
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿರುವ ಆರ್ ಎಸ್ ಪುರ ಸೆಕ್ಟರ್ ನಲ್ಲಿ ಕಳೆದ 20 ಗಂಟೆಗಳಿಂದ ನಡೆದಿರುವ ಗುಂಡಿನ ಚಕಮಕಿ ಬುಧವಾರವೂ ಮುಂದುವರೆದಿದ್ದು. ಘಟನೆಯಲ್ಲಿ ಈ ವರೆಗೂ ಸುಮಾರು 11 ಮಂದಿ ನಾಗರೀಕರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಸೇನೆ ನಡೆಸುತ್ತಿರುವ ಗುಂಡಿನ ದಾಳಿ ಬುಧವಾರವೂ ಮುಂದುವರೆದಿದ್ದು, ಪಾಕ್ ಸೈನಿಕರ ಪುಂಡಾಟಕ್ಕೆ ಈ ವರೆಗೂ 11 ಮಂದಿ ನಾಗರೀಕರು ಗಾಯಗೊಂಡಿದ್ದಾರೆ. ಗಾಯಾಳು ನಾಗರೀಕರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಪಾಕ್ ಸೈನಿಕರಿಗೆ ಭಾರತೀಯ ಯೋಧರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ಪಾಕ್ ಪೋಸ್ಟ್ ಗಳತ್ತ ನಿರಂತರ ಗುಂಡಿನ ದಾಳಿ ನಡೆಸುತ್ತಿದ್ದಾರೆ.
ಪಾಕ್ ಸೈನಿಕರ ದಾಳಿಯಿಂದಾಗಿ ಪ್ರಮುಖವಾಗಿ ನೌಶೇರಾ ಮತ್ತು ಆರ್.ಎಸ್. ಪುರಗಳಲ್ಲಿನ ಸಾಕಷ್ಟು ಮನೆಗಳಿಗೆ ಭಾರಿ ಪ್ರಮಾಣದ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement