10 ಆಟೋರಿಕ್ಷಾಗಳಿಗೆ ಗುದ್ದಿದ ಕಾನೂನು ವಿದ್ಯಾರ್ಥಿ ಕಾರು; ಒಬ್ಬ ಸಾವು; 9 ಜನಕ್ಕೆ ಗಾಯ

ಮದ್ಯಪಾನ ಮಾಡಿ ಪೋರ್ಶ ಕಾರು ಓಡಿಸುತ್ತಿದ್ದ ಇನ್ನು ಗುರುತು ಪತ್ತೆಹಚ್ಚದ ವ್ಯಕ್ತಿಯೊಬ್ಬ ನಿಂತಿದ್ದ 10 ಆಟೋರಿಕ್ಷಾಗಳಿಗೆ ಗುದ್ದಿದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟು, 9 ಜನ ಗಾಯಗೊಂಡಿದ್ದಾರೆ.
ಅಪಘಾತದ ಒಂದು ದೃಶ್ಯ
ಅಪಘಾತದ ಒಂದು ದೃಶ್ಯ
Updated on
ಚೆನ್ನೈ: ಮದ್ಯಪಾನ ಮಾಡಿ ಪೋರ್ಶ ಕಾರು ಓಡಿಸುತ್ತಿದ್ದ ಇನ್ನು ಗುರುತು ಪತ್ತೆಹಚ್ಚದ ವ್ಯಕ್ತಿಯೊಬ್ಬ ನಿಂತಿದ್ದ 10 ಆಟೋರಿಕ್ಷಾಗಳಿಗೆ ಗುದ್ದಿದ ಪರಿಣಾಮ ಒಬ್ಬರು ಸ್ಥಳದಲ್ಲೇ ಮೃತಪಟ್ಟು, 9 ಜನ ಗಾಯಗೊಂಡಿದ್ದಾರೆ. ಈ ಅಪಘಾತ ಸೋಮವಾರ ಬೆಳಗಿನ ಜಾವದಲ್ಲಿ ನಡೆದಿದೆ. 
ಮೃತಪಟ್ಟವರು ಆಟೋರಿಕ್ಷಾ ಚಾಲಕ ಆರುಮುಗಮ್ ಎಂದು ಗುರುತಿಸಲಾಗಿದೆ. 
ದೆಹಲಿ ನೋಂದಣಿ ಸಂಖ್ಯೆ ಇದ್ದ ಅದ್ದೂರಿ ಕಾರ್ ನಲ್ಲಿದ್ದ ಇಬ್ಬರು ಯುವಕರು ಮರೀನಾ ಬೀಚ್ ಕಡೆ ವೇಗವಾಗಿ ತೆರಳುವಾಗ, ಕೆಥೆಡ್ರಲ್ ರಸ್ತೆಯಲ್ಲಿ ನಿಂತಿದ್ದ 10 ಆಟೋಗಳಿಗೆ ವೇಗವಾಗಿ ಗುದ್ದಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
ಸ್ಥಳದಲ್ಲೇ ಒಬ್ಬ ಆಟೋ ಚಾಲಕ ಮೃತಪಟ್ಟಿದ್ದು, ಗಾಯಗೊಂಡ 9 ಜನರಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿವೆ. ಈ ಘಟನೆಯ ಪ್ರತ್ಯಕ್ಷದರ್ಶಿಯೊಬ್ಬರು ಕೂಡಲೇ ಪೊಲೀಸ್ ಗೆ ಮಾಹಿತಿ ತಲುಪಿಸಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು, ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. 
ಈಮಧ್ಯೆ ವಿಕಾಸ್ ಎಂಬ ಎರಡನೇ ವರ್ಷದ ಕಾನೂನು ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದು, ಮತ್ತೊಬ್ಬ ತಪ್ಪಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಇದು ಮದ್ಯ ಸೇವಿಸಿ ಚಾಲನೆ ಮಾಡಿ ಮಾಡಿದ ಅಪಘಾತ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. 
"ಏರ್ ಬ್ಯಾಗ್ ತೆರಿದುಕೊಂಡಿದ್ದರಿಂದ ಕಾರ್ ನಲ್ಲಿದ್ದ ಇಬ್ಬರಿಗೂ ಯಾವುದೇ ರೀತಿಯ ಗಾಯಗಳಾಗಿಲ್ಲ" ಎಂದು ಪೊಲೀಸ್ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. 
ಪ್ರಾಥಮಿಕ ತನಿಖೆಗಳ ಪ್ರಕಾರ ಈ ಇಬ್ಬರು ಆರೋಪಿಗಳು ಔತಣಕೂಟವೊಂದರಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುವಾಗ ಈ ಅಪಘಾತವೆಸಗಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com