
ನವದೆಹಲಿ: ಬಿಸಿಸಿಐ ಮತ್ತು ಲೋಧಾ ಸಮಿತಿ ನಡುವಿನ ಹೋರಾಟದಲ್ಲಿ ಕ್ರಿಕೆಟ್ ಜಯ ಸಂದಿದೆ ಎಂದು ನ್ಯಾಯಮೂರ್ತಿ ಲೋಧಾ ಅಭಿಪ್ರಾಯಪಟ್ಟಿದ್ದಾರೆ.
ಅತ್ತ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಲೋಧಾ ಸಮಿತಿ ಶಿಫಾರಸ್ಸನ್ನು ಜಾರಿಗೊಳಿಸದ ಹಿನ್ನಲೆಯಲ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ಹಾಗೂ ಬಿಸಿಸಿಐ ಕಾರ್ಯದರ್ಶಿ ಅಜಯ್ ಶಿರ್ಕೆ ಅವರನ್ನು ವಜಾಗೊಳಿಸುತ್ತಿದ್ದಂತೆಯೇ ಇತ್ತ ಸಮಿತಿ ಅಧ್ಯಕ್ಷ ಲೋಧಾ ಅವರು ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಆಡಳಿತಗಾರರು ಇಂದು ಇರುತ್ತಾರೆ, ನಾಳೆ ಹೋಗುತ್ತಾರೆ, ಆದರೆ ಕ್ರೀಡೆ ಶಾಶ್ವತ, ಇದು ಕ್ರೀಡೆಗೆ ಸಂದ ಜಯ ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.
ಅಲ್ಲದೆ ಸುಪ್ರೀ ಕೋರ್ಚ್ ಇದೇ ರೀತಿಯ ನಿಲುವನ್ನು ಇತರೆ ಕ್ರೀಡೆಗಳ ಮೇಲೂ ತೋರಬೇಕು ಎಂದು ಲೋಧಾ ಅಭಿಪ್ರಾಯಪಟ್ಟಿದ್ದಾರೆ.
Advertisement