• Tag results for Flood

ಕೊಪ್ಪಳ: ವಾರದಿಂದ ಪ್ರವಾಹ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ, ಕುರಿಗಳ ರಕ್ಷಣೆ

ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನದಿಗಳು ಉಕ್ಕಿ ಹರಿಯುತ್ತಿದ್ದು ಅತ್ತ ಕೊಪ್ಪಳದಲ್ಲಿ ಕುರಿ ಕಾಯಲು ಹೋಗಿ ಒಂದು ವಾರದಿಂದ ಪ್ರವಾಹಕ್ಕೆ ಸಿಲುಕಿದ್ದ ಕುರಿಗಾಹಿಗಳನ್ನು ಮತ್ತು ನೂರಾರು ಕುರಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

published on : 13th August 2022

ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ವಿದ್ಯಾರ್ಥಿನಿ ಸನ್ನಿಧಿ ಮೃತದೇಹ ಪತ್ತೆ

ಕಾಲು ಸಂಕ ದಾಟುವಾಗ ಕಾಲು ಜಾರಿ ನೀರಿಗೆ ಬಿದ್ದಿದ್ದ ವಿದ್ಯಾರ್ಥಿನಿ ಸನ್ನಿಧಿ ಮೃತದೇಹ ಕೊನೆಗೂ ಪತ್ತೆಯಾಗಿದೆ.

published on : 10th August 2022

ಚಿಕ್ಕಮಗಳೂರು: ಕಾರು ಸಮೇತ ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಇಬ್ಬರನ್ನು ರಕ್ಷಿಸಿದ ಸ್ಥಳೀಯರು!

ಚಿಕ್ಕಮಗಳೂರು ಜಿಲ್ಲೆಯ ಅಯ್ಯನಕೆರೆ ಕೆರೆಯಲ್ಲಿ ಕಾರೊಂದು ಕೊಚ್ಚಿಹೋಗಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ಕಾರಿನ ಕಿಟಕಿ ಗಾಜು ಒಡೆದು ಇಬ್ಬರನ್ನು ರಕ್ಷಣೆ ಮಾಡಿದ್ದಾರೆ.

published on : 10th August 2022

ರಾಜ್ಯದಲ್ಲಿ 14 ಪ್ರವಾಹ ಪೀಡಿತ ಜಿಲ್ಲೆ; 8,197 ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ, ಸಂತ್ರಸ್ಥರಿಗೆ ಉಚಿತ ಆಹಾರ ಕಿಟ್: ಆರ್.ಅಶೋಕ

ರಾಜ್ಯದಲ್ಲಿ ಪ್ರವಾಹ, ಮಳೆ ಸಂಬಂಧಿತ ಅನಾಹುತಗಳಲ್ಲಿ ಈವರೆಗೂ 73 ಮಂದಿ ಸಾವನ್ನಪ್ಪಿದ್ದಾರೆ. 7,386 ಜನರನ್ನು 75 ಕಾಳಜಿ ಕೇಂದ್ರಗಳಲ್ಲಿ ಇರಿಸಲಾಗಿದ ಎಂದು ಕಂದಾಯ ಸಚಿವ ಆರ್.ಅಶೋಕ ಸೋಮವಾರ ತಿಳಿಸಿದರು.

published on : 8th August 2022

ವಿಜಯಪುರ ಜಿಲ್ಲೆಗೆ ನೆರೆ ಪರಿಹಾರ ನೀಡಲು ಸರ್ಕಾರದ ಮಲತಾಯಿ ಧೋರಣೆ: ಎಂ ಬಿ ಪಾಟೀಲ್

ಕಳೆದ ಕೆಲ ದಿನಗಳಿಂದ ಎಡಬಿಡದೆ ಮಳೆ ನಿರಂತರವಾಗಿ ಸುರಿಯುತ್ತಿದ್ದು ಪ್ರವಾಹ ಹಾಗೂ ಭೂ ಕುಸಿತದಿಂದಾಗಿ ನಷ್ಟ ಅನುಭವಿಸಿರುವ ವಿಜಯಪುರ ಜಿಲ್ಲೆಗೆ  ಜಿಲ್ಲೆಗೆ ಒಂದೇ ಒಂದು ರೂಪಾಯಿ ಮಂಜೂರು ಮಾಡಿಲ್ಲ ಎಂದು ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ ಹರಿ ಹಾಯ್ದಿದ್ದಾರೆ.

published on : 8th August 2022

ಕೊಡಗಿನಲ್ಲಿ 80.4 ಮಿ.ಮೀ ಮಳೆ: ಭಾರೀ ವರ್ಷಧಾರೆಗೆ ರಸ್ತೆ, ಮನೆಗಳಿಗೆ ಹಾನಿ

ಕೊಡಗಿನಲ್ಲಿ ಧಾರಾಕಾರ ಮಳೆ ಮುಂದುವರಿದಿದ್ದು, ಸೋಮವಾರದವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್‌ ಘೋಷಣೆ ಮಾಡಲಾಗಿದೆ. 

published on : 8th August 2022

ಮುಂಗಾರು ಆರಂಭದಿಂದ ಈವರೆಗೂ ಮಳೆಯಿಂದ 74 ಮಂದಿ ಸಾವು: ರಾಜ್ಯಾದ್ಯಂತ ಸಿಎಂ ಬೊಮ್ಮಾಯಿ ತೀವ್ರ ನಿಗಾ

ರಾಜ್ಯದ ಹಲವೆಡೆ ಭಾರೀ ಮಳೆ ಮುಂದುವರಿದಿದ್ದು, ಮಳೆ ಹಾನಿಯಿಂದಾಗಿ ಈ ವರೆಗೂ 74 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

published on : 8th August 2022

ತೀವ್ರ ಮಳೆ, ಪ್ರವಾಹದ ಪರಿಣಾಮ 3 ವರ್ಷಗಳಲ್ಲಿ 6,000 ಮಂದಿ ಸಾವು; 59 ಸಾವಿರ ಕೋಟಿ ರೂ ನಷ್ಟ! 

ಹವಾಮಾನ ಬದಲಾವಣೆ ತೀವ್ರವಾದ ಹವಾಮಾನಗಳ ಅಪಾಯವನ್ನು ಹೆಚ್ಚಿಸುತ್ತಿದ್ದು, ಪ್ರವಾಹ, ಅತಿ ಹೆಚ್ಚು ಮಳೆಗಳಿಂದ ಕಳೆದ 3 ವರ್ಷಗಳಲ್ಲಿ 6,000 ಮಂದಿ ಸಾವನ್ನಪ್ಪಿದ್ದು, 59 ಸಾವಿರ ಕೋಟಿ ರೂಪಾಯಿ ನಷ್ಟ ಉಂಟಾಗಿದೆ.

published on : 1st August 2022

ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಮನೆಗಳು, ರಸ್ತೆಗಳು ಜಲಾವೃತ; ಜನರಿಗೆ ಸಂಕಷ್ಟ

ರಾಜ್ಯದಾದ್ಯಂತ ಮಳೆ ಮುಂದುವರಿದಿದ್ದು, ಬೆಂಗಳೂರಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ಥಗೊಂಡಿದೆ. ಭಾರಿ ಮಳೆಯಿಂದಾಗಿ ಕೆಲ ಮನೆಗಳಿಗೆ ನೀರು ನುಗ್ಗಿದ್ದರೆ, ಹಲವು ರಸ್ತೆಗಳು ಜಲಾವೃತವಾಗಿವೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

published on : 31st July 2022

ಆಂಧ್ರದಲ್ಲಿ ಭಾರೀ ಮಳೆ: ಕೊಚ್ಚಿ ಹೋಗುತ್ತಿದ್ದ ವ್ಯಕ್ತಿ ಪವಾಡಸದೃಶ ರೀತಿ ಪಾರು, ವಿಡಿಯೋ!

ಆಂಧ್ರಪ್ರದೇಶದಲ್ಲಿ ಇಂದು ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯುತ್ತಿವೆ. ಈ ವೇಳೆ  ಪ್ರವಾಹದ ನೀರಲ್ಲಿ ರಸ್ತೆ ದಾಟುತ್ತಿದ್ದಾಗ ವ್ಯಕ್ತಿಯೊಬ್ಬರು ಕೊಚ್ಚಿಹೋಗುತ್ತಿರುವುದು ಕಂಡುಬಂದಿದೆ.

published on : 26th July 2022

ಮೈಸೂರಿನಲ್ಲಿ ಮಳೆಯಿಂದ ತೊಂದರೆಗೊಳಗಾದ ಕುಟುಂಬಗಳಿಗೆ 'ಅಂಬಿಗ'ನ ನೆರವು!

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಹಾಗೂ ಕಾವೇರಿ ನದಿ ಪ್ರವಾಹದಿಂದಾಗಿ ಶ್ರೀರಂಗಪಟ್ಟಣದ ಖಾಸಗಿ ಲೇಔಟ್‌ನ 25 ಕುಟುಂಬಗಳು ಪಟ್ಟಣದ ಉಳಿದ ಭಾಗಗಳಿಂದ ಸಂಪರ್ಕ ಕಳೆದುಕೊಂಡಿದ್ದು, ಈ ಕುಟುಂಬಗಳಿಗೆ ಚಿಕನ್ ಮಾರಾಟಗಾರ ಅಂಬಿಗನಾಗಿ ನೆರವು ನೀಡುತ್ತಿದ್ದಾರೆ.

published on : 17th July 2022

ಬೆಳಗಾವಿಯಲ್ಲಿ ವರುಣನ ಆರ್ಭಟ: ಹೆದ್ದಾರಿ ಜಲಾವೃತ, ಮನೆಗಳಿಗೆ ನುಗ್ಗಿದ ನೀರು!

ಬೆಳಗಾವಿಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಗುರುವಾರವೂ ಭಾರೀ ಮಳೆ ಮುಂದುವರಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಪಾರ ಪ್ರಮಾಣದ ಬೆಳೆ ಆಸ್ತಿ, ಪಾಸ್ತಿ ನಷ್ಟ ಉಂಟಾಗಿದೆ.

published on : 15th July 2022

ರಾಜ್ಯದ ವಿವಿಧೆಡೆ ಅತಿವೃಷ್ಟಿ: ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಿಎಂ ಬೊಮ್ಮಾಯಿ ಸಭೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಅತಿವೃಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.

published on : 15th July 2022

ಮಳೆಹಾನಿ: ಹೆಚ್ಚುವರಿ ಪರಿಹಾರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆಗಿರುವ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನಿಗದಿಪಡಿಸಿ ಆದೇಶ ಹೊರಡಿಸಿದೆ.  

published on : 13th July 2022

ಕಡಲ್ಕೊರೆತ ತಡೆಗೆ ಹೊಸ ಶಾಶ್ವತ ತಂತ್ರಜ್ಞಾನ, ಭೂಕುಸಿತ-ಭೂಕಂಪನ ಬಗ್ಗೆ ನಾಲ್ಕು ಸಂಸ್ಥೆಗಳಿಂದ ಅಧ್ಯಯನ: ಸಿಎಂ ಬೊಮ್ಮಾಯಿ

ಕೊಡಗು ಮತ್ತು ಕರಾವಳಿ ಜಿಲ್ಲೆಯಲ್ಲಿ ಅವ್ಯಾಹತ ಮಳೆಯಿಂದ ಪ್ರವಾಹ ಉಂಟಾಗಿ ಭೂಕುಸಿತವಾಗಿದ್ದು ಮತ್ತು ಅದರ ಜೊತೆಗೆ ಭೂಕಂಪವಾಗಿರುವ ಘಟನೆಗಳಿಗೆ ಸಂಬಂಧಿಸಿದಂತೆ ನಾಲ್ಕು ಸಂಸ್ಥೆಗಳಿಂದ ಅಧ್ಯಯನ ನಡೆಸಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

published on : 13th July 2022
1 2 3 4 5 6 > 

ರಾಶಿ ಭವಿಷ್ಯ