ನೂತನ ಸಚಿವರ ಖಾತೆಗೆ ರಾಜ್ಯಪಾಲರ ಅಂಕಿತ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ ರಾಜಭವನಕ್ಕೆ ಕಳುಹಿಸಿದ್ದ ಪಟ್ಟಿಗೆ ಮಂಗಳವಾರ...

Published: 21st June 2016 02:00 AM  |   Last Updated: 21st June 2016 09:02 AM   |  A+A-


Official portfolios of ministers allocated

ರಾಜ್ಯಪಾಲ ವಜುಭಾಯಿ ವಾಲಾ

Posted By : LSB
Source : Online Desk
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿ ರಾಜಭವನಕ್ಕೆ ಕಳುಹಿಸಿದ್ದ ಪಟ್ಟಿಗೆ ಮಂಗಳವಾರ ಸಂಜೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದಾರೆ.

13 ನೂತನ ಶಾಸಕರಿಗೆ ಖಾತೆ ಹಂಚಿಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ವಸತಿ, ವಾರ್ತಾ ಇಲಾಖೆ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.

ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ: 

ರಮೇಶ್ ಕುಮಾರ್: ಆರೋಗ್ಯ ಖಾತೆ 

ಕಾಗೋಡು ತಿಮ್ಮಪ್ಪ: ಕಂದಾಯ ಖಾತೆ 

ಯುಟಿ ಖಾದರ್: ಆಹಾರ ಮತ್ತು ನಾಗರಿಕ ಸರಬರಾಜು

ರುದ್ರಪ್ಪ ಲಮಾಣಿ: ಮುಜರಾಯಿ, ಜವಳಿ

ಕಾನೂನು ಸಚಿವ ಟಿಬಿ ಜಯಚಂದ್ರ: ಸಣ್ಣ ನೀರಾವರಿ( ಹೆಚ್ಚುವರಿ ಜವಾಬ್ದಾರಿ)

ಆರ್. ವಿ. ದೇಶಪಾಂಡೆ: ಕೈಗಾರಿಕೆ, ಮೂಲಸೌಕರ್ಯ ಖಾತೆ

ರೋಶನ್ ಬೇಗ್: ನಗರಾಭಿವೃದ್ಧಿ ಹಾಗೂ ಹಜ್ ಖಾತೆ

ಈಶ್ವರ ಖಡ್ರೆ : ಪೌರಾಡಳಿತ ಹಾಗೂ ಸಾರ್ವಜನಿಕ ಉದ್ದಿಮೆ

ಪ್ರಿಯಾಂಕ್ ಖರ್ಗೆ: ಐಟಿ ಬಿಟಿ ಮತ್ತು ಪ್ರವಾಸೋದ್ಯಮ

ಬಸವರಾಜ ರಾಯರೆಡ್ಡಿ: ಉನ್ನತ ಶಿಕ್ಷಣ

ಎಚ್.ವೈ. ಮೇಟಿ : ಅಬಕಾರಿ

ತನ್ವೀರ್ ಸೇಠ್:  ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ, ಅಲ್ಪಸಂಖ್ಯಾತ ಖಾತೆ ಹಾಗೂ ವಕ್ಫ್

ಸಂತೋಷ್ ಲಾಡ್: ಕಾರ್ಮಿಕ

ರಮೇಶ್ ಜಾರಕಿಹೊಳಿ: ಸಣ್ಣ ಕೈಗಾರಿಕೆ

ಪ್ರಮೋದ್ ಮಧ್ವರಾಜ್: ಮೀನುಗಾರಿಕೆ, ಬಂದರು

ಎಂ.ಆರ್ ಸೀತಾರಾಂ: ವಿಜ್ಞಾನ ಮತ್ತು ತಂತ್ರಜ್ಞಾನ, ಯೋಜನಾ

ಎಸ್.ಎಸ್ ಮಲ್ಲಿಕಾರ್ಜುನ್ – ತೋಟಗಾರಿಕೆ, ಎಪಿಎಂಸಿ
Stay up to date on all the latest ಪ್ರಧಾನ ಸುದ್ದಿ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp