ಭಾರತದಲ್ಲಿ ಓದುವ ಆಂದೋಲನ ಪ್ರಾರಂಭಿಸಲು ಮೋದಿ ಕರೆ

ದೇಶದಾದ್ಯಂತ ಓದುವ ಮತ್ತು ಗ್ರಂಥಾಲಯ ಆಂದೋಲನ ಪ್ರಾರಂಭವಾಗಬೇಕು ಎಂದು ಕರೆ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಜನರನ್ನು ಅಕ್ಷರಸ್ಥರನ್ನಾಗಿಸುವುದಷ್ಟೇ ಅಲ್ಲ ಅದು ಸಾಮಾಜಿಕ ಮತ್ತು ಆರ್ಥಿಕ
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
ಕೊಚ್ಚಿ: ದೇಶದಾದ್ಯಂತ ಓದುವ ಮತ್ತು ಗ್ರಂಥಾಲಯ ಆಂದೋಲನ ಪ್ರಾರಂಭವಾಗಬೇಕು ಎಂದು ಕರೆ ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, ಜನರನ್ನು ಅಕ್ಷರಸ್ಥರನ್ನಾಗಿಸುವುದಷ್ಟೇ ಅಲ್ಲ ಅದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ತರುವಂತಾಗಬೇಕು ಎಂದಿದ್ದಾರೆ. 
ಪಿ ಎನ್ ಪಣಿಕ್ಕರ್ ರಾಷ್ಟ್ರೀಯ ಓದುವ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದ ಮೋದಿ ಭಾರತೀಯ ಸಾರ್ವಜನಿಕ ಗ್ರಂಥಾಲಯ ಆದೋಲನ ದೆಹಲಿ ಸಹಯೋಗದೊಂದಿಗೆ ಕೇರಳದಾದ್ಯಂತ ೧೮ ಸಾರ್ವಜನಿಕ ಗ್ರಂಥಾಲಯಗಳನ್ನು ಸ್ಥಾಪಿಸುವತ್ತ ಪಣಿಕ್ಕರ್ ಫೌಂಡೇಶನ್ ಹೆಜ್ಜೆ ಇಟ್ಟಿದೆ ಎಂದು ಕೂಡ ತಿಳಿಸಿದ್ದಾರೆ. 
"ದೇಶದಾದ್ಯಂತ ಇಂತಹ ಓದುವ ಮತ್ತು ಗ್ರಂಥಾಲಯ ಆಂದೋಲನವನ್ನು ನಾನು ನೋಡುವಂತಾಗಬೇಕು. ಇದು ಜನರನ್ನು ಅಕ್ಷರಸ್ಥರನ್ನಾಗಿಸಲು ಮಾತ್ರ ಸೀಮಿತವಾಗಬಾರದು. ಇದು ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಯನ್ನು ತರುವ ಗುರಿ ಹೊಂದಿರಬೇಕು. ಒಳ್ಳೆಯ ಸಮಾಜದ ಭವ್ಯ ಕಟ್ಟಡಕ್ಕೆ ಒಳ್ಳೆಯ ಜ್ಞಾನದ ಅಡಿಪಾಯ ಮುಖ್ಯ" ಎಂದು ಅವರು ಹೇಳಿದ್ದಾರೆ. 
ಉಪನಿಷತ್ತುಗಳ ಕಾಲದಿಂದಲೂ ಜ್ಞಾನವುಳ್ಳ ವ್ಯಕ್ತಿಗಳನ್ನು ಗೌರವಿಸಲಾಗುತ್ತಿದೆ ಎಂದು ಕೂಡ ಪ್ರಧಾನಿ ಹೇಳಿದ್ದಾರೆ.
"ಸಾಕ್ಷರತೆಯಲ್ಲಿ ಕೇರಳ ರಾಷ್ಟ್ರಕ್ಕೆ ಮಾದರಿಯಾಗಿದೆ" ಎಂದು ಕೂಡ ಅವರು ಹೇಳಿದ್ದು ಯುವಕರು ಹೆಚ್ಚೆಚ್ಚು ಓದಬೇಕು ಎಂದು ಕೂಡ ಮೋದಿ ಹೇಳಿದ್ದಾರೆ. 
ಕೇರಳದಲ್ಲಿ ಗ್ರಂಥಾಲಯ ಆಂದೋಲನದ ಪಿತಾಮಹ ಎಂದೇ ಪಣಿಕ್ಕರ್ ಅವರನ್ನು ಪರಿಗಣಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com