಾದರೂ ಅಜಿ೯ ಸಲ್ಲಿಸಿ, ಭಾರತೀಯ ಪೌರತ್ವ ಪಡೆಯಬಹುದಾಗಿದೆ. ಸ೦ತ್ರಸ್ತರು ಗೃಹ ಸಚಿವಾಲಯಕ್ಕೆ ಅಲೆಯುವುದು ತಪ್ಪಲಿದ್ದು, ಅಪಾರ ಸಮಯ  ಹಾಗೂ ಹಣ ಉಳಿತಾಯವಾಗಲಿದೆ. ಪಾಕ್ ಹಿ೦ದುಗಳಿಗೆ ಬ್ಯಾ೦ಕ್ ಖಾತೆ, ವಾಹನ ಚಾಲನೆ ಪರವಾನಗಿ, ಆಧಾರ್, ಪಾನ್ ಕಾಡ್‍೯ಗಳನ್ನು ನೀಡಲೂ ಹೊಸ ಕಾಯ್ದೆಯಡಿ ಅವಕಾಶ  ನೀಡಲಾಗಿದೆ. ಪಾಕಿಸ್ತಾನ, ಅಫ್ಘಾನಿಸ್ತಾನ, ಬಾ೦ಗ್ಲಾದೇಶಗಳಿ೦ದ ಭಾರತಕ್ಕೆ ವಲಸೆ ಬರುವ ಹಿ೦ದುಗಳಿಗೂ ಈ ಸೌಲಭ್ಯ ಸಿಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com