
ಚೆನ್ನೈ: ಡಿ ಎಂ ಕೆ ಅಧ್ಯಕ್ಷ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ ಕರುಣಾನಿಧಿ ತಿರುವರೂರ್ ವಿಧಾನಸಭಾ ಕ್ಷೇತ್ರದಿಂದ ತಮಿಳುನಾಡು ವಿಧಾನಸಭೆಗೆ ಗುರುವಾರ ೧೩ ನೇ ಬಾರಿಗೆ ಆಯ್ಕೆಯಾಗಿದ್ದಾರೆ.
ಕರುಣಾನಿಧಿ ಅವರು ತಮ್ಮ ಸಮೀಪದ ಎ ಐ ಡಿ ಎಂ ಕೆ ಅಭ್ಯರ್ಥಿಯನ್ನು ೬೮,೩೬೬ ಮತಗಳ ಅಂತರದಿಂದ ಸೋಲಿಸಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ.
೯೧ ವರ್ಷದ ಕರುಣಾಧಿಯವರಿಗೆ ಇದು ೧೩ ನೆ ಜಯವಾಗಿದ್ದು, ೧೯೫೭ ರಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಈ ರಾಜಕೀಯ ಮುತ್ಸದ್ಧಿಗೆ ಸೋಲೇ ಇಲ್ಲವಾಗಿದೆ!
Advertisement