ತಮಿಳುನಾಡು ಸರ್ಕಾರದ 'ಜಲ್ಲಿಕಟ್ಟು ಕಾಯ್ದೆ' ಪ್ರಶ್ನಿಸಿ ಮತ್ತೆ ಸುಪ್ರೀಂ ಮೊರೆ!

ಜಲ್ಲಿಕಟ್ಟು ಕ್ರೀಡೆ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದ್ದ ತಮಿಳುನಾಡು ಸರ್ಕಾರದ ನೂತನ ಜಲ್ಲಿಕಟ್ಟು ಕಾಯ್ದೆಯನ್ನು ಪ್ರಶ್ನೆಸಿ ಪ್ರಾಣಿ ದಯಾ ಸಂಘಟನೆಗಳು ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಜಲ್ಲಿಕಟ್ಟು ಕ್ರೀಡೆ ಮೇಲೆ ಹೇರಲಾಗಿದ್ದ ನಿಷೇಧವನ್ನು ತೆರವುಗೊಳಿಸಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರಲಾಗಿದ್ದ ತಮಿಳುನಾಡು ಸರ್ಕಾರದ ನೂತನ ಜಲ್ಲಿಕಟ್ಟು ಕಾಯ್ದೆಯನ್ನು ಪ್ರಶ್ನೆಸಿ ಪ್ರಾಣಿ ದಯಾ ಸಂಘಟನೆಗಳು  ಮತ್ತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿವೆ.

ಪ್ರಾಣಿ ಕಲ್ಯಾಣ ಮಂಡಳಿ ಸಮಿತಿ ಸದಸ್ಯರು ಇಂದು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದು, ತಮಿಳುನಾಡು ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಅರ್ಜಿ ಸ್ವೀಕರಿಸಿರುವ ಸುಪ್ರೀಂ ಕೋರ್ಟ್ ಈ ಅರ್ಜಿ  ಸೇರಿದಂತೆ ವಿವಿಧ ಪ್ರಾಣ ದಯಾ ಸಂಘಟನೆಗಳು ಸಲ್ಲಿಸಿದ್ದ ಎಲ್ಲ ಅರ್ಜಿಗಳ ವಿಚಾರಣೆಯನ್ನು ಜನವರಿ 30ರಂದು ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲ್ಲಿಕಟ್ಟು ನಿಷೇಧ ಸಂಬಂಧ ಸುಪ್ರೀಂ  ಕೋರ್ಟ್ ಗೆ ಈ ವರೆಗೂ ಸುಮಾರು 70 ಕೇವಿಯಟ್ ಅರ್ಜಿಗಳು ಸಲ್ಲಿಕೆಯಾಗಿದ್ದವು.

ಇತ್ತೀಚೆಗಷ್ಟೇ ಕೇಂದ್ರದ ಮೂಲಕ ಸುಗ್ರೀವಾಜ್ಞೆ ಹೊರಡಿಸಿದ್ದ ತಮಿಳುನಾಡು ಸರ್ಕಾರ ಜಲ್ಲಿಕಟ್ಟು ಕ್ರೀಡೆಯ ಮೇಲಿನ ನಿಷೇಧ ತೆರವುಗೊಳಿಸಿ, ಹೊಸ ಕಾನೂನು ರಚಿಸಿ ಅದಕ್ಕೆ ತಮಿಳುನಾಡು ವಿಧಾನಸಭೆಯ ಅನುಮೋದನೆ  ಕೂಡ ಪಡೆದಿತ್ತು. ಆ ಮೂಲಕ ಜಲ್ಲಿಕಟ್ಟು ಆಚರಣೆ ಮೇಲಿದ್ದ ನಿಷೇಧವನ್ನು ಪನ್ನೀರ್ ಸೆಲ್ವಂ ಸರ್ಕಾರ ತಾತ್ಕಾಲಿಕವಾಗಿ ದೂರ ಮಾಡಿತ್ತು. ಅಂತೆಯೇ ಮರೀನಾ ಬೀಚ್ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರ  ಮೂಲಕ ಚದುರಿಸುವ ಪ್ರಯತ್ನವನ್ನು ಕೂಡ ತಮಿಳುನಾಡು ಸರ್ಕಾರ ಮಾಡಿತ್ತು. ಆದರೆ ಈ ಪ್ರಯತ್ನ ಇದೀಗ ಹಿಂಸಾಚಾರಕ್ಕೆ ತಿರುಗಿ ಹತ್ತಾರು ವಾಹನಗಳು ಬೆಂಕಿಗಾಹುತಿಯಾಗಿದ್ದವು. ಅಲ್ಲದೆ ಸುಮಾರು 35ಕ್ಕೂ ಅಧಿಕ ನಾಗರಿಕರು  ಗಾಯಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com