• Tag results for COVID-19

ದೇಶದಲ್ಲಿ 46 ಕೋಟಿ ಡೋಸ್ ದಾಟಿದ ಕೋವಿಡ್-19 ಲಸಿಕೆ ನೀಡಿಕೆ ಪ್ರಮಾಣ- ಕೇಂದ್ರ ಸರ್ಕಾರ

ದೇಶದಲ್ಲಿ ನೀಡಲಾಗಿರುವ ಕೋವಿಡ್-19 ಲಸಿಕೆ ಪ್ರಮಾಣ 46 ಕೋಟಿ ಡೋಸ್ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ. ಸಂಜೆ 7 ಗಂಟೆಯ ತಾತ್ಕಾಲಿಕ ವರದಿಯ ಪ್ರಕಾರ, ಶುಕ್ರವಾರ 44,38,901 ಡೋಸ್ ಲಸಿಕೆ ನೀಡಲಾಗಿದೆ.

published on : 30th July 2021

ರಾಜ್ಯದಲ್ಲಿ ಕೊರೋನಾದಿಂದ ಇಂದು 34 ಸಾವು: 1890 ಹೊಸ ಪ್ರಕರಣ ಪತ್ತೆ, 1631 ಚೇತರಿಕೆ

ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 1890 ಹೊಸ ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 2903137ಕ್ಕೆ ಏರಿಕೆಯಾಗಿದೆ. 

published on : 30th July 2021

ರಾಜ್ಯದಲ್ಲಿ 16,673 ಸೇರಿ ದೇಶದಲ್ಲಿ ಸುಮಾರು 2.27 ಲಕ್ಷ ಗರ್ಭೀಣಿಯರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ- ಕೇಂದ್ರ

ಮಹತ್ವದ ಬೆಳವಣಿಗೆಯೊಂದರಲ್ಲಿ ಸದ್ಯ ನಡೆಯುತ್ತಿರುವ ರಾಷ್ಟ್ರೀಯ ಕೋವಿಡ್ ಲಸಿಕಾ ಅಭಿಯಾನದಡಿ ಕರ್ನಾಟಕದಲ್ಲಿ ಸುಮಾರು 16,673 ಗರ್ಭೀಣಿಯರು ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

published on : 30th July 2021

ಮೊದಲ ಡೋಸ್ ಕೋವಿಡ್-19 ಲಸಿಕೆ ಪಡೆದ ರಾಹುಲ್ ಗಾಂಧಿ

ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಮೊದಲ ಡೋಸ್ ಕೋವಿಡ್-19 ಲಸಿಕೆ ಪಡೆದಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎನ್ ಐ ಸುದ್ದಿಸಂಸ್ಥೆ ವರದಿ ಮಾಡಿದೆ.

published on : 30th July 2021

ಕೋವಿಡ್-19: ಆಗಸ್ಟ್ 31ರ ವರೆಗೆ ಅಂತರಾಷ್ಟ್ರೀಯ ಪ್ರಯಾಣಿಕ ವಿಮಾನ ನಿರ್ಬಂಧ ಮುಂದುವರಿಕೆ

ಮಹಾಮಾರಿ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಅಂತರಾಷ್ಟ್ರೀಯ ವಿಮಾನ ಸೇವೆ ಸ್ಥಗಿತಗೊಳಿಸಲಾಗಿದ್ದು, ಇದೀಗ ಅದನ್ನು ಆಗಸ್ಟ್ 31ರವರೆಗೆ ವಿಸ್ತರಿಸಲಾಗಿದೆ. 

published on : 30th July 2021

ಶ್ರೀಲಂಕಾ ತೊರೆದ ಭಾರತ ತಂಡ: ಕ್ವಾರಂಟೈನ್‌ನಲ್ಲೇ ಉಳಿದ ಕೃಣಾಲ್ ಪಾಂಡ್ಯ, ಚಹಲ್, ಕೆ ಗೌತಮ್

ಶ್ರೀಲಂಕಾ ವಿರುದ್ಧ ಏಕದಿನ ಮತ್ತು ಟಿ–20 ಪಂದ್ಯಗಳ ಸರಣಿ ಮುಕ್ತಾಯದ ಹಿನ್ನಲೆಯಲ್ಲಿ ಭಾರತ ಕ್ರಿಕೆಟ್ ತಂಡ ತವರಿಗೆ ವಾಪಸ್ ಆಗಿದೆ.

published on : 30th July 2021

ಶ್ರೀಲಂಕಾ ಪ್ರವಾಸ: ಭಾರತದ ಕ್ರಿಕೆಟಿಗರಾದ ಯಜುವೇಂದ್ರ ಚಹಲ್, ಕೆ ಗೌತಮ್ ಗೆ ಕೊರೋನಾ ಸೋಂಕು

ಶ್ರೀಲಂಕಾ ಕ್ರಿಕೆಟ್ ಪ್ರವಾಸಕ್ಕೆ ತೆರಳಿದ್ದ ಟೀಂ ಇಂಡಿಯಾ ಆಟಗಾರರಾದ  ಯಜುವೇಂದ್ರ ಚಹಲ್, ಕೆ ಗೌತಮ್ ಅವರೂ ಕೂಡ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ ಎಂದು ತಿಳಿದುಬಂದಿದೆ.

published on : 30th July 2021

ಕೋವಿಡ್ ರೋಗಿಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆ

ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಕೊರೋನಾವೈರಸ್ ರೋಗಿಗಳಲ್ಲಿ ಕೂದಲು ಉದುರುವಿಕೆ ಸಮಸ್ಯೆಗಳಲ್ಲಿ ಶೇ. 100 ರಷ್ಟು ಏರಿಕೆ ಕಂಡುಬಂದಿದೆ ಎಂದು ವೈದ್ಯರು ಗುರುವಾರ ತಿಳಿಸಿದ್ದಾರೆ.

published on : 29th July 2021

ತುರ್ತು ಬಳಕೆ ಅನುಮೋದನೆ ತಿರಸ್ಕರಿಸಿದ ಬೆನ್ನಲ್ಲೇ ‘ಕೋವ್ಯಾಕ್ಸಿನ್‌’ ಆಮದು ರದ್ದುಪಡಿಸಿದ ಬ್ರೆಜಿಲ್‌

ಭಾರತ್‌ ಬಯೊಟೆಕ್‌ನ ಕೋವಿಡ್-19 ಲಸಿಕೆ ‘ಕೋವ್ಯಾಕ್ಸಿನ್‌’ಗೆ ತುರ್ತು ಬಳಕೆ ಅನುಮೋದನೆ ತಿರಸ್ಕರಿಸಿದ ಬೆನ್ನಲ್ಲೇ ಬ್ರೆಜಿಲ್ ಸರ್ಕಾರ ಲಸಿಕೆ ಆಮದನ್ನು ಕೂಡ ರದ್ದುಗೊಳಿಸಿದೆ,

published on : 29th July 2021

ಕೋವಿಡ್-19: ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಳ; 2 ದಿನ ಸಂಪೂರ್ಣ ಲಾಕ್ ಡೌನ್!

ಕೇರಳದಲ್ಲಿ ಮಾರಕ ಕೊರೋನಾ ವೈರಸ್ ಸೋಂಕು ಅಬ್ಬರ ಮುಂದುವರೆದಿದ್ದು, ಸೋಂಕಿತರ ಪ್ರಮಾಣ ಗಣನೀಯವಾಗಿ ಹೆಚ್ಚಳವಾದ ಹಿನ್ನಲೆಯಲ್ಲಿ 2 ದಿನ ಸಂಪೂರ್ಣ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

published on : 29th July 2021

ಭಾರತದ ಕೋವಿಡ್-19 ಲಸಿಕೆ ಕಾರ್ಯಕ್ರಮಕ್ಕೆ ಅಮೆರಿಕ 25 ಮಿಲಿಯನ್ ಡಾಲರ್ ಆರ್ಥಿಕ ನೆರವು ಘೋಷಣೆ!

ಭಾರತದ ಕೋವಿಡ್-19 ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ 25 ಮಿಲಿಯನ್ ಡಾಲರ್ ಆರ್ಥಿಕ ನೆರವು ಒದಗಿಸುವುದಾಗಿ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಪ್ರಕಟಿಸಿದ್ದಾರೆ.

published on : 29th July 2021

ದೇಶದಲ್ಲಿ ಸುಮಾರು 45 ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಿಕೆ- ಕೇಂದ್ರ ಸರ್ಕಾರ

ದೇಶದಲ್ಲಿ ನೀಡಲಾಗಿರುವ ಒಟ್ಟು ಕೋವಿಡ್-19 ಲಸಿಕೆ ಪ್ರಮಾಣವು 45 ಕೋಟಿ ದಾಟಿದೆ. 18 ರಿಂದ 44 ವರ್ಷದೊಳಗಿನವರು 15.38 ಕೋಟಿಗೂ  ಹೆಚ್ಚಿನ ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.

published on : 29th July 2021

ಕೋವಿಡ್-19 ಸೋಂಕಿತರ ಸಂಖ್ಯೆ ಗಣನೀಯ ಏರಿಕೆ; ಇಂದು ದೇಶಾದ್ಯಂತ 43,654 ಹೊಸ ಪ್ರಕರಣಗಳು ಪತ್ತೆ, 640 ಮಂದಿ ಸಾವು

ಭಾರತದಲ್ಲಿ 2ನೇ ಅಲೆ ಬಳಿಕ ಇಳಿಕೆಯಾಗಿದ್ದ ಮಹಾಮಾರಿ ಕೊರೋನಾ ವೈರಸ್ ಆರ್ಭಟ ಇದೀಗ ಕ್ರಮೇಣ ಏರಿಕೆಯಾಗುತ್ತಿದ್ದು, ದೇಶದಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಗೆ ಅಂತ್ಯವಾದ 24 ಗಂಟೆಗಳ ಅವಧಿಯಲ್ಲಿ 43,654 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಪತ್ತೆಯಾಗಿದೆ.

published on : 28th July 2021

ಕೊರೋನಾ ಸೋಂಕು: ಲಂಕಾ ಸರಣಿಯಿಂದ ಕೃಣಾಲ್ ಪಾಂಡ್ಯ ಔಟ್, ಸಂಪರ್ಕಿತರ ಪರೀಕ್ಷೆ ನೆಗೆಟಿವ್ ಬಂದರೂ ಮೈದಾನಕ್ಕಿಳಿಯುವಂತಿಲ್ಲ!

ಭಾರತ ಮತ್ತು ಶ್ರೀಲಂಕಾ ಸರಣಿ ಮೇಲೆ ಕೋವಿಡ್ ಭೀತಿ ಎದುರಾಗಿದ್ದು, ಆಲ್ ರೌಂಡರ್ ಕೃಣಾಲ್ ಪಾಂಡ್ಯ ಸೋಂಕಿಗೆ ತುತ್ತಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.

published on : 28th July 2021

ಕೋವಿಡ್ -19 ಎರಡನೇ ಅಲೆ ವೇಳೆ ಆಕ್ಸಿಜನ್ ಕೊರತೆಯಿಂದ ನೂರಾರು ಜನರ ಸಾವು- ಬಿಜೆಪಿ ಶಾಸಕ

ಕೋವಿಡ್-19 ಎರಡನೇ ಅಲೆ ವೇಳೆಯಲ್ಲಿ ಆಕ್ಸಿಜನ್ ಕೊರತೆಯಿಂದ ನೂರಾರು ಜನರು ಸಾವನ್ನಪ್ಪಿರುವುದಾಗಿ ಉತ್ತರ ಪ್ರದೇಶದ ಬಿಜೆಪಿಯ ಶಾಸಕರೊಬ್ಬರು ಹೇಳಿದ್ದಾರೆ.

published on : 28th July 2021
1 2 3 4 5 6 >