ಹಳಿ ತಪ್ಪಿದ ಔರಂಗಾಬಾದ್-ಹೈದರಾಬಾದ್ ಪ್ಯಾಸೆಂಜರ್ ರೈಲು: ಸಹಾಯವಾಣಿ ಸಂಖ್ಯೆ ಬಿಡುಗಡೆ!

ಬೀದರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಔರಂಗಾಬಾದ್-ಹೈದರಾಬಾದ್ ಪ್ಯಾಸೆಂಜರ್ ರೈಲು ಹಳಿ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಇಲಾಖೆ ತುರ್ತು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೀದರ್: ಬೀದರ್ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗೆ ಔರಂಗಾಬಾದ್-ಹೈದರಾಬಾದ್ ಪ್ಯಾಸೆಂಜರ್ ರೈಲು ಹಳಿ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ರೈಲ್ವೇ ಇಲಾಖೆ ತುರ್ತು ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.

ಶುಕ್ರವಾರ ಬೆಳಗಿನ ಜಾವ 3.50ರ ಸುಮಾರಿಗೆ ಔರಂಗಾಬಾದ್-ಹೈದರಾಬಾದ್ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲು ಕಾಳಗಾಪುರ ಮತ್ತು ಬಾಲ್ಕಿ ರೈಲ್ವೆ ನಿಲ್ದಾಣದ ನಡುವೆ ಕಾಳಗಾಪುರ ಸೇತುವೆ ಬಳಿ ಹಳಿತಪ್ಪಿದ್ದು,  ರೈಲಿನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಾಯಗಳಾಗಿವೆ. ಹೀಗಾಗಿ ಪ್ರಯಾಣಿಕರ ಬಗ್ಗೆ ಮಾಹಿತಿ ತಿಳಿಯಲು ನೆರವಾಗುವ ಉದ್ದೇಶದಿಂದ ರೈಲ್ವೇ ಇಲಾಖೆ ಸಹಾಯವಾಣಿ ಸಂಖ್ಯೆಗಳನ್ನು ಬಿಡುಗಡೆ ಮಾಡಿದ್ದು, ಸಹಾಯವಾಣಿ  ಸಂಖ್ಯೆಗಳು ಇಂತಿವೆ.

ಹೈದರಾಬಾದ್- 040-23200865
ಪಾರ್ಲಿ -02446-223540
ವಿಕಾರಾಬಾದ್ -08416-252013
ಬೀದರ್- 08482-226329

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com