ನೋಟು ಹಿಂಪಡೆತ ಗೊಂದಲ; ದೆಹಲಿಯಲ್ಲಿ ಮುರಿದುಬಿದ್ದ ಮದುವೆ

ನೋಟು ಹಿಂಪಡೆತದಿಂದ ದೇಶದಲ್ಲಿ ಉಂಟಾಗಿರುವ ಗೊಂದಲದಿಂದ ಯುವತಿಯೊಬ್ಬಳ ಮದುವೆಯ ಕನಸು ಮುರಿದು ಬಿದ್ದಿದೆ. ೮ ತಿಂಗಳ ಹಿಂದ ನಿಶ್ಚಿತಾರ್ಥವಾಗಿದ್ದರೂ, ನೋಟು ಹಿಂಪಡೆತದಿಂದ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ನೋಟು ಹಿಂಪಡೆತದಿಂದ ದೇಶದಲ್ಲಿ ಉಂಟಾಗಿರುವ ಗೊಂದಲದಿಂದ ಯುವತಿಯೊಬ್ಬಳ ಮದುವೆಯ ಕನಸು ಮುರಿದು ಬಿದ್ದಿದೆ. ೮ ತಿಂಗಳ ಹಿಂದ ನಿಶ್ಚಿತಾರ್ಥವಾಗಿದ್ದರೂ, ನೋಟು ಹಿಂಪಡೆತದಿಂದ ಉಂಟಾಗಿರುವ ನಗದು ಬಿಕ್ಕಟ್ಟು ಕಾರಣ ನೀಡಿ ವರನ ಮನೆಯವರು ಬುಧವಾರ ಮದುವೆ ಬೇಡ ಎಂದಿದ್ದಾರೆ.
ಜಗತ್ಪುರಿ ನಿವಾಸಿ ಶಿಖಾಗೆ(೨೨), ನೋಯ್ಡಾದ ಕುನಾಲ್ ಅವರ ಜೊತೆಗೆ ಎಂಟು ತಿಂಗಳ ಹಿಂದ ನಿಶ್ಚಿತಾರ್ಥವಾಗಿತ್ತು. ನವೆಂಬರ್ ೨೫ ರಂದು ಈ ಜೋಡಿ ಸಪ್ತಪದಿ ತುಳಿಯಬೇಕಿತ್ತು. 
"ವರನ ಮನೆಯವರು ಅತ್ಯಾಧುನಿಕ ಕಾರು, ವಜ್ರದ ಒಡವೆ ಮತ್ತು ನಗದು ಕೇಳಿದ್ದರು. ಆದರೆ ಈ ನೋಟು ಹಿಂಪಡೆತದಿಂದ, ಅವರ ಬೇಡಿಕೆಗಳನ್ನು ಪೂರೈಸಲು ಸಾಧ್ಯವಾಗಲಿಲ್ಲ. ಆದುದರಿಂದ ಅವರು ಮದುವೇಯನ್ನೇ ರದ್ದುಪಡಿಸಿದರು" ಎಂದು ವಧುವಿನ ಸಂಬಂಧಿ ಹೇಳಿದ್ದಾರೆ. 
ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದು, ನಗದು ಪಡೆಯುವುದರ ಮೇಲೆ ನಿಯಂತ್ರಣ ಹೇರಿರುವುದರಿಂದ ಶಿಖಾ ಅವರ ತಂದೆಗೆ ಕೆಲವ ೨.೫ ಲಕ್ಷ ರೂ ಮಾತ್ರ ನಗದು ದೊರಕಿತ್ತು. 
"ನಾವು ಅವರ ವಿರುದ್ಧ ನ್ಯಾಯಾಲಯಕ್ಕೆ ಹೋಗಲಿದ್ದೇವೆ" ಎಂದು ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com