ಭಾರತೀಯ ಗಡಿ ರಕ್ಷಣೆಗೆ ಬಂತು ಇಸ್ರೇಲ್ "ಸ್ಪೈಡರ್"!

ಅತೀ ಹೆಚ್ಚು ಅಣ್ವಸ್ತ್ರಗಳಿವೆ ಎಂದು ಆಗಾಗ ಭಾರತವನ್ನು ಬೆದರಿಸುವ ಪ್ರಯತ್ನ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ತನ್ನ ಕಾರ್ಯದ ಮೂಲಕ ಎಚ್ಚರಿಕೆ ನೀಡಿದ್ದು, ತನ್ನ ಗಡಿ ರಕ್ಷಣೆಗೆ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.
ಸ್ಪೈಡರ್ ಕ್ಷಿಪಣಿ ನಿರೋಧಕ ವ್ಯವಸ್ಥೆ
ಸ್ಪೈಡರ್ ಕ್ಷಿಪಣಿ ನಿರೋಧಕ ವ್ಯವಸ್ಥೆ
Updated on

ನವದೆಹಲಿ: ಅತೀ ಹೆಚ್ಚು ಅಣ್ವಸ್ತ್ರಗಳಿವೆ ಎಂದು ಆಗಾಗ ಭಾರತವನ್ನು ಬೆದರಿಸುವ ಪ್ರಯತ್ನ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ತನ್ನ ಕಾರ್ಯದ ಮೂಲಕ ಎಚ್ಚರಿಕೆ ನೀಡಿದ್ದು, ತನ್ನ ಗಡಿ ರಕ್ಷಣೆಗೆ ಅತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ.

ಇಸ್ರೇಲ್ ಸೇನಾಪಡೆಯಲ್ಲೇ ಪ್ರಬಲ ಕ್ಷಿಪಣಿ ನಿರೋಧಕ ವ್ಯವಸ್ಥೆಯಾಗಿರುವ ಸ್ಪೈಡರ್ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಭಾರತ ಖರೀದಿಸಿದ್ದು, ಇದನ್ನು ಇಂಡೋ-ಪಾಕ್ ಗಡಿಯಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಿಯೋಜಿಸಲಿದೆ.  ಭಾರತೀಯ ವಾಯುಪಡೆ ಮತ್ತು ಇಸ್ರೇಲ್​ನ ರಾಫೆಲ್ ಮತ್ತು ಇಸ್ರೇಲ್ ಏರ್​ಕ್ರಾಫ್ಟ್ ಇಂಡಸ್ಟ್ರೀಸ್(ಐಎಐ)ನೊಂದಿಗೆ 2008ರಲ್ಲೇ ಒಪ್ಪಂದವಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಈ ಅತ್ಯಾಧುನಿಕ ಸ್ಪೈಡರ್ ಏರ್ ಡಿಫೆನ್ಸ್  ವ್ಯವಸ್ಥೆಯನ್ನು ಭಾರತ ತನ್ನ ಗಡಿಯ ಆಯಕಟ್ಟಿನ ಪ್ರದೇಶದಲ್ಲಿ ನಿಯೋಜಿಸಲಿದೆ. ವಾಯುಮಾರ್ಗದಲ್ಲಿ ಪಾಕಿಸ್ತಾನ ಸೇನೆ ನಡೆಸುವ ಯಾವುದೇ ರೀತಿಯ ದಾಳಿಯನ್ನು ಸ್ಪೈಡರ್ಸ ಕ್ಷಿಪಣಿ ವ್ಯವಸ್ಥೆ ವಾಯುಮಾರ್ಗದಲ್ಲೇ ಧ್ವಂಸ  ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಭಾರತೀಯ ವಾಯುಪಡೆ ಹಾಗೂ ಇಸ್ರೇಲ್​ನ ರಾಫೆಲ್ ಮತ್ತು ಇಸ್ರೇಲ್ ಏರ್​ಕ್ರಾಫ್ಟ್ ಇಂಡಸ್ಟ್ರೀಸ್(ಐಎಐ)ನೊಂದಿಗೆ  ಒಪ್ಪಂದದ ಅನ್ವಯ ಭಾರತಕ್ಕೆ 3-4 ವರ್ಷಗಳೊಳಗಾಗಿ ಐಎಐ ಕ್ಷಿಪಣಿಗಳನ್ನು ಇಸ್ರೇಲ್ ಸರಬರಾಜು  ಮಾಡಬೇಕಿತ್ತು. ಆದರೆ ಕ್ಷಿಪಣಿಗಳನ್ನು ಹೊತ್ತು ತರಬಲ್ಲ ಟೆಟ್ರಾ ಟ್ರಕ್​'ಗಳ ಅಲಭ್ಯತೆಯಿಂದಾಗಿ ಕ್ಷಿಪಣಿಗಳನ್ನು ಭಾರತಕ್ಕೆ ಸಾಗಿಸಲು ವಿಳಂಬವಾಯಿತು ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ. ಕೇವಲ ಸ್ಪೈಡರ್  ಮಾತ್ರವಲ್ಲದೇ ಭಾರತೀಯ ವಾಯುಪಡೆಯು ಸ್ಪೈಡರ್ ಗಿಂತಲೂ ಶಕ್ತಿಶಾಲಿಯಾದ ಎಂಆರ್​ಎಸ್​ಎಎಂ (Medium Range surface-to-Air Missile) ಕ್ಷಿಪಣಿಯನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.  ಸ್ಪೈಡರ್​'ಗಿಂತಲೂ ಬಲಶಾಲಿಯಾದ ಎಂಆರ್​ಸ್ಎಎಂ ಕ್ಷಿಪಣಿಗಳು 50-70 ಕಿ.ಮೀ. ವ್ಯಾಪ್ತಿಯಲ್ಲಿನ ಗುರಿ ತಲುಪುವ ಸಾಮರ್ಥ್ಯ ಹೊಂದಿವೆ. ಇದಲ್ಲದೆ ಭಾರತೀಯ ವಾಯುಪಡೆಯು ರಷ್ಯಾದಿಂದ ಎಸ್ 400 ಕ್ಷಿಪಣಿಗಳನ್ನೂ  ಆಮದು ಮಾಡಿಕೊಳ್ಳುವ ಸಾಧ್ಯತೆ ಇದ್ದು, ಈ ಎಸ್ 400 ಕ್ಷಿಪಣಿಗಳು 400 ಕಿ.ಮೀ. ವ್ಯಾಪ್ತಿಯಲ್ಲಿನ ಡ್ರೋಣ್, ವಿಮಾನಗಳನ್ನು ಧ್ವಂಸ ಮಾಡುವ ಶಕ್ತಿ ಹೊಂದಿದೆ.

ಏನಿದು ಸ್ಪೈಡರ್?
ಸ್ಪೈಡರ್ ಕ್ಷಿಪಣಿ ವ್ಯವಸ್ಥೆ ಏರ್ ಡಿಫೆನ್ಸ್ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಆಕಾಶ ಮಾರ್ಗದಲ್ಲಿ ಬರುವ ಶತ್ರುರಾಷ್ಟ್ರದ ಯಾವುದೇ ವಿಮಾನಗಳು, ಖಂಡಾಂತರ ಕ್ಷಿಪಣಿಗಳು, ವಿಚಕ್ಷಣಾ ಯುದ್ಧ ವಿಮಾನಗಳು ಅಥವಾ ಡ್ರೋಣ್​ಗಳನ್ನು ಕ್ಷಣ  ಮಾತ್ರದಲ್ಲಿ ಪತ್ತೆ ಮಾಡಿ ಹೊಡೆದುರುಳಿಸುತ್ತದೆ. ಆ ಮೂಲಕ ವಾಯುಮಾರ್ಗದಲ್ಲಿ ನಡೆಯ ಬಹುದಾದ ಯಾವುದೇ ಅತಿಕ್ರಮಣವನ್ನು ಸ್ಪೈಡರ್ ಕ್ಷಿಪಣಿ ಸುಲಭವಾಗಿ ಪತ್ತೆ ಮಾಡಿ, ವಿಫಲಗೊಳಿಸುತ್ತದೆ. ಈ ಸ್ಪೈಡರ್ ಕ್ಷಿಪಣಿಗಳು  ಸುಮಾರು 20 ರಿಂದ 9000 ಮೀಟರ್'​ಗಳ ಎತ್ತರದವರೆಗೆ 15 ಕಿ.ಮೀ. ವ್ಯಾಪ್ತಿಯಲ್ಲಿ ಹಾರುವ ಶತ್ರುದೇಶದ ಯಾವುದೇ ವಿಮಾನ ಅಥವಾ ಕ್ಷಿಪಣಿಯನ್ನು ಕ್ಷಣ ಮಾತ್ರಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. ಇಸ್ರೇಲ್​ನಲ್ಲಿ  ತಯಾರಾಗಿರುವ ಅತ್ಯಂತ ಸಮರ್ಥ ಖಂಡಾಂತರ ಕ್ಷಿಪಣಿ (ಎಎಎಂ) ಪೈಥಾನ್-5ನ್ನು ಸ್ಪೈಡರ್​ನಲ್ಲಿ ಅಳವಡಿಸಲಾಗಿದೆ. ಡರ್ಬಿ ಎಂಬ ರಾಡಾರ್ ಮೂಲಕ ಶತ್ರುರಾಷ್ಟ್ರದ ವಿಮಾನ ಅಥವಾ ಕ್ಷಿಪಣಿಯನ್ನು ಪತ್ತೆ ಮಾಡಲಾಗುತ್ತದೆ.  ಪೈಥಾನ್- 5 ನೆರವಿನಿಂದ ಇವುಗಳನ್ನು ಧ್ವಂಸ ಮಾಡಲಾಗುತ್ತದೆ.

ಸ್ಪೈಡರ್ ಗೆ ಭಾರತದ ಆಕಾಶ್ ಸಾಥ್
ಇನ್ನು ದೇಶೀಯವಾಗಿ ನಿರ್ವಿುತವಾಗಿರುವ ಆಕಾಶ್ ಕ್ಷಿಪಣಿಯನ್ನೂ ಸ್ಪೈಡರ್​ನೊಂದಿಗೆ ಭಾರತೀಯ ವಾಯುಪಡೆ ಗಡಿ ರಕ್ಷಣೆಗಾಗಿ ಬಳಸಿಕೊಳ್ಳಲಿದೆ. ಸ್ಪೈಡರ್ 15 ಕಿ.ಮೀ. ದೂರದವರೆಗೆ ಹಾರಬಲ್ಲ ಕ್ಷಿಪಣಿಯಾದರೆ, ಆಕಾಶ್ 25  ಕಿ.ಮೀ. ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತದೆ. ಆಕಾಶ್ ಖಂಡಾಂತರ ಕ್ಷಿಪಣಿಯಾಗಿದ್ದು, ಸ್ಪೈಡರ್ ಕ್ಷಿಪಣಿಯನ್ನು ಯುದ್ಧ ವಿಮಾನಗಳಿಂದಲೂ ಉಡಾಯಿಸಬಹುದು. ಸ್ಪೈಡರ್ ಮತ್ತು ಆಕಾಶ್​'ಗಳೆರಡೂ ಎಲ್ಲ ಹವಾಮಾನಗಳಿಗೂ  ಹೊಂದಿಕೊಂಡು ಸ್ವಯಂಚಾಲಿತವಾಗಿ ಕೆಲಸ ಮಾಡಬಲ್ಲವು. ಅಂತೆಯೇ ಸ್ಪೈಡರ್ ಮತ್ತು ಆಕಾಶ್ ಕ್ಷಿಪಣಿಗಳು ವಿಮಾನ, ಡ್ರೋಣ್ ​ನಂಥ ಮಾನವರಹಿತ ಯುದ್ಧ ವಿಮಾನ, ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸುವ  ಸಾಮರ್ಥ್ಯವನ್ನು ಹೊಂದಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com