• Tag results for Covid-19

ಕರ್ನಾಟಕದಲ್ಲಿ ಕೋವಿಡ್ ಲಸಿಕೆಗೆ ಕೊರತೆಯಿಲ್ಲ: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ 

ಕೋವಿಡ್-19 ಪ್ರಕರಣಗಳು ಕರ್ನಾಟಕದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ರೋಗಿಗಳಿಗೆ ಸಾಕಷ್ಟು ಆಮ್ಲಜನಕ ಮತ್ತು ಅಗತ್ಯ ಸೋಂಕು ನಿವಾರಕ ಔಷಧಿ ರೆಮೆಡೆಸಿವಿರ್ ನ್ನು ಪೂರೈಸಲು ಸರ್ವಸನ್ನದ್ಧವಾಗಿದೆ.

published on : 15th April 2021

ಕೋವಿಡ್ ಎರಡನೇ ಅಲೆ: ದೇಶಾದ್ಯಂತ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ, ಆಮ್ಲಜನಕ, ರಿಮೆಡೆಸಿವಿರ್ ಪೂರೈಕೆ ಸಮಸ್ಯೆ 

ಗುಜರಾತ್ ನ ಅಹಮದಾಬಾದ್ ನ ಕೋವಿಡ್-19 ಆಸ್ಪತ್ರೆಯ ಹೊರಗೆ ಆಂಬ್ಯುಲೆನ್ಸ್ ಗಳ ಸಾಲುಗಳು ರೋಗಿಗಳನ್ನು ಹೊತ್ತು ನಿಂತಿದ್ದು, ಸೂರತ್ ನ ಜಹಗಿರ್ಪುರ ಚಿತಾಗಾರ ಹೊರಗೆ ಕೋವಿಡ್ ಸೌಲಭ್ಯ ಇರುವ ವಾಹನಗಳು ಸರದಿ ಸಾಲಿನಲ್ಲಿ ನಿಂತಿದ್ದು ಆ ರಾಜ್ಯದಲ್ಲಿನ ಕೋವಿಡ್ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟಿಕೊಡುತ್ತದೆ.

published on : 15th April 2021

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದೇ ದಿನ 17, 282 ಹೊಸ ಕೋವಿಡ್-19 ಪ್ರಕರಣಗಳು ದೃಢ, 100 ಸಾವು

ಬುಧವಾರ ದೆಹಲಿಯಲ್ಲಿ 17,282 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಸಾಂಕ್ರಾಮಿಕ ಪ್ರಾರಂಭದ ನಂತರ ರಾಷ್ಟ್ರ ರಾಜಧಾನಿಯಲ್ಲಿ ಅತ್ಯಧಿಕ ಹೆಚ್ಚಿನ ಸಂಖ್ಯೆಯ ಸೋಂಕು ಪ್ರಕರಣಗಳು ಕಂಡುಬಂದಿದ್ದು, 100  ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

published on : 15th April 2021

ಉತ್ತರ ಪ್ರದೇಶ ಸರ್ಕಾರ ಕೊರೋನಾ ವೈರಸ್ ಸಂಖ್ಯೆಯನ್ನು ಮರೆಮಾಚುತ್ತಿದೆ- ಪ್ರಿಯಾಂಕಾ ಆರೋಪ

ಉತ್ತರ ಪ್ರದೇಶ ಸರ್ಕಾರ ಕೊರೋನಾ ಪ್ರಕರಣಗಳ ಸಂಖ್ಯೆಯನ್ನು ಮರೆಮಾಚುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಬುಧವಾರ ಆರೋಪಿಸಿದ್ದಾರೆ. ಸರ್ಕಾರ ಮೊದಲಿನಿಂದಲೂ ಜಾಗ್ರತೆ ವಹಿಸಿದ್ದರೆ ಜನರು ಇಂತಹ ಪರಿಸ್ಥಿತಿಯನ್ನು ನೋಡಬೇಕಾಗಿರಲಿಲ್ಲ ಎಂದಿದ್ದಾರೆ. 

published on : 15th April 2021

ರಾಜಸ್ಥಾನದ ಎಲ್ಲಾ ನಗರಗಳಲ್ಲಿ ಶುಕ್ರವಾರದಿಂದ 12 ಗಂಟೆ ಕರ್ಫ್ಯೂ ಜಾರಿ

ಆತಂಕಕಾರಿಯಾಗಿ ಹೆಚ್ಚಾಗಿರುತ್ತಿರುವ ಕೋವಿಡ್-19 ಪ್ರಕರಣಗಳನ್ನು ತಡೆಗಟ್ಟುವ ಕ್ರಮವಾಗಿ ರಾಜಸ್ಥಾನದ ಎಲ್ಲಾ ನಗರಗಳಲ್ಲಿ ಶುಕ್ರವಾರ  ಸಂಜೆ ಆರು ಗಂಟೆಯಿಂದ ಬೆಳಗ್ಗೆ ಆರು ಗಂಟೆಯವರೆಗೂ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಈ ಮಾಸಾಂತ್ಯದವರೆಗೂ ಈ ಕರ್ಫ್ಯೂ ಜಾರಿಯಲ್ಲಿರುತ್ತದೆ. 

published on : 14th April 2021

ಜೈಪುರ ಆಸ್ಪತ್ರೆಯಿಂದ 320 ಡೋಸ್ ಕೋವಾಕ್ಸಿನ್ ಲಸಿಕೆ ನಾಪತ್ತೆ: ಪೊಲೀಸ್ ಕೇಸ್ ದಾಖಲು

ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ 350 ಡೋಸ್ ಕೋವಾಕ್ಸಿನ್ ಲಸಿಕೆ ರಾಜಸ್ಥಾನದ ಜೈಪುರದಲ್ಲಿನ ಸರ್ಕಾರಿ ಆಸ್ಪತ್ರೆಯೊಂದರ ಕೋಲ್ಡ್ ಸ್ಟೋರೇಜ್ ನಿಂದ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ.

published on : 14th April 2021

ರಾಜಕೀಯ ಸಮಾವೇಶ, ಧಾರ್ಮಿಕ ಸಭೆಗಳು ಕೋವಿಡ್-19 ಸೂಪರ್-ಸ್ಪ್ರೆಡರ್ಸ್: ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ

ದೇಶದಲ್ಲಿ ಒಂದು ದಿನ ವರದಿಯಾಗಿರುವ ಕೋವಿಡ್-19 ಸೋಂಕು ಪ್ರಸರಣ ಸಂಖ್ಯೆ 2 ಲಕ್ಷದ ಹತ್ತಿರ ತಲುಪಿದ್ದು, ಪರಿಸ್ಥಿತಿಯ ಬಗ್ಗೆ ರಾಷ್ಟ್ರೀಯ ತಾಂತ್ರಿಕ ಸಲಹಾ ತಂಡ ಕಳವಳ ವ್ಯಕ್ತಪಡಿಸಿದೆ. 

published on : 14th April 2021

ಕೋವಿಡ್ ಉಲ್ಬಣ: ಸಿಬಿಎಸ್‌ಇ 10 ನೇ ತರಗತಿ ಪರೀಕ್ಷೆ ರದ್ದು, 12 ನೇ ತರಗತಿ ಪರೀಕ್ಷೆಗಳು ಮುಂದೂಡಿಕೆ

ದೇಶಾದ್ಯಂತ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ [ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ)] ಹತ್ತನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಿದೆ ಮತ್ತು ಹನ್ನೆರಡನೇ ತರಗತಿ ಪರೀಕ್ಷೆಯನ್ನು ಮುಂದೂಡಿಕೆ ಮಾಡಿದೆ.

published on : 14th April 2021

ಕೋವಿಡ್-19 ಸೋಂಕು ಉಲ್ಬಣ: ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದ ಛತ್ತೀಸ್ ಘಡದ ರಾಯ್ ಪುರ!

ಛತ್ತೀಸ್ ಘಡದ ರಾಯ್ ಪುರ ಜಿಲ್ಲೆ ಕೋವಿಡ್ ಸೋಂಕಿತರ ಪಟ್ಟಿಯಲ್ಲಿ ಯುಕೆ, ಯುಎಇ, ಇಸ್ರೇಲ್ ದೇಶಗಳನ್ನೇ ಹಿಂದಿಕ್ಕಿದೆ.

published on : 14th April 2021

ಇಂದಿನಿಂದ ರಂಜಾನ್‌ ಆಚರಣೆ: ಕರ್ನಾಟಕ ಸರ್ಕಾರದ ಹೊಸ ಮಾರ್ಗಸೂಚಿ ಪ್ರಕಟ

ಮುಸ್ಲಿಮರ ಪವಿತ್ರ ರಂಜಾನ್ ಉಪವಾಸ ಇಂದಿನಿಂದ ಆರಂಭವಾಗಿದೆ. ಒಂದು ತಿಂಗಳ ಕಾಲ ಈ ಆಚರಣೆ ಇರಲಿದ್ದು, ಕೋವಿಡ್ ಕಾರಣದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದೆ.

published on : 14th April 2021

ದೇಶದಲ್ಲಿ ಮತ್ತೆ ಲಾಕ್ ಡೌನ್ ಜಾರಿಯಿಲ್ಲ: ನಿರ್ಮಲಾ ಸೀತಾರಾಮನ್

ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಳಳವಾಗುತ್ತಿದ್ದರೂ ಮತ್ತೆ ದೊಡ್ಡ ಮಟ್ಟದಲ್ಲಿ ಲಾಕ್ಡೌನ್ ಮಾಡುವ ಯಾವ ಪ್ರಸ್ತಾವನೆಯಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

published on : 14th April 2021

''ನಿಜಾಮುದ್ದೀನ್ ಮರ್ಕಜ್ ಗೂ ಕುಂಭಮೇಳಕ್ಕೂ ಹೋಲಿಕೆ ಸಾಧ್ಯವಿಲ್ಲ'; ಗಂಗಾ ನದಿಯಲ್ಲಿ ಮಿಂದರೆ ಕೊರೋನಾ ಬರಲ್ಲ"!

ದೇಶಾದ್ಯಂತ ಕೊರೋನಾ ಎರಡನೇ ಅಲೆ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ಹರಡುತ್ತಿದ್ದು, ಕಳೆದ ವರ್ಷ ಕೊರೋನಾ ತೀವ್ರಗೊಳ್ಳಲು ಕಾರಣವಾಗಿದ್ದ ದೆಹಲಿಯ ನಿಜಾಮುದ್ದೀನ್ ಮರ್ಕಜ್ ಗೂ ಈ ವರ್ಷ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೂ ಹೋಲಿಕೆ ಮಾಡಲಾಗುತ್ತಿದೆ. 

published on : 14th April 2021

ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆ: ಯೋಗಿ ಸರ್ಕಾರದ ವಿರುದ್ಧ ಸಚಿವರಿಂದಲೇ ಅಸಮಾಧಾನ, ಪತ್ರ ವೈರಲ್

ಉತ್ತರ ಪ್ರದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ನಿರ್ವಹಣೆ ಕುರಿತಂತೆ ಆ ರಾಜ್ಯದ ಸಚಿವರೇ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಬೆಳಕಿಗೆ ಬಂದಿದೆ.

published on : 14th April 2021

ದೇಶದಲ್ಲಿನ ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ಏಪ್ರಿಲ್ 17ರಂದು ಕಾರ್ಯಕಾರಿ ಸಮಿತಿ ಸಭೆ: ಕಾಂಗ್ರೆಸ್ 

ದೇಶದ ಕೋವಿಡ್-19 ಪರಿಸ್ಥಿತಿ ಕುರಿತು ಚರ್ಚಿಸಲು ಕಾಂಗ್ರೆಸ್ ಪಕ್ಷವು ಏಪ್ರಿಲ್ 17 ರಂದು ತನ್ನ ಕಾರ್ಯಕಾರಿ ಸಮಿತಿಯ ಸಭೆ ಕರೆದಿದೆ ಎಂದು ತಿಳಿದುಬಂದಿದೆ.

published on : 14th April 2021

ಕುಂಭ ಮೇಳದಲ್ಲಿ ಕೋವಿಡ್ ನಿಯಮಾವಳಿ ಮೂಲೆಗುಂಪು; 100ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಕೊರೋನಾ ಸೋಂಕು!

ಹರಿದ್ವಾರದ ಮಹಾ ಕುಂಭಮೇಳದಲ್ಲಿ 100ಕ್ಕೂ ಹೆಚ್ಚು ಯಾತ್ರಾರ್ಥಿಗಳಿಗೆ ಕೊರೋನಾ ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.

published on : 14th April 2021
1 2 3 4 5 6 >