ಪರಿಕರ್ ರಾಜಿನಾಮೆ: ಅರುಣ್ ಜೇಟ್ಲಿ ಹೆಗಲಿಗೆ ರಕ್ಷಣಾ ಸಚಿವಾಲಯದ ಜವಾಬ್ದಾರಿ

ತೀವ್ರ ಕುತೂಹಲ ಕೆರಳಿಸಿದ್ದ ಗೋವಾ ವಿಧಾನಸಭೆ ಸರ್ಕಾರ ರಚನೆ ಕಸರತ್ತು ವಿವಾದ ಅಂತ್ಯವಾಗಿದ್ದು, ಮೈತ್ರಿ ಸರ್ಕಾರ ಮಾಡಲು ಬಿಜೆಪಿ ಮುಂದಾಗಿರುವಂತೆಯೇ ಪರಿಕರ್ ಅವರ ರಾಜಿನಾಮೆಯಿಂದ ತೆರವಾಗಿರುವ ಕೇಂದ್ರ ರಕ್ಷಣಾ ಸಚಿವಾಲಯದ ಜವಾಬ್ದಾರಿಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ನೀಡಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಗೋವಾ ವಿಧಾನಸಭೆ ಸರ್ಕಾರ ರಚನೆ ಕಸರತ್ತು ವಿವಾದ ಅಂತ್ಯವಾಗಿದ್ದು, ಮೈತ್ರಿ ಸರ್ಕಾರ ಮಾಡಲು ಬಿಜೆಪಿ ಮುಂದಾಗಿರುವಂತೆಯೇ ಪರಿಕರ್ ಅವರ ರಾಜಿನಾಮೆಯಿಂದ  ತೆರವಾಗಿರುವ ಕೇಂದ್ರ ರಕ್ಷಣಾ ಸಚಿವಾಲಯದ ಜವಾಬ್ದಾರಿಯನ್ನು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರಿಗೆ ನೀಡಲಾಗಿದೆ.

ಪ್ರಸ್ತುತ ವಿತ್ತ ಸಚಿವಾಲಯದ ಜವಾಬ್ದಾರಿ ಹೊಂದಿರುವ ಅರುಣ್ ಜೇಟ್ಲಿ ಅವರಿಗೆ ಹೆಚ್ಚುವರಿಯಾಗಿ ಈ ಹೊಣೆಗಾರಿಕೆಯನ್ನು ನೀಡಲಾಗಿದೆ. ಮುಂದಿನ ಆಯ್ಕೆಯವರೆಗೂ ಜೇಟ್ಲಿ ಅವರೇ ರಕ್ಷಣಾ ಇಲಾಖೆಯನ್ನು ನಿಭಾಯಿಸಲಿದ್ದಾರೆ  ಎಂದು ಮೂಲಗಳು ತಿಳಿಸಿವೆ.

ಇನ್ನು ಈ ಹಿಂದೆ ಗೋವಾ ಸಿಎಂ ಆಗಿದ್ದ ಮನೋಹರ್ ಪರಿಕ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬುಲಾವ್ ಮೇರೆಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿ ಕೇಂದ್ರ ರಕ್ಷಣಾ ಸಚಿವರಾಗಿ ಪ್ರಮಾಣ ವಚನ  ಸ್ವೀಕರಿಸಿದ್ದರು. ಬಳಿಕ ರಕ್ಷಣಾ ಇಲಾಖೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದ ಪರಿಕ್ಕರ್ ಅವರು, ಮತ್ತೆ ರಾಜ್ಯ ರಾಜಕಾರಣದತ್ತ ಮರಳು ಇಂಗಿತ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಗೋವಾ ವಿಧಾನಸಭಾ ಚುನಾವಣೆ  ಘೋಷಣೆಯಾಗಿ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಕ್ಕೂ ಸ್ಪಷ್ಟಬಹುಮತ ಸಿಗದ ಹಿನ್ನಲೆಯಲ್ಲಿ ಇತರೆ ಪಕ್ಷಗಳೊಂದಿಗೆ ಕೈ ಜೋಡಿಸಿರುವ ಬಿಜೆಪಿ ಮತ್ತೆ ಅಧಿಕಾರ ರಚನೆಗೆ ಮುಂದಾಗಿದೆ.

ಹೀಗಾಗಿ ಗೋವಾದಲ್ಲಿ ಪ್ರಭಾವಿ ನಾಯಕರಾಗಿರುವ ಮನೋಹರ್ ಪರಿಕ್ಕರ್ ಅವರು ಕೇಂದ್ರ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೆ ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com