• Tag results for ಸ್ಯಾಂಡಲ್ ವುಡ್

'ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು' ನಾಳೆ ರಾಜ್ಯಾದ್ಯಂತ ಬಿಡುಗಡೆ 

ಅಶೋಕ್ ಕಡಬ ನಿರ್ದೇಶನದ ಸಂಹಿತ ವಿನ್ಯಾ ಪ್ರಧಾನ ಪಾತ್ರದಲ್ಲಿ ಅಭಿನಯಿಸಿರುವ ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು ಚಿತ್ರ ನಾಳೆಯಿಂದ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.

published on : 20th February 2020

ಹಿರಿಯ ನಟ ಕಿಲ್ಲರ್ ವೆಂಕಟೇಶ್ ಗೆ ಅನಾರೋಗ್ಯ, ಕಲಾವಿದನ ಬೆನ್ನಿಗೆ ನಿಂತ ಜಗ್ಗೇಶ್

ಸ್ಯಾಂಡಲ್ ವುಡ್ ಹಿರಿಯ ನಟ ಕಿಲ್ಲರ್ ವೆಂಕಟೇಶ್ ತೀವ್ರ ಅನಾರೋಗ್ಯಕ್ಕೀಡಾಗಿದ್ದಾರೆ. ಕನ್ನಡದಲ್ಲಿ ಇನ್ನೂರೈವತ್ತಕ್ಕೆ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ನಟ ಕಿಲ್ಲರ್ ವೆಂಕಟೇಶ್ ಯಕೃತ್ತು ವೈಫಲ್ಯ (ಲಿವರ್ ವೈಫಲ್ಯ) ದಿಂದ ಬಳಲುತ್ತಿದ್ದಾರೆ. ಸಾವು ಬದುಕಿನ ನಡುವೆ ಹೋರಾಟ ನಡೆಸಿರುವ ಅವರನ್ನು ಸಧ್ಯ ಬೆಂಗಳೂರಿನ ವಿಕ್ಟೋರಿಯಾ ಆಸ್ಪ್ತರೆಗೆ ದಾಖಲಿಸಲಾಗಿದೆ.

published on : 19th February 2020

ಶಿವಾಜಿ ಸುರತ್ಕಲ್ ನಲ್ಲಿ ರಮೇಶ್ ಅರವಿಂದ್ ವರ್ಸನ್ 2. 0 - ನಿರ್ದೇಶಕ ಆಕಾಶ್ ಶ್ರಿವತ್ಸ

ರಣಗಿರಿಯ ರಹಸ್ಯ ಕೊಲೆಗಳ ಸುತ್ತ ಸಾಗುವ ಕಥೆಯುಳ್ಳ ರಮೇಶ್  ಅರವಿಂದ್ ಅವರ ಶಿವಾಜಿ ಸುರತ್ಕಲ್ ಚಿತ್ರ ಫೆಬ್ರವರಿ 21 ರಂದು ತೆರೆಗೆ ಅಪ್ಪಳಿಸಿದೆ.

published on : 18th February 2020

ನಟ ದರ್ಶನ್ ಹುಟ್ಟುಹಬ್ಬದ ಆಯೋಜಕರ ವಿರುದ್ಧ ದೂರು: ಕಾರಣ ಏನು ಗೊತ್ತಾ?

ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬ ಆಯೋಜಕರು ಹಾಗೂ ಅಭಿಮಾನಿಗಳ ವಿರುದ್ಧ ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

published on : 17th February 2020

ಅರ್ಥಪೂರ್ಣ ಹುಟ್ಟುಹಬ್ಬದ ನಡುವೆ ಬೌನ್ಸರ್ ತಲೆಗೆ ಬಾರಿಸಿದ ಡಿ'ಬಾಸ್ '

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಡಿ'ಬಾಸ್' ದರ್ಶನ್  ಸರಳ ಹಾಗೂ ಅರ್ಥಪೂರ್ಣ ರೀತಿಯಲ್ಲಿ ಅಭಿಮಾನಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಇಂದು ತಮ್ಮ 44ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 

published on : 16th February 2020

ನಿರ್ದೇಶಕ ಸೂರಿ, ಚಿತ್ರಕಾರ, ಕಲಾವಿದ ಕೂಡಾ: ಪಾಪ್‌ಕಾರ್ನ್ ಮಂಕಿ ಟೈಗರ್ ಚಿತ್ರತಂಡ

ಪಾಪ್‌ಕಾರ್ನ್ ಮಂಕಿ ಟೈಗರ್ ಎಂಬ ಮತ್ತೊಂದು ಪ್ರಯೋಗಾತ್ಮಕ ಚಿತ್ರವನ್ನು ಸೂರಿ ನಿರ್ದೇಶಿಸುತ್ತಿದ್ದಾರೆ. ಯುವ ಪ್ರತಿಭಾವಂತ ಅಮೃತಾ ಕೆ ಭಾರ್ಗವ್ ಸೇರಿದಂತೆ ಅನೇಕ ಹೊಸ ತಾಂತ್ರಿಕ ತಂಡವನ್ನು ಈ ಸಿನಿಮಾದ ಮೂಲಕ ಸೂರಿ ಪರಿಚಯಿಸಿದ್ದಾರೆ. ಅಮೃತ ಕೆ ಭಾರ್ಗವ್ ಈ ಸಿನಿಮಾಕ್ಕೆ ಚಿತ್ರಕಥೆಯನ್ನು ಬರೆದಿದ್ದಾರೆ.

published on : 13th February 2020

ಫೆ.13ರಂದು ಕರ್ನಾಟಕ ಬಂದ್ ಗೆ ಬೆಂಬಲ ನೀಡದ ಚಿತ್ರರಂಗದ ಧೋರಣೆ ಖಂಡನೀಯ!

ಡಾ.ಸರೋಜಿನಿ ಮಹಿಷಿ ವರದಿ ಜಾರಿಗೊಳಿಸಲು ಅಗ್ರಹಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಕನ್ನಡ ಚಿತ್ರೋದ್ಯಮ ಬೆಂಬಲ ನೀಡದೇ ಇರುವುದನ್ನು ಕನ್ನಡಪರ ಒಕ್ಕೂಟಗಳು ಖಂಡಿಸಿವೆ.

published on : 10th February 2020

ಹಾಸ್ಯ ಕಲಾವಿದರು ಕಲಾಸೇವೆಗೆ ಅವಕಾಶ ಸಿಗದೆ ನರಳುತ್ತಿದ್ದಾರೆ: ಟೆನಿಸ್‍ ಕೃಷ್ಣ 

ವಿಶಿಷ್ಟ ಮ್ಯಾನರಿಸಂ, ಸಂಭಾಷಣಾ ವೈಖರಿಯಿಂದಲೇ ಅಭಿಮಾನಿಗಳನ್ನು ರಂಜಿಸುವ 'ನಂಜಪ್ಪನ್ ಮಗ ಗುಂಜಪ್'ಪ ಟೆನಿಸ್‍ ಕೃಷ್ಣ ಇತ್ತೀಚೆಗೆ ಕೊಂಚ ಬಿಝಿಯಾಗಿದ್ದಾರೆ ಎರಡು ವರ್ಷಗಳ ಹಿಂದೆ ಸಿನಿಮಾಗಳಲ್ಲಿ ಅವಕಾಶವೇ ಇಲ್ಲದೆ ತಮ್ಮ ಪಾಡಿಗೆ ತಾವಿದ್ದ ಟೆನ್ನಿಸ್ ಕೃಷ್ಣ ಕೈಯಲ್ಲಿ ಈ ವರ್ಷ 8 ರಿಂದ 10 ಚಿತ್ರಗಳಿವೆಯಂತೆ

published on : 7th February 2020

'ಮತ್ತೆ ಉದ್ಭವ' ನನ್ನ ಸಿನಿಮಾ ವೃತ್ತಿ ಜೀವನದಲ್ಲಿಯೇ ಅತ್ಯಂತ ತೃಪ್ತಿ ನೀಡಿದ ಚಿತ್ರ: ಕೊಡ್ಲು ರಾಮಕೃಷ್ಣ

ಉದ್ಭವ ಸಿನಿಮಾ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. 91ರ ದಶದಲ್ಲಿಯೇ ಹೊಸ ಕಲ್ಪನೆಯೊಂದಿಗೆ ಬಂದ ಉದ್ಭವ ಎಲ್ಲರ ಮನಸ್ಸಿನೊಳಗೆ ಕುಳಿತುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಚಿತ್ರದಲ್ಲಿ ಅನಂತ್ ನಾಗ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು. ಅದ್ಭುತ...

published on : 6th February 2020

ವಿಶೇಷ ಹೋಮಕ್ಕೆ ಮೊರೆ ಹೋದ ರಾಕಿಂಗ್ ಸ್ಟಾರ್

ನಟ ಯಶ್ ಹಾಗೂ ರಾಧಿಕಾ ಪಂಡಿತ್ ಕುಟುಂಬದವರು ನಗರದ ಮಲ್ಲೇಶ್ವರಂನ ಪ್ರಸಿದ್ಧ ರಾಧಾ ಕೃಷ್ಣ ದೇವಾಲಯದಲ್ಲಿ ವಿಶೇಷ ಹೋಮ ಮಾಡಿಸಿದ್ದಾರೆ. 

published on : 1st February 2020

ಏಪ್ರಿಲ್ ನಲ್ಲಿ ಬಾಕ್ಸ್ ಆಫೀಸ್ ನಲ್ಲಿ ಭಾರಿ ಪೈಪೋಟಿ?

ಏಪ್ರಿಲ್ ತಿಂಗಳಲ್ಲಿ ಬಿಗ್  ಸ್ಟಾರ್ ಸಿನಿಮಾಗಳು ತೆರೆ ಮೇಲೆ ಬರುತ್ತಿದ್ದು, ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಭಾರಿ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ

published on : 29th January 2020

ಬೆಂಗಳೂರು: ಆಶ್ರಮದ ಮಕ್ಕಳಿಗೆ ಹಾಸಿಗೆ ಒದಗಿಸಿದ ನಟ ಚೇತನ್ ಕುಮಾರ್, ಮೇಘ!

ಸ್ಟಾರ್ ಗಳ ಮದುವೆ ಎಂದರೆ  ಅದ್ದೂರಿ, ಅಡಂಬರ ಸರ್ವೇ ಸಾಮಾನ್ಯ. ಆದರೆ, ಇದೇ ಭಾನುವಾರ  ದಾಂಪತ್ಯ ಜೀವನಕ್ಕೆ ಕಾಲಿಡಲಿರುವ  ಆ ದಿನಗಳು ಖ್ಯಾತಿಯ ಚೇತನ್ ಕುಮಾರ್ ಹಾಗೂ ಮೇಘ ಅವರ ವಿವಾಹ ಕಾರ್ಯಕ್ರಮದ ಸಿದ್ಧತೆಗಳು ಸರಳತೆಯಿಂದ ಗಮನ ಸೆಳೆಯುತ್ತಿವೆ.

published on : 29th January 2020

ಡಾರ್ಲಿಂಗ್ ಕೃಷ್ಣನ ಹೇರ್ ಕಟ್ ಮಾಡಿಸಿದ್ಯಾಕೆ ಮಿಲನ ನಾಗರಾಜ್?

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ ‘ಲವ್ ಮಾಕ್‍ಟೇಲ್’ ಚಿತ್ರ ಇದೇ ಶುಕ್ರವಾರ ತೆರೆಗೆ ಬರಲಿದೆ   

published on : 28th January 2020

ಬೆಳ್ಳಿಪರದೆ ಮೇಲೆ ಟಿಪ್ಪು ಸುಲ್ತಾನ್ ಜೀವನಗಾಥೆ!

 ಮೈಸೂರು ಹುಲಿ ಟಿಪ್ಪು ಸುಲ್ತಾನ್ ಕುರಿತು ತಪ್ಪು ಕಲ್ಪನೆಗಳನ್ನು ನಿವಾರಿಸುವ ಉದ್ದೇಶದಿಂದ ಟಿಪ್ಪು ಜೀವನ ಆಧರಿತ ಅದ್ದೂರಿ ಚಿತ್ರ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ಅಹಿಂದ ಮುಖಂಡ ಹಾಗೂ ಇತಿಹಾಸ ತಜ್ಞ ಪ್ರೊ.ಎನ್.ವಿ. ನರಸಿಂಹಯ್ಯ ತಿಳಿಸಿದ್ದಾರೆ.

published on : 28th January 2020

ರಾಬರ್ಟ್' ಚಿತ್ರದಲ್ಲಿ ಐಶ್ವರ್ಯ ಪ್ರಸಾದ್ ಪ್ರಮುಖ ಪಾತ್ರ

 ಪಡ್ಡೆ ಹುಲಿ ಹಾಗೂ ಹಾರರ್ ಸಿನಿಮಾ ಶಾರ್ದೂಲದ ನಂತರ ಸ್ವಲ್ಪ ವಿರಾಮ ಪಡೆದುಕೊಂಡಿದ್ದ ನಟಿ ಐಶ್ವರ್ಯ ಪ್ರಸಾದ್ ಇದೀಗ ತರುಣ್ ಕಿಶೋರ್ ಸುಧೀರ್ ನಿರ್ದೇಶನದ, ದರ್ಶನ್ ನಾಯಕ ನಟನಾಗಿರುವ ರಾಬರ್ಟ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

published on : 27th January 2020
1 2 3 4 5 6 >