ಕಳೆದ ಪೆಬ್ರವರಿ 14ರಂದು ಬೆಂಗಳೂರಿನ ವಿಶೇಷ ನ್ಯಾಯಾಲಯದ ತೀರ್ಪು ಎತ್ತಿಹಿಡಿದಿದ್ದ ಸುಪ್ರೀಂಕೋರ್ಟ್‍ನ ದ್ವಿಸದಸ್ಯ ಪೀಠ, ಶಶಿಕಲಾಗೆ 4 ವರ್ಷ ಜೈಲು ಹಾಗೂ 10 ಕೋಟಿ ರು. ದಂಡ ವಿಧಿಸಿ ತೀರ್ಪು ಪ್ರಕಟಿಸಿತು. ಶಶಿಕಲಾ ಜೊತೆಗೆ ಇಳವರಸಿ ಹಾಗೂ ಸುಧಾಕರನ್ ಕೂಡ ದೋಷಿಗಳೆಂದು ಸಾಬೀತಾಗಿದ್ದು, ಸದ್ಯ ಪರಪ್ಪನ ಅಗ್ರಹಾರದಲ್ಲಿ ಜೈಲುವಾಸ ಅನುಭವಿಸುತ್ತಿದ್ದಾರೆ.