ಡೋಕ್ಲಾಮದಲ್ಲಿ ಕಟ್ಟಡ ಕಾಮಗಾರಿ ಕೆಲಸ ಸಮರ್ಥಿಸಿಕೊಂಡ ಚೀನಾ

ವಿವಾದಿತ ಗಡಿ ಪ್ರದೇಶ ಡೋಕ್ಲಾಮ್ ದಲ್ಲಿ ಬೃಹತ್ ಪ್ರಮಾಣದ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಚೀನಾ ಸಮರ್ಥಿಸಿಕೊಂಡಿದೆ.
ಡೋಕ್ಲಾಮ ಪ್ರದೇಶದಲ್ಲಿ ಚೀನಾ ಸೇನೆ ಸಾಂದರ್ಭಿಕ ಚಿತ್ರ
ಡೋಕ್ಲಾಮ ಪ್ರದೇಶದಲ್ಲಿ ಚೀನಾ ಸೇನೆ ಸಾಂದರ್ಭಿಕ ಚಿತ್ರ

ಚೀನಾ:ವಿವಾದಿತ ಗಡಿ ಪ್ರದೇಶ ಡೋಕ್ಲಾಮ್ ದಲ್ಲಿ  ಬೃಹತ್ ಪ್ರಮಾಣದ ಕಟ್ಟಡ
ನಿರ್ಮಾಣ ಕಾಮಗಾರಿಯನ್ನು ಚೀನಾ ಸಮರ್ಥಿಸಿಕೊಂಡಿದೆ.

ತನ್ನ ದೇಶದ ಎಲ್ಲೆಯೊಳಗೆ ಸೈನಿಕರು ಹಾಗೂ ಜನರು ನೆಲೆಸಲು ಅನುಕೂಲವಾಗುತಂತೆ ಕಾನೂನುಬದ್ಧವಾಗಿಯೇ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಚೀನಾ  ಇಂದು
ಸ್ಪಷ್ಟಪಡಿಸಿದೆ.ಡೊಕ್ಲಾಮದಲ್ಲಿ  ದೊಡ್ಡದಾದ ಸೇನಾ ಸಂಕೀರ್ಣ ಕಟ್ಟಡವನ್ನು ಚೀನಾ ನಿರ್ಮಿಸುತ್ತಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಚೀನಾ ಈ ಪ್ರತಿಕ್ರಿಯೆ ನೀಡಿದೆ.

ಈ ಸಂಬಂಧಿತ ವರದಿಯನ್ನು ತಾವೂ ನೋಡಿದ್ದೇನೆ. ಇಂತಹ ಪೋಟೋಗಳು ಯಾರೂ ಕೊಟ್ಟರೆಂಬ ಬಗ್ಗೆ ಮಾಹಿತಿ ತಿಳಿದಿಲ್ಲ ಎಂದು ಚೀನಾ ವಿದೇಶಾಂಗ ವ್ಯವಹಾರ ವಕ್ತಾರ ಲು ಕಾಂಗ್ ಹೇಳಿದ್ದಾರೆ.
ಡಾಂಗ್ ಲಾಂಗ್ ( ಡೋಕ್ಲಾಮ)ಪ್ರದೇಶ ಚೀನಾಕ್ಕೆ ಸೇರಿದ್ದು, ಈ ಸಂಬಂಧ ಯಾವುದೇ ವಿವಾದ ಇಲ್ಲ. ಅದು ಚೀನಾದ ಸಾರ್ವಭೌಮತ್ವಕ್ಕೆ ಒಳಪಟ್ಟಿದೆ ಎಂದು ಪ್ರತಿಪಾದಿಸಿದ್ದಾರೆ.


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com