ಗೂಗಲ್ ಡೂಡಲ್ ಚಿತ್ರ
ಪ್ರಧಾನ ಸುದ್ದಿ
ವಿಶೇಷ ಡೂಡಲ್ ಮೂಲಕ ವಿಶ್ವತಾಯಂದಿರ ದಿನ ಆಚರಿಸಿದ ಗೂಗಲ್!
ಹಲವು ವಿಶೇಷ ದಿನಗಳನ್ನು ತನ್ನ ವಿಶೇಷ ಡೂಡಲ್ ಮೂಲಕ ನೆನಪಿಸುವ ಗೂಗಲ್ ಸಂಸ್ಥೆ ಇದೀಗ ವಿಶ್ವ ತಾಯಂದಿರ ದಿನವನ್ನು ವಿಶೇಷ ಡೂಡಲ್ ಬಿಡಿಸುವ ಮೂಲಕ ಆಚರಣೆ ಮಾಡಿದೆ.
ನವದೆಹಲಿ: ಹಲವು ವಿಶೇಷ ದಿನಗಳನ್ನು ತನ್ನ ವಿಶೇಷ ಡೂಡಲ್ ಮೂಲಕ ನೆನಪಿಸುವ ಗೂಗಲ್ ಸಂಸ್ಥೆ ಇದೀಗ ವಿಶ್ವ ತಾಯಂದಿರ ದಿನವನ್ನು ವಿಶೇಷ ಡೂಡಲ್ ಬಿಡಿಸುವ ಮೂಲಕ ಆಚರಣೆ ಮಾಡಿದೆ.
ಪ್ರತೀ ವರ್ಷದ ಮೇ ತಿಂಗಳ 2ನೇ ಭಾನುವಾರವನ್ನು ತಾಯಂದಿರ ದಿನವಾಗಿ ಆಚರಣೆ ಮಾಡಲಾಗುತ್ತಿದ್ದು, ಗೂಗಲ್ ಕೂಡ ವಿಶೇಷ ಡೂಡಲ್ ಬಿಡಿಸುವ ಮೂಲಕ ತಾಯಂದಿರ ದಿನವನ್ನು ಆಚರಿಸಿದೆ. 6 ಚಿತ್ರಗಳಲ್ಲಿ ಗರ್ಭಿಣಿ ಪಾಪಸ್ ಕಳ್ಳಿ ಗಿಡ ಹೇಗೆ ತನ್ನ ಮಗು ಮರಿ ಪಾಪಸ್ ಕಳ್ಳಿ ಗಿಡವನ್ನು ಹೊತ್ತು-ಹೆತ್ತು ಸಾಗುತ್ತದೆ ಎಂಬುದನ್ನು ವಿಶೇಷವಾಗಿ ಬಿಡಿಸುವ ಮೂಲಕ ವಿಶ್ವ ತಾಯಂದಿರ ದಿನವನ್ನು ಗೂಗಲ್ ಆಚರಣೆ ಮಾಡಿದೆ.
ಈ ಹಿಂದೆ ಡಾ.ರಾಜ್ ಕುಮಾರ್ ಅವರ ಜನ್ಮ ದಿನವನ್ನು ವಿಶೇಷವಾಗಿ ಡೂಡಲ್ ಮೂಲಕ ಗೂಗಲ್ ನೆನಪಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ