ಸಾರ್ಥಕತೆ ಮೆರೆದ 'ಹರೀಶ್ ಯೋಜನೆ'ಗೆ ಸಿಎಂ ಚಾಲನೆ

ಸಾವಿನಂಚಿನಲ್ಲೂ ಸಾರ್ಥಕತೆ ಮೆರೆದಿದ್ದ ಹರೀಶ್ ಅವರ ಸ್ಮರಣಾರ್ಥಕ್ಕಾಗಿ ಆರೋಗ್ಯ ಇಲಾಖೆ ರೂಪಿಸಿರುವ 'ಮುಖ್ಯಮಂತ್ರಿ ಸಾಂತ್ವನ ಹರೀಶ್' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಚಾಲನೆ ನೀಡಿದ್ದಾರೆ...
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಪಘಾತದಲ್ಲಿ ಸಾವನ್ನಪ್ಪಿದ್ದ ಹರೀಶ್(ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಪಘಾತದಲ್ಲಿ ಸಾವನ್ನಪ್ಪಿದ್ದ ಹರೀಶ್(ಸಂಗ್ರಹ ಚಿತ್ರ)

ಬೆಂಗಳೂರು: ಸಾವಿನಂಚಿನಲ್ಲೂ ಸಾರ್ಥಕತೆ ಮೆರೆದಿದ್ದ ಹರೀಶ್ ಅವರ ಸ್ಮರಣಾರ್ಥಕ್ಕಾಗಿ ಆರೋಗ್ಯ ಇಲಾಖೆ ರೂಪಿಸಿರುವ 'ಮುಖ್ಯಮಂತ್ರಿ ಸಾಂತ್ವನ ಹರೀಶ್' ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಚಾಲನೆ ನೀಡಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಯೋಜನೆ ಚಾಲನೆ ನೀಡಿದ ನಂತರ ಮಾತನಾಡಿರುವ ಸಿದ್ದರಾಮಯ್ಯ ಅವರು, ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣ ನೆರವು ಸಿಕ್ಕರೆ ಸಾಕಷ್ಟು ಜನರ ಪ್ರಾಣ ಉಳಿಸಬಹುದು. ಈ ಹಿನ್ನೆಲೆಯಲ್ಲಿ ವಿನೂತನ, ಮಾದರಿಯಾದ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದು ಹೇಳಿದ್ದಾರೆ.

ಫೆ.16 ರಂದು ನೆಲಮಂಗಲದ ಬೇಗೂರ್ ಗೇಟ್ ಬಳಿ ಲಾರಿ ಹಾಗೂ ಬೈಕ್ ನಡುವೆ ಭೀಕರ ಅಪಘಾತವೊಂದು ಸಂಭವಿಸಿತ್ತು. ಅಪಘಾತದಲ್ಲಿ ಬೈಕ್ ಸವಾರ ಹರೀಶ್ ಎಂಬ ಯುವಕನ ದೇಹ ಎರಡು ಭಾಗವಾಗಿ ರಸ್ತೆಯಲ್ಲಿ ಬಿದ್ದಿತ್ತು. ದೇಹ ಎರಡು ತುಂಡಾದರೂ ಎರಡೂ ಕೈಯನ್ನು ಬಡಿಯುತ್ತ ಜೀವ ಉಳಿಸಿ ಎಂದು ಕೂಗಿಕೊಂಡು ತನ್ನ ಅಂಗಾಂಗ ದಾನ ಮಾಡಲು ಸಹಾಯ ಮಾಡುವಂತೆ ಅಂಗಾಲಾಚುತ್ತಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿತ್ತು. ಯುವಕನ ಕೊನೆಯಾಸೆಯಂತೆಯೇ ಆತನ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನ್ನಲ್ಲೂ ಸಾರ್ಥಕತೆಯನ್ನು ಮೆರೆದಿದ್ದ.

ಸಾವಿನಲ್ಲೂ ಸಾರ್ಥಕತೆಗೆ ಮೆರಿದ್ದ ಹರೀಶ್ ನನ್ನು ಕಂಡು ಸಾಕಷ್ಟು ಮಂದಿ ಪ್ರೇರಣೆಗೊಂಡಿದ್ದರು. ಹಲವಾರು ಮಂದಿ ಕಣ್ಣು ದಾನದ ಮಹತ್ವವರಿತು ಕಣ್ಣು ದಾನ ಮಾಡಲು ಮುಂದಾಗಿದ್ದರು. ನಂತರ ಆತನ ಸಾರ್ಥಕತೆಗೆ ಮಿಡಿದ ಸರ್ಕಾರ ಮುಖ್ಯಮಂತ್ರಿ ಸಾಂತ್ವನ ಯೋಜನೆಗೆ ಹರೀಶ್ ಹೆಸರಿಡುವುದಾಗಿ ಘೋಷಣೆ ಮಾಡಿತ್ತು. ಇದೀಗ ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದಾರೆ.

ಇದೀಗ ಆರೋಗ್ಯ ಇಲಾಖೆ ಹೊರ ತಂದಿರುವ ಹೊಸ ಯೋಜನೆಯಲ್ಲಿ ಅಪಘಾತಕ್ಕೊಳಗಾದ ವ್ಯಕ್ತಿ 48 ಗಂಟೆಗಳ ಅವಧಿಯಲ್ಲಿ ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರೂ ರು. 25 ಸಾವಿರದವರೆಗೆ ಚಿಕಿತ್ಸಾ ನೆರವು ಒದಗಿಸಲಾಗುವುದು. ಹಣ ನಾವು ಕೊಡುವಾಗ ಚಿಕಿತ್ಸೆ ಒದಗಿಸಲು ಯಾವುದೇ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ನಿರಾಕರಿಸುವಂತಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com