• Tag results for Congress

ಭಾರತ ವಿಶ್ವದ ರೇಪ್ ರಾಜಧಾನಿ: ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ

ಹೈದರಾಬಾದ್ ನಲ್ಲಿ ಅತ್ಯಾಚಾರಿಗಳಿಗೆ ಗುಂಡಿಕ್ಕಿ ಪೊಲೀಸರು ಎನ್ ಕೌಂಟರ್ ಮಾಡಿದ್ದು ಇದರ ಬೆನ್ನಲ್ಲೇ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಭಾರತ ವಿಶ್ವದ ರೇಪ್ ರಾಜಧಾನಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

published on : 7th December 2019

ಉತ್ತರ ಪ್ರದೇಶ ದೇಶದ 'ಅತ್ಯಾಚಾರ ರಾಜಧಾನಿ'- ಕಾಂಗ್ರೆಸ್

ಉತ್ತರ ಪ್ರದೇಶ ದೇಶದ ಅತ್ಯಾಚಾರದ ರಾಜಧಾನಿಯಾಗುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್ , ಉನ್ನಾವೋ ಪ್ರಕರಣದ ಆರೋಪಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

published on : 7th December 2019

ನಾನು ಬಿಡುವುದಿಲ್ಲ; ಕನಕಪುರಕ್ಕೆ ಮತ್ತೆ ವೈದ್ಯಕೀಯ ಕಾಲೇಜಿಗೆ ಆಗ್ರಹಿಸಿ ಬಿಎಸ್‌ವೈಗೆ ಶಿವಕುಮಾರ್ ಪತ್ರ

ಮೈತ್ರಿ ಸರ್ಕಾರದಲ್ಲಿ ರಾಮನಗರ ಜಿಲ್ಲೆಯ ಕನಕಪುರಕ್ಕೆ ಮಂಜೂರಾಗಿದ್ದ ವೈದ್ಯಕೀಯ ಕಾಲೇಜನ್ನು ರದ್ದುಪಡಿಸಿರುವ ಸರ್ಕಾರದ ಅದೇಶವನ್ನು ಹಿಂತೆಗೆದುಕೊಂಡು ಕನಕಪುರದಲ್ಲೇ ಕಾಲೇಜು ಸ್ಥಾಪನೆಗೆ ಮರು ಆದೇಶ ಹೊರಡಿಸಬೇಕೆಂದು ಆಗ್ರಹಿಸಿ ಮಾಜಿ ಸಚಿವ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

published on : 7th December 2019

ಉಪಚುನಾವಣೆ: ಸೋಲು-ಗೆಲುವಿನ ಲೆಕ್ಕಾಚಾರದ ನಡುವೆಯೇ ಹೆಚ್ಚಿದ ಬೆಟ್ಟಿಂಗ್ ಭರಾಟೆ

ಉಪಚುನಾವಣೆ ಅಂತ್ಯಗೊಳ್ಳುತ್ತಿದ್ದಂತೆಯೇ ಒಂದೆಡೆ ಸೋಲು ಗೆಲುವಿನ ಲೆಕ್ಕಾಚಾರ ನಡೆಯುತ್ತಿದ್ದು, ಮತ್ತೊಂದೆಡೆ ಬೆಟ್ಟಿಂಗ್ ಭರಾಟೆ ಜೋರಾಗಿದೆ. 

published on : 7th December 2019

ಉಪಚುನಾವಣೆ: ಫಲಿತಾಂಶ ಕುರಿತು ಆತಂಕ, ಸ್ವಯಂಪ್ರೇರಿತ ಚುನಾವಣೋತ್ತರ ಸಮೀಕ್ಷೆಗೆ ಮುಂದಾದ ಪಕ್ಷಗಳು

ಉಪಚುನಾವಣೆ ಮತದಾನ ಅಂತ್ಯಗೊಂಡ ಬಳಿಕ ಇದೀಗ ಫಲಿತಾಂಶ ಕುರಿತು ರಾಜ್ಯದ ಮೂರು ಪ್ರಮುಖ ಪಕ್ಷಗಳಲ್ಲಿ ಆತಂಕ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಚುನಾವಣೋತ್ತರ ಸಮೀಕ್ಷೆ ನಡೆಸಲು ಪಕ್ಷಗಳು ಮುಂದಾಗಿವೆ ಎಂದು ವರದಿಗಳುತ ತಿಳಿಸಿವೆ. 

published on : 7th December 2019

ಇರಾನಿ ವಿರುದ್ಧ ಕಾಂಗ್ರೆಸ್ ಸದಸ್ಯರಿಂದ ಅಶಿಸ್ತು ಪ್ರದರ್ಶನ: ಸೋಮವಾರಕ್ಕೆ ಲೋಕಸಭೆ ಕಲಾಪ ಮುಂದೂಡಿಕೆ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮøತಿ ಇರಾನಿ ಅವರ ವಿರುದ್ಧ ಅಶಿಸ್ತು ಪ್ರದರ್ಶಿಸಿದ ಕೇರಳದ ಇಬ್ಬರು ಕಾಂಗ್ರೆಸ್ ಸಂಸದರು ಬೇಷರತ್ ಕ್ಷಮೆ ಕೋರಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಪಟ್ಟು ಹಿಡಿದಿದ್ದರಿಂದ ಲೋಕಸಭೆ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗಿದೆ.

published on : 6th December 2019

ಒಂದೆಡೆ ರಾಮ ಮಂದಿರ ನಿರ್ಮಾಣ, ಇನ್ನೊಂದೆಡೆ ಸೀತೆಗೆ ಬೆಂಕಿ: ಕಲಾಪದಿಂದ ಹೊರನಡೆದ ಕಾಂಗ್ರೆಸ್ ಸದಸ್ಯರು 

ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಮೇಲೆ ಆರೋಪಿಗಳು ಬೆಂಕಿ ಹಚ್ಚಿಸಿದ ಘಟನೆಯನ್ನು ವಿರೋಧಿಸಿ ಸರ್ಕಾರ ಸೂಕ್ತ ರಕ್ಷಣೆ ನೀಡುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಸಂಸದರು ಶುಕ್ರವಾರ ಲೋಕಸಭೆಯಲ್ಲಿ ಕಲಾಪ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.   

published on : 6th December 2019

ಆಡಳಿತಾರೂಢ ಬಿಜೆಪಿ ಸರ್ಕಾರದ ವಿಶ್ವಾಸ ಹೆಚ್ಚಿಸಿದ ಉಪಚುನಾವಣಾ ಸಮರ

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ಭವಿಷ್ಯವನ್ನು ನಿರ್ಧರಿಸಬಲ್ಲ ಶಕ್ತಿ ಹೊಂದಿರುವ ರಾಜ್ಯದ 15 ವಿಧಾನಸಬಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇದು ಬಿಜೆಪಿಯ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ. 

published on : 6th December 2019

ಪಿ. ಚಿದಂಬರಂ ಜಾಮೀನು ಷರತ್ತು ಉಲ್ಲಂಘಿಸಿದ್ದಾರೆ: ಪ್ರಕಾಶ್ ಜಾವಡೇಕರ್

ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಈರುಳ್ಳಿ ಬೆಲೆ ಏರಿಕೆ ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸುವ ಮೂಲಕ ತಮ್ಮ ಜಾಮೀನಿನ ಷರತ್ತನ್ನು ಉಲ್ಲಂಘಿಸಿದ್ದಾರೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸರಣಾ ಸಚಿವ ಪ್ರಕಾಶ್ ಜಾವಡೇಕರ್ ಆರೋಪಿಸಿದ್ದಾರೆ.

published on : 5th December 2019

ಕೆಆರ್ ಪೇಟೆಯಲ್ಲಿ ಬಿರುಸಿನ ಮತದಾನ: ಕೈ ಅಭ್ಯರ್ಥಿ ಪತ್ನಿಯನ್ನು ವಾಪಸ್ ಕಳುಹಿಸಿದ ಅಧಿಕಾರಿಗಳು!

ಉಪಚುನಾವಣೆ ಎದುರಿಸುತ್ತಿರುವ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಪೈಕಿ ಇರುವ ಕೆಆರ್ ಪೇಟೆಯಲ್ಲಿ ಮತದಾನ ಬಿರುಸಿನಿಂದ ನಡೆಯುತ್ತಿದ್ದು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಭ್ಯರ್ಥಿಗಳು ಮತದಾನ ಮಾಡಿದ್ದಾರೆ. 

published on : 5th December 2019

'ಕಾಫಿ ಕುಡಿಯಲು ಕರೆದುಕೊಂಡು ಹೋಗಿ ಬಿಜೆಪಿ ಸೇರಿಸಿಬಿಟ್ರು'

ಉಪಚುನಾವಣೆ  ಹೊತ್ತಲ್ಲೇ ಕಾಂಗ್ರೆಸ್​ ತೊರೆದು ಬಿಜೆಪಿ ಸೇರಿದ್ದ ಬಿಬಿಎಂಪಿ ಕಾರ್ಪೊರೇಟರ್​​ ವಸಂತ್​ಕುಮಾರ್​ ಇಂದು ಮತ್ತೆ ಮಾತೃ ಪಕ್ಷಕ್ಕೆ ವಾಪಸ್ಸಾಗಿದ್ದಾರೆ. 

published on : 5th December 2019

ನಾನು ದಲಿತ ನಾಯಕನಲ್ಲ, ಕಾಂಗ್ರೆಸ್ ಮ್ಯಾನ್: ಖರ್ಗೆ

ತಮ್ಮನ್ನು ದಲಿತ ದಲಿತರ ಮುಖಂಡ ಎಂದು ಕರೆಯುತ್ತಿರುವುದಕ್ಕೆ ಮಾಜಿ ಸಂಸದ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ದಲಿತರ ನಾಯಕ ಎನ್ನಬೇಡಿ ಒಬ್ಬ 'ಕಾಂಗ್ರೆಸ್ ಮನ್' , ಕಾಂಗ್ರೆಸ್ ಕಾರ್ಯಕರ್ತ ಎಂದು ಹೇಳಿ ಎಂದಿದ್ದಾರೆ.

published on : 5th December 2019

ಬಿಜೆಪಿಗೆ ಸೇರಿದ ಬೆನ್ನಲ್ಲೇ ಕಾಂಗ್ರೆಸ್ ಗೆ ಮರಳಿದ ಕಾರ್ಪೊರೇಟರ್ ವಸಂತ್ ಕುಮಾರ್ 

ಎರಡು ದಿನಗಳ ಹಿಂದಷ್ಟೇ ಭಾರತೀಯ ಜನತಾ ಪಾರ್ಟಿ ಸೇರ್ಪಡೆಯಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ಆರ್ ವಸಂತ್ ಕುಮಾರ್ ಕಾಂಗ್ರೆಸ್ ಗೆ ಮರು ಸೇರ್ಪಡೆಯಾಗಿದ್ದಾರೆ.

published on : 5th December 2019

ಉಪ ಸಮರ: ಮತದಾರರ ಪ್ರಮಾಣದಿಂದ ಅಭ್ಯರ್ಥಿಗಳ ಅದೃಷ್ಟ ಹೆಚ್ಚಳ

ಬಹುನಿರೀಕ್ಷಿತ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆ ಆರಂಭಗೊಂಡಿದ್ದು, ಈ ಉಪಚುನಾವಣೆ ಮೂರು ಪಕ್ಷಗಳ ಹಣೆಬರಹವನ್ನು ಬರೆಯಲಿದೆ. ಮತದಾರರ ಪ್ರಮಾಣ ಹೆಚ್ಚಾದಷ್ಟು ಅಭ್ಯರ್ಥಿಗಳ ಅದೃಷ್ಟ ಹೆಚ್ಚಾಗಲಿದ್ದು, ಈ ಹಿನ್ನಲೆಯಲ್ಲಿ ಮತದಾರರನ್ನು ಮತಕ್ಷೇತ್ರಕ್ಕೆ ಕರೆತರುವುದು ಮೂರೂ ಪಕ್ಷಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 

published on : 5th December 2019

ಉಪ ಚುನಾವಣೆ: ಮತ್ತೆ ಹಳೆ ಮೈತ್ರಿಗೆ ದೇವೇಗೌಡರು ಕಿಂಗ್ ಮೇಕರ್ ಹೇಗೆ ಮತ್ತು ಏಕೆ? 

ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ರಾಜಕೀಯವಾಗಿ ಇರುವುದು ಸಮಾನ ಬಯಕೆ, ಅದು ಫೀನಿಕ್ಸ್ ನಂತೆ ಎದ್ದುಬಂದು ರಾಜಕೀಯವಾಗಿ ಮತ್ತೆ ಭವಿಷ್ಯ ಕಂಡುಕೊಳ್ಳುವುದು. ಈ ಬಾರಿಯ 15 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲು ಯತ್ನಿಸಿದರೂ ಕೂಡ ಎರಡೂ ಪಕ್ಷಗಳು ಬಹುವಾಗಿ ನೆಚ್ಚಿಕೊಂಡಿರುವುದು ಒಬ್ಬ ವ್ಯಕ್ತಿಯನ್ನು ಅದು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ.

published on : 5th December 2019
1 2 3 4 5 6 >