
ಇಸ್ಲಾಮಾಬಾದ್: ಹೆಚ್ಚುತ್ತಿರುವ ಭಾರತದ ಮಿಲಿಟರಿ ಶಕ್ತಿಯ ಬಗ್ಗೆ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿ ಮಂಗಳವಾರ ತೀವ್ರ ಕಳವಳ ವ್ಯಕ್ತಪಡಿಸಿರುವುದಾಗಿ ಮಾಧ್ಯವೊಂದು ವರದಿ ಮಾಡಿದೆ.
ವಿದೇಶಾಂಗ ವ್ಯವಹಾರಗಳಿಗೆ ಪಾಕಿಸ್ತಾನ ಪ್ರಧಾನಿಯವರಿಗೆ ಸಲಹೆಗಾರರಾಗಿರುವ ಸರ್ತಜ್ ಅಜೀಜ್, ಭಾರತದ ಬೆಳೆಯುತ್ತಿರುವ ಮಿಲಿಟರಿ ಶಕ್ತಿಯನ್ನು ತಡೆಯದಿದ್ದರೆ ಪಾಕಿಸ್ತಾನ ಕೂಡ ಮಿಲಿಟರಿ ತಂತ್ರಗಾರಿಕೆಯ ಶಕ್ತಿಯನ್ನು ವೃದ್ಧಿಸಿಕೊಳುವತ್ತ ಒತ್ತಾಯಪೂರ್ವಕಾವಾಗಿ ಗಮನಹರಿಸಿಕೊಳ್ಳಬೇಕಾಗುತ್ತದೆ ಎಂದು ಹೇಳಿದ್ದಾರೆ ಎಂದು ಡಾನ್ ಆನ್ಲೈನ್ ವರದಿ ಮಾಡಿದೆ.
"ದಕ್ಷಿಣ ಏಶ್ಯಾದಲ್ಲಿ ನೆಲೆಮಾಡಿರುವ ಶಕ್ತಿ ಸಮತೋಲನ ಹದಗೆಡದಂತೆ ನೋಡಿಕೊಳ್ಳಲು ಅಂತರಾಷ್ಟ್ರೀಯ ಸಮುದಾಯ ಕ್ರಮ ತೆಗೆದುಕೊಳ್ಳಬೇಕು" ಎಂದು ಕೂಡ ಅಜೀಜ್ ಹೇಳಿರುವುದಾಗಿ ವರದಿಯಾಗಿದೆ.
Advertisement