ಚೆನ್ನೈನಲ್ಲಿ 45 ಕೋಟಿ ರುಪಾಯಿ ಮೌಲ್ಯದ ನಿಷೇಧಿತ ನೋಟು ಜಪ್ತಿ

ವೃತ್ತಿಯಲ್ಲಿ ವಕೀಲ ಹಾಗೂ ವ್ಯಾಪಾರಿಯಾಗಿರುವ ವ್ಯಕ್ತಿಯೊಬ್ಪರ ಅಂಗಡಿಯಲ್ಲಿ ಚೆನ್ನೈ ಪೊಲೀಸರು ಗುರುವಾರ ಬರೊಬ್ಬರಿ....
ಜಪ್ತಿಯಾದ ನೋಟು
ಜಪ್ತಿಯಾದ ನೋಟು
ಚೆನ್ನೈ: ವೃತ್ತಿಯಲ್ಲಿ ವಕೀಲ ಹಾಗೂ ವ್ಯಾಪಾರಿಯಾಗಿರುವ ವ್ಯಕ್ತಿಯೊಬ್ಪರ ಅಂಗಡಿಯಲ್ಲಿ ಚೆನ್ನೈ ಪೊಲೀಸರು ಗುರುವಾರ ಬರೊಬ್ಬರಿ 45 ಕೋಟಿ ರುಪಾಯಿ ಮೌಲ್ಯದ ನಿಷೇಧ ನೋಟುಗಳನ್ನು ಜಪ್ತಿ ಮಾಡಿದ್ದಾರೆ.
ಕೊಡಬಕ್ಕಾಮ್ ನ ಝಕಾರಿಯಾ ಕಾಲೋನಿಯ ಎರಡನೇ ರಸ್ತೆಯಲ್ಲಿರುವ ಅಂಗಡಿ-ಮನೆಯಲ್ಲಿದ್ದ 1,000 ಹಾಗೂ 500 ರುಪಾಯಿ ಮುಖಬೆಲೆಯ ನೋಟ್ ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಪೊಲೀಸರು ಇಂದು ಶಾಲಾ ಸಮವಸ್ತ್ರ ವ್ಯಾಪಾರಿ ಧಂಡಪಾಣಿ ಮನೆ ಮೇಲೆ ದಾಳಿ ಮಾಡಿ 45 ಕೋಟಿ ರುಪಾಯಿ ನಿಷೇಧಿತ ನೋಟು ಜಪ್ತಿ ಮಾಡಿದ್ದಾರೆ. ಅಲ್ಲದೆ ಧಂಡಪಾಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಚಾರಣೆ ವೇಳೆ, ಹಣ ಸುರಕ್ಷಿತವಾಗಿಟ್ಟುಕೊಳ್ಳುವಂತೆ ಮತ್ತೊಬ್ಬ ವ್ಯಕ್ತಿ ತನಗೆ ನೀಡಿರುವುದಾಗಿ ಧಂಡಪಾಣಿ ಹೇಳಿದ್ದಾನೆ. ಈ ಕುರಿತು ಪೊಲೀಸರು ಆದಾಯ ತೆರಿಗೆ ಇಲಾಖೆ ಹಾಗೂ ಜಾರಿ ನಿರ್ದೇಶನಾಲಯಕ್ಕೂ ಮಾಹಿತಿ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com