ನೇತಾಜಿ ಸಾವಿನ ಬಗ್ಗೆ ಆರ್ ಟಿ ಐ ಮಾಹಿತಿ: ಆಘಾತ ವ್ಯಕ್ತ ಪಡಿಸಿದ ಮಮತಾ ಬ್ಯಾನರ್ಜಿ

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಆರ್ ಟಿಐ ನೀಡಿರುವ ಮಾಹಿತಿ ತುಂಬಾ ಆಘಾತವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ..
ಮಮತಾ ಬ್ಯಾನರ್ಜಿ
ಮಮತಾ ಬ್ಯಾನರ್ಜಿ
Updated on
ಕೊಲ್ಕೋತಾ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿನ ಬಗ್ಗೆ ಆರ್ ಟಿಐ ನೀಡಿರುವ ಮಾಹಿತಿ ತುಂಬಾ ಆಘಾತವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನೇತಾಜಿ ಈ ಮಣ್ಣಿನ ಮಗ, ನಮ್ಮ ರಾಜ್ಯ ಹಾಗೂ ನಮ್ಮ ದೇಶ ಮತ್ತು ಪ್ರಪಂಚಕ್ಕೆ ಹೆಮ್ಮೆಯ ವ್ಯಕ್ತಿ. ಹೀಗಿರುವಾಗ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಏಕಪಶ್ರೀಯ ನಿರ್ಧಾರದಿಂದ ನನಗೆ ಆಘಾತವಾಗಿದೆ ಎಂದು ತಮ್ಮ ಫೇಸ್ ಬುಕ್ ನಲ್ಲಿ ಮಮತಾ ಪೋಸ್ಟ್ ಹಾಕಿದ್ದಾರೆ.
ಈ ವಿಷಯ ಸಂಬಂಧ ನಾನು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ಅವರ ಗಮನ ಸೆಳೆಯಲು ಬಯಸುತ್ತೇನೆ. ಅದನ್ನು ಇಲ್ಲಿ ನಿಮ್ಮ ಜೊತೆ ನಾನು ಹಂಚಿಕೊಳ್ಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ನೇತಾಜಿ ಸುಭಾಷ್ ಚಂದ್ರ ಬೋಸ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಸಾವನ್ನಪ್ಪಿದ್ದಾರೆ ಹೇಳಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com