ಪುಣೆ ವಿಶ್ವವಿದ್ಯಾಲಯ ಘರ್ಷಣೆ ಪ್ರಕರಣ: 12 ಕಾರ್ಯಕರ್ತರ ಬಂಧನ

ಪುಣೆ ವಿಶ್ವವಿದ್ಯಾಲಯದಲ್ಲ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದೆತ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ 12 ಮಂದಿ ಕಾರ್ಯಕರ್ತರನ್ನು ಶನಿವಾರ ಬಂಧನಕ್ಕೊಳಪಡಿಸಲಾಗಿದೆ...
ಪುಣೆ ವಿಶ್ವವಿದ್ಯಾಲಯ
ಪುಣೆ ವಿಶ್ವವಿದ್ಯಾಲಯ
ಪುಣೆ: ಪುಣೆ ವಿಶ್ವವಿದ್ಯಾಲಯದಲ್ಲ ನಡೆದ ಘರ್ಷಣೆ ಪ್ರಕರಣಕ್ಕೆ ಸಂಬಂಧಿಸಿದೆತ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ)ನ 12 ಮಂದಿ ಕಾರ್ಯಕರ್ತರನ್ನು ಶನಿವಾರ ಬಂಧನಕ್ಕೊಳಪಡಿಸಲಾಗಿದೆ. 
ದೆಹಲಿಯ ರಮ್ಜಾಸ್ ಕಾಲೇಜಿನ ಕಾರ್ಯಕ್ರಮವೊಂದಕ್ಕೆ ಜೆಎನ್ ಯು ವಿದ್ಯಾರ್ಥಿ ಉಮರ್ ಖಾಲಿದ್ ನನ್ನು ಆಹ್ನಾನಿಸಿದ್ದಕ್ಕೆ ವಿರೋಧ ವ್ಯಕ್ತಪಡಿಸಿ ಎಬಿವಿಪಿ ಕಾರ್ಯಕರ್ತರು ಫೆ.24 ರಂದು ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಇದಕ್ಕೆ ಪ್ರತಿಯಾಗಿ ಎಸ್ಎಫ್ಐ ಕಾರ್ಯಕರ್ತರು ಎಬಿವಿಪಿ ವಿರುದ್ಧ ಪೋಸ್ಟರ್ ಗಳನ್ನು ವಿವಿಯ ಆವರಣದಲ್ಲಿ ಅಂಟಿಸಿದ್ದರು. ಈ ಪೋಸ್ಟರ್ ಗಳಿಗೆ ಎಬಿವಿಪಿ ವಿರೋಧ ವ್ಯಕ್ತಪಡಿಸಿತ್ತು. ನಂತರ ಎರಡೂ ಸಂಘಟನೆಗಳ ಕಾರ್ಯಕರ್ತರ ನಡುವೆ ಘರ್ಷಣೆ ಏರ್ಪಟ್ಟು, ಕೆಲ ಕಾಲ ವಿವಿಯ ಆವರಣದಲ್ಲಿ ಆತಂಕ ಸೃಷ್ಟಿಯಾಗಿತ್ತು. 
ಪ್ರಕರಣ ಸಂಬಂಧ 12 ಮಂದಿ ಎಬಿವಿಪಿ ಹಾಗೂ ಎಸ್ಎಫ್ಐ ಕಾರ್ಯಕರ್ತನ್ನು ಬಂಧಿಸಿದ್ದ ಪೊಲೀಸರು ವಿಚಾರಣೆ ನಡೆಸಿದ್ದರು. ನಂತರ ಜಾಮೀನಿನ ಮೇಲೆ ಕಾರ್ಯಕರ್ತರು ಬಿಡುಗಡೆಯಾಗಿದ್ದರು. 
ಎಬಿವಿಪಿಯ 7 ಹಾಗೂ ಎಸ್ಎಫ್ಐ ನ 5 ಮಂದಿ ಕಾರ್ಯಕರ್ತನ್ನು ನಾವು ಬಂಧನಕ್ಕೊಳಪಡಿಸಿದ್ದೆವು. ಬಂಧಿಸಿದ ಬಳಿದ ನ್ಯಾಯಾಲಯದ ಎದುರು ಹಾಜರು ಪಡಿಸಲಾಗಿತ್ತು. ಜಾಮೀನಿನ ಮೇಲೆ ಕಾರ್ಯಕರ್ತರನ್ನು ಬಿಡುಗಡೆ ಮಾಡಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com