ಹೆರಿಗೆಯನ್ನು ಫೇಸ್ಬುಕ್ ನಲ್ಲಿ ಪ್ರಸಾರ ಮಾಡಿದ ಲಂಡನ್ ಮಹಿಳೆ

ಸಾಮಾನ್ಯ ಹೆರಿಗೆಯ ಪ್ರಕ್ರಿಯೆಯನ್ನು ಜನರಿಗೆ ತೋರಿಸಲು ಲಂಡನ್ನಿನ ೩೫ ವರ್ಷದ ಮಹಿಳೆ ತನ್ನ ಹೆರಿಗೆಯನ್ನು ಫೇಸ್ಬುಕ್ ನಲ್ಲಿ ೨,೦೦,೦೦೦ ಜನರಿಗೆ ಪ್ರಸಾರ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಲಂಡನ್: ಸಾಮಾನ್ಯ ಹೆರಿಗೆಯ ಪ್ರಕ್ರಿಯೆಯನ್ನು ಜನರಿಗೆ ತೋರಿಸಲು ಲಂಡನ್ನಿನ ೩೫ ವರ್ಷದ ಮಹಿಳೆ ತನ್ನ ಹೆರಿಗೆಯನ್ನು ಫೇಸ್ಬುಕ್ ನಲ್ಲಿ ೨,೦೦,೦೦೦ ಜನರಿಗೆ ಪ್ರಸಾರ ಮಾಡಿದ್ದಾರೆ. 
ದ ಸನ್ ಪತ್ರಿಕೆಯಲ್ಲಿ ಸೋಮವಾರ ಪ್ರಕಟವಾಗಿರುವ ವರದಿಯ ಪ್ರಕಾರ, ಜಾಹಿರಾತು ಏಜೆನ್ಸಿಯಲ್ಲಿ ನಿರ್ದೇಶಕಿಯೂ ಆಗಿರುವ ಸಾರಾ-ಜೇನ್ ಲಂಗ್ಸ್ಟಾರ್ಮ್ ಅವರು ಮನೆಯಲ್ಲಿ ಪಿಜ್ಜಾ ತಿನ್ನುವ ವೇಳೆಯಲ್ಲಿ ಹೆರಿಗೆ ಬೇನೆ ತೀವ್ರವಾಗಿ ಕಾಣಿಸಿಕೊಂಡಿದ್ದು, ಆ ಸಮಯದಲ್ಲಿ ಕ್ಯಾಮರಾ ರೆಕಾರ್ಡಿಂಗ್ ಪ್ರಾರಂಭಿಸಿದ್ದಾರೆ. 
೨೪ ಘಂಟೆಗಳ ಹೆರಿಗೆ ಸಮಯದಲ್ಲಿ, ಅವರು ಕೂಸು ಹುಟ್ಟುವ ಪ್ರಕ್ರಿಯೆ ಬಗ್ಗೆ ಐದು ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. 
"ನಾನು ತಾಯ್ತನದ ಬಗ್ಗೆ ವ್ಲಾಗಿಂಗ್ (ವಿಡಿಯೋ ಬ್ಲಾಗ್) ಮಾಡುತ್ತಿದ್ದೇನೆ ಮತ್ತು ಈ ವರ್ಷದ ನನ್ನ ಹೆರಿಗೆ ಸ್ವಾಭಾವಿಕವಾಗಿ ಸಾಧ್ಯವಾಗುತ್ತಿರುವುದರಿಂದ ನನ್ನ ಹೆರಿಗೆ ಪ್ರಕ್ರಿಯೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ತಾಯಿಯಾಗುವುದು ನನಗೆ ವರ ಸಿಕ್ಕಂತೆ" ಎಂದಿದ್ದಾರೆ ಲಂಗ್ಸ್ಟಾರ್ಮ್.
ಇತರ ಗರ್ಭಿಣಿ ಮಹಿಳೆಯರಿಗೆ ಹೆರಿಗೆ ಪ್ರಕ್ರಿಯೆಯನ್ನು ತೋರಿಸುವ ಇರಾದೆ ತಮಗಿತ್ತು ಎಂದು ಲಂಗ್ಸ್ಟಾರ್ಮ್ ಹೇಳಿದ್ದಾರೆ. 
ಕೂಸಿಗೆ ಲಂಗ್ಸ್ಟಾರ್ಮ್ ಅವರು ಎವೆಲಿನ್ ಎಂದು ನಾಮಕರಣ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com