ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ: ಯಾರಿಗೆ ಯಾವ ಖಾತೆ?

ಸಚಿವ ಸಂಪುಟ ಪುನಾರಚನೆಯ ಪರಿಣಾಮವಾಗಿ ಕಾಂಗ್ರೆಸ್ ನಲ್ಲಿ ಭಿನ್ನಮತ ಉಂಟಾಗಿದ್ದು, ಸಚಿವ ಸ್ಥಾನ ಕಳೆದುಕೊಂಡ ನಾಯಕರು ಸಿದ್ದರಾಮಯ್ಯ ವಿರುದ್ಧ...
ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ( ಸಂಗ್ರಹ ಚಿತ್ರ)
ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭ( ಸಂಗ್ರಹ ಚಿತ್ರ)
Updated on: 
ಬೆಂಗಳೂರು: ಸಚಿವ ಸಂಪುಟ ಪುನಾರಚನೆಯ ಪರಿಣಾಮವಾಗಿ ಕಾಂಗ್ರೆಸ್  ನಲ್ಲಿ ಭಿನ್ನಮತ ಉಂಟಾಗಿದ್ದು, ಸಚಿವ ಸ್ಥಾನ ಕಳೆದುಕೊಂಡ ನಾಯಕರು ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದ್ದರೆ, ಇತ್ತ ಸಿಎಂ ಸಿದ್ದರಾಮಯ್ಯ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ, ಆ ಪಟ್ಟಿಯನ್ನು ರಾಜ್ಯಪಾಲ ವಜುಭಾಯ್ ವಾಲಾ ಅವರಿಗೆ ರವಾನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
13 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಸತಿ, ವಾರ್ತಾ ಇಲಾಖೆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. 
ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ:  
ರಮೇಶ್ ಕುಮಾರ್: ಆರೋಗ್ಯ ಖಾತೆ 
ಕಾಗೋಡು ತಿಮ್ಮಪ್ಪ: ಕಂದಾಯ ಖಾತೆ 
ಯುಟಿ ಖಾದರ್: ಆಹಾರ ಮತ್ತು ನಾಗರಿಕ ಸರಬರಾಜು
ರುದ್ರಪ್ಪ ಲಮಾಣಿ: ಮುಜರಾಯಿ, ಜವಳಿ
ಕಾನೂನು ಸಚಿವ ಟಿಬಿ ಜಯಚಂದ್ರ: ಸಣ್ಣ ನೀರಾವರಿ( ಹೆಚ್ಚುವರಿ ಜವಾಬ್ದಾರಿ)
ದೇಶಪಾಂಡೆ: ಕೈಗಾರಿಕೆ, ಮೂಲಸೌಕರ್ಯ ಖಾತೆ
ರೋಶನ್ ಬೇಗ್: ನಗರಾಭಿವೃದ್ಧಿ
ಪ್ರಿಯಾಂಕ್ ಖರ್ಗೆ: ಐಟಿ ಬಿಟಿ ಮತ್ತು ಪ್ರವಾಸೋದ್ಯಮ
ಬಸವರಾಜ ರಾಯರೆಡ್ಡಿ: ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ತನ್ವೀರ್ ಸೇಠ್: ಉನ್ನತ ಶಿಕ್ಷಣ, ವಕ್ಫ್
ಸಂತೋಷ್ ಲಾಡ್: ಕಾರ್ಮಿಕ
ರಮೇಶ್ ಜಾರಕಿಹೊಳಿ: ಸಣ್ಣ ಕೈಗಾರಿಕೆ
ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಬಂದರು
ಎನ್.ಆರ್ ಸೀತಾರಾಂ: ಯುವಜನ ಖಾತೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com