ಕಾವೇರಿ ವಿವಾದ: ತಮಿಳುನಾಡಿನಲ್ಲಿ ಕನ್ನಡದ ನಟರ ವಿರುದ್ಧ ಪ್ರಕರಣ ದಾಖಲು

ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರವಾಗಿ ಕರ್ನಾಟಕದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿ ಕನ್ನಡದ ಖ್ಯಾತ ನಟರ ವಿರುದ್ಧ ಪ್ರಕರಣ ದಾಖಲಾಗಿದೆ.
ಕರ್ನಾಟಕ ಬಂದ್ ವೇಳೆ ಕನ್ನಡದ ನಟರು (ಸಂಗ್ರಹ ಚಿತ್ರ)
ಕರ್ನಾಟಕ ಬಂದ್ ವೇಳೆ ಕನ್ನಡದ ನಟರು (ಸಂಗ್ರಹ ಚಿತ್ರ)

ಚೆನ್ನೈ: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ವಿಚಾರವಾಗಿ ಕರ್ನಾಟಕದಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ತಮಿಳುನಾಡಿನಲ್ಲಿ ಕನ್ನಡದ ಖ್ಯಾತ ನಟರ ವಿರುದ್ಧ ಪ್ರಕರಣ  ದಾಖಲಾಗಿದೆ.

ಕನ್ನಡದ ಖ್ಯಾತ ನಟರಾದ ಪುನೀತ್ ರಾಜ್ ಕುಮಾರ್, ಉಪೇಂದ್ರ ಹಾಗೂ ದರ್ಶನ್ ತೂಗುದೀಪ ಅವರ ವಿರುದ್ಧ ತಮಿಳುನಾಡು ನ್ಯಾಯಾಲಯದಲ್ಲಿ ದೂರು ದಾಖಲಾಗಿದ್ದು, ಈ ನಟರು ತಮಿಳರ  ವಿರುದ್ಧ ಪ್ರಚೋದನಕಾರಿ ಭಾಷಣೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾವೇರಿ ವಿಚಾರವಾಗಿ ಕಳೆದ ಸೆಪ್ಟೆಂಬರ್ 9ರಂದು ನಡೆದ ಕರ್ನಾಟಕ ಬಂದ್ ವೇಳೆ ಈ ನಟರು ತಮಿಳರ ವಿರುದ್ಧ  ಪ್ರಚೋದನಕಾರಿಯಾಗಿ ಮಾತನಾಡಿದ್ದರು ಎಂದು ಆರೋಪಿಸಿ ತಮಿಳು ದೇಸಿಯ ಪೆರಮೈಪ್ಪು ಸಂಘಟನೆಯ ಸ್ಥಾಪಕಾಧ್ಯಕ್ಷ ಪಿ. ಇಳಂಗೋವನ್, ಕೊಯಮತ್ತೂರಿನ 2ನೇ ನ್ಯಾಯಾಂಗ  ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.

ಮೂಲಗಳ ಪ್ರಕಾರ ಚಿತ್ರನಟರಾದ ಪುನೀತ್ ರಾಜ್‌ಕುಮಾರ್, ಉಪೇಂದ್ರ ಮತ್ತು ದರ್ಶನ್ ತೂಗುದೀಪ ವಿರುದ್ಧ ದೇಶದ್ರೋಹ, ಹಿಂಸೆ ಮತ್ತು ಉದ್ದೇಶಪೂರ್ವಕ ಗಲಭೆಗೆ ಪ್ರಚೋದನೆ ನೀಡಿದ  ಸೆಕ್ಷನ್‌ಗಳಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಇಳಂಗೋವನ್ ಆಗ್ರಹಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com