ಬಿಹಾರದಲ್ಲಿ ಐದು ಜನ ಶಂಕಿತ ಉಗ್ರರನ್ನು ಬಂಧಿಸಿದ ಎನ್ ಐ ಎ

ಇಬ್ಬರು ಪಾಕಿಸ್ತಾನಿಯರನ್ನು ಸೇರಿದಂತೆ, ಭಾರತ-ನೇಪಾಳದ ಬಿಹಾರದ ರಾಕ್ಸುಲ್ ಗಡಿಯಲ್ಲಿ ಐದು ಜನ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಬಂಧಿಸಿದೆ ಎಂದು ಮಂಗಳವಾರ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪಾಟ್ನಾ: ಇಬ್ಬರು ಪಾಕಿಸ್ತಾನಿಯರನ್ನು ಸೇರಿದಂತೆ, ಭಾರತ-ನೇಪಾಳದ ಬಿಹಾರದ ರಾಕ್ಸುಲ್ ಗಡಿಯಲ್ಲಿ ಐದು ಜನ ಶಂಕಿತ ಉಗ್ರರನ್ನು ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ಬಂಧಿಸಿದೆ ಎಂದು ಮಂಗಳವಾರ ಪೊಲೀಸರು ಹೇಳಿದ್ದಾರೆ. 
"ಈ ಶಂಕಿತ ಉಗ್ರರಿಂದ ಪಾಟ್ನಾದ ಪ್ರಮುಖ ಪ್ರದೇಶಗಳ ಭೂಪಟಗಳನ್ನು ಎನ್ ಐ ಎ ವಶಪಡಿಸಿಕೊಂಡಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ಅವರ ಯೋಜನೆಗಳ ಬಗ್ಗೆ ಎನ್ ಐ ಎ ಮತ್ತು ಬೇಹುಗಾರಿಕಾ ದಳ (ಐಬಿ) ತಂಡ ಹೆಚ್ಚಿನ ತನಿಖೆ ನಡೆಸಿದೆ ಎಂದು ಪೊಲೀಸರು ಹೇಳಿದ್ದಾರೆ. 
ಆಗಸ್ಟ್ 2013 ರಲ್ಲಿ, ಇಂಡಿಯನ್ ಮುಜಾಹಿದ್ದೀನ್ ಉಗ್ರಗಾಮಿ ಸಂಘಟನೆಯ ಅಧ್ಯಕ್ಷ ಯಾಸಿನ್ ಭಟ್ಕಳ್ ನನ್ನು ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ರಾಕ್ಸುಲ್ ನಲ್ಲಿ ಬಂಧಿಸಲಾಗಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com