ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಭಯೋತ್ಪಾದನೆ ವಿರುದ್ಧ ಪ್ರತೀಕಾರ ದಾಳಿ; ಭಾರತೀಯ ಸೇನೆಯಿಂದ ಪಾಕಿಸ್ತಾನ ಸೇನಾ ನೆಲೆಗಳ ನಾಶ

ಪಾಕಿಸ್ತಾನ ಪ್ರೇರೇಪಿತ ಭಯೋತ್ಪಾದನಾ ಕೃತ್ಯಗಳಿಗೆ ಪ್ರತೀಕಾರವಾಗಿ ಗಡಿನಿಯಂತ್ರಣ ರೇಖೆಯಲ್ಲಿ ದಾಳಿ ನಡೆಸಿದ ಭಾರತೀಯ ಸೇನೆ ನೌಶೇರಾ ಸೆಕ್ಟರ್ ನ ಪಾಕಿಸ್ತಾನದ ಹಲವು ಸೇನಾ ನೆಲೆಗಳಿಗೆ...
ನವದೆಹಲಿ: ಪಾಕಿಸ್ತಾನ ಪ್ರೇರೇಪಿತ ಭಯೋತ್ಪಾದನಾ ಕೃತ್ಯಗಳಿಗೆ ಪ್ರತೀಕಾರವಾಗಿ ಗಡಿನಿಯಂತ್ರಣ ರೇಖೆಯಲ್ಲಿ ದಾಳಿ ನಡೆಸಿದ ಭಾರತೀಯ ಸೇನೆ ಪಾಕಿಸ್ತಾನದ ನೌಶೇರಾ ಸೆಕ್ಟರ್ ನ ಹಲವು ಸೇನಾ ನೆಲೆಗಳಿಗೆ ಹಾನಿಯುಂಟುಮಾಡಿದೆ. ಈ ಸ್ಥಳದಿಂದ ಉಗ್ರರು ನುಸುಳಲು ಪಾಕಿಸ್ತಾನ ಅನುವುಮಾಡಿಕೊಡುತ್ತಿತ್ತು. 
ಈ ದಾಳಿಯ ನಿಖರವಾದ ಸಮಯವನ್ನು ತಿಳಿಸದ ಮೇಜರ್ ಜನರಲ್ ಅಶೋಕ್ ನರುಲಾ, ಸೇನೆಯ ಈ ಕ್ರಮ ಪಾಕಿಸ್ತಾನದ ನೆಲೆಗಳಲ್ಲಿ ಭಾರಿ ಹಾನಿಯುಂಟು ಮಾಡಿದೆ ಎಂದಿದ್ದಾರೆ. 
ಭಾರತೀಯ ಸೇನೆ ನಡೆಸಿದ ಫಿರಂಗಿ ದಾಳಿಗೆ ಪಾಕಿಸ್ತಾನಿ ಸೇನೆಯ ಬಂಕರ್ ಗಳು ಕೂಡ ಹಾನಿಗೊಂಡಿವೆ ಎಂದು ತಿಳಿಯಲಾಗಿದೆ. 
ಪಾಕಿಸ್ತಾನ ಸೇನೆ ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರು ನುಸುಳಲು ಸಹಕರಿಸುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ಎತ್ತರದ ಸ್ಥಾನಗಳಲ್ಲಿ ಹಿಮ ಕರಗುವುದರಿಂದ ಇದು ಹೆಚ್ಚಳಗೊಳ್ಳಲಿದೆ ಎನ್ನಲಾಗಿದೆ. 
"ಗಡಿ ನಿಯಂತ್ರಣ ರೇಖೆಯಲ್ಲಿ ನುಸುಳುವಿಕೆಯನ್ನು ತಡೆಗಟ್ಟುವ ಭಯೋತ್ಪಾದಕ ವಿರೋಧಿ ತಂತ್ರಗಾರಿಕೆಯ ಭಾಗವಾಗಿ ಈ ದಾಳಿ ನಡೆದಿದೆ" ಎಂದು ಮೇಜರ್ ಜನರಲ್ ನರುಲಾ ಹೇಳಿದ್ದಾರೆ. 
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ, ವಿಷೇಧ ಕಮಾಂಡೋ ಪಡೆಗಳು ನಿರ್ಧಿಷ್ಟ ದಾಳಿ ನಡೆಸಿ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ ಒಂಭತ್ತು ತಿಂಗಳ ನಂತರ ಈಗ ಭಾರತೀಯ ಸೇನೆ ಪಾಕಿಸ್ತಾನದ ನೆಲದ ಮೇಲೆ ಈ ದಾಳಿ ನಡಿಸಿದೆ. 

Related Stories

No stories found.

Advertisement

X
Kannada Prabha
www.kannadaprabha.com