ಕಾಶ್ಮೀರಕ್ಕೆ ಭೇಟಿ: ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ಮನವಿಗೆ ಭಾರತ ನಕಾರ

ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ಗಮನ ಸೆಳೆಯಲು ಪಾಕಿಸ್ತಾನ ಹರಸಾಹಸ ಪಡುತ್ತಿದ್ದು, ಮಂಗಳವಾರ ಸಂಜೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಕಾಶ್ಮೀರಕ್ಕೆ ಭೇಟಿ ಮಾಡುವ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಕಾಶ್ಮೀರ ವಿವಾದವನ್ನು ಅಂತಾರಾಷ್ಟ್ರೀಯ ಗಮನ ಸೆಳೆಯಲು ಪಾಕಿಸ್ತಾನ ಹರಸಾಹಸ ಪಡುತ್ತಿದ್ದು, ಮಂಗಳವಾರ ಸಂಜೆ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಆಯೋಗ ಕಾಶ್ಮೀರಕ್ಕೆ ಭೇಟಿ ಮಾಡುವ ಪ್ರಸ್ತಾವನೆಯನ್ನು ನವದೆಹಲಿ ತಿರಸ್ಕರಿಸಿದೆ. 
ಗಡಿ ನಿಯಂತ್ರಣ ರೇಖೆಯ ಎರಡು ಕಡೆಯವರು ಮಾಡಿರುವ ಮನವಿಯ ಮೇರೆಗೆ ಕಾಶ್ಮೀರಕ್ಕೆ ಭೇಟಿ ನೀಡುವ ಪ್ರಸ್ತಾವನೆಗೆ ಉತ್ತರ ನಿರೀಕ್ಷಿಸುತ್ತಿದ್ದೇವೆ ಎಂದು ಮಾನವ ಹಕ್ಕುಗಳ ವಿಶ್ವಸಂಸ್ಥೆಯ ಹೈ ಕಮಿಷನರ್ ಹೇಳಿದ್ದರು. 
ಈ ಮನವಿಯನ್ನು ತಿರಸ್ಕರಿಸಿರುವ ವಿದೇಶಾಂಗ ಸಚಿವಾಲಯ, ಆಗಸ್ಟ್ 12 ರಂದು ಸರ್ವ ಪಕ್ಷಗಳ ಸಭೆಯಲ್ಲಿ ಬಾಹ್ಯ ಸಂಸ್ಥೆಯ ವಿಷಯ ಚರ್ಚಿಸಲಾಯಿತು "ಆದರೆ ಎಲ್ಲ ಕಾನೂನಾತ್ಮಕ ಸಮಸ್ಯೆಗಳಿಗೆ ಭಾರತದ ಪ್ರಜಾಪ್ರಭುತ್ವದಲ್ಲಿ ಉತ್ತರವಿದೆ ಎಂದು ಸರ್ವ ಸಮ್ಮತವಾಗಿ ನಿರ್ಧರಿಸಲಾಯಿತು" ಎಂದು ಸಚಿವಾಲಯ ಹೇಳಿದೆ. 
ಜಮ್ಮು ಮಾತು ಕಾಶ್ಮೀರ ಹಾಗು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನಡುವೆ ಹೋಲಿಕೆ ಸರಿಯಲ್ಲ ಎಂದಿರುವ ಎಂದಿರುವ ಭಾರತ "ಮೊದಲನೆಯದರಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವಿದೆ ಆದರೆ ಎರಡನೆಯದಲ್ಲಿ ಪಾಕಿಸ್ತಾನ ತನಗೆ ಬೇಕಾದಂತೆ ಮುಖಂಡನನ್ನು ನೇಮಿಸುತ್ತದೆ" ಎಂದಿದೆ.
"ಭಾರತೀಯ ರಾಜ್ಯವಾದ ಜಮ್ಮು ಮತ್ತು ಕಾಶ್ಮೀರ, ವೈವಿಧ್ಯಮಯ ಮತ್ತು ಜಾತ್ಯಾತೀತ ಪ್ರಜಾಪ್ರಭುತ್ವದ ಭಾಗ, ಅಲ್ಲಿ ಸ್ವತಂತ್ರ ನ್ಯಾಯಾಂಗ, ಚಲನಶೀಲ ಮಾಧ್ಯಮ ಮತ್ತು ನಾಗರಿಕ ಸಮಾಜದ ಮೂಲಕ ನಾಗರಿಕರ ಸ್ವಾತಂತ್ರ್ಯವನ್ನು ಕಾಯ್ದುಕೊಳ್ಳಲಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಪಾಕಿಸ್ತಾನ ನಿಯಂತ್ರಿಸುತ್ತಿದ್ದು, ಅದು ಭಯೋತ್ಪಾದನೆಯ ನೆಚ್ಚಿನ ತಾಣವಾಗಿದೆ" ಎಂದು ಹೇಳಿಕೆ ತಿಳಿಸಿದೆ. 
ಪಾಕಿಸ್ತಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆ ಅತಿ ದೊಡ್ಡ ಬೆದರಿಕೆ ಎಂದು ಮತ್ತೆ ಹೇಳಿರುವ ಭಾರತ "ಹಲವಾರು ಭಯೋತ್ಪಾದನಾ ಕೃತ್ಯಗಳಿಗೆ ಬೇಕಾಗಿದ್ದ ಹಿಜಬುಲ್ ಮುಜಾಹಿದ್ದೀನ್ ಸಂಘಟನೆಯ ಕಮ್ಯಾಂಡರ್ ಮೃತಪಟ್ಟಿದ್ದರಿಂದ ಈ ಪರಿಸ್ಥಿತಿ ಎದುರಾಗಿದೆ. ಇದರ ಜೊತೆಗೆ ಗಡಿಯಲ್ಲಿ ಪಾಕಿಸ್ತಾನ ಹುಟ್ಟುಹಾಕಿರುವ ಭಯೋತ್ಪಾದನೆ ಪರಿಸ್ಥಿತಿಯನ್ನು ಹೆಚ್ಚು ಬಿಗಡಾಯಿಸಿದೆ. ಭಯೋತ್ಪಾದನೆ, ಮಾನವ ಹಕ್ಕುಗಳ ಅತಿ ದೊಡ್ಡ ಉಲ್ಲಂಘನೆ, ಇದನ್ನು ಮೊದಲು ಯಾವ ಪಕ್ಷಕ್ಕೂ ಸೇರದ ವೀಕ್ಷಕರು ಗುರುತಿಸಬೇಕು" ಎಂದು ಭಾರತ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com