• Tag results for Tirath Singh Rawat

ರಾಜ್ಯಪಾಲರಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್!

ಉತ್ತರಾಖಂಡ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಶುಕ್ರವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೆಹಲಿಯಿಂದ ಹಿಂತಿರುಗಿದ ನಂತರ ರಾತ್ರಿ  11 ಗಂಟೆ ಸುಮಾರಿನಲ್ಲಿ ರಾಜ್ಯಪಾಲ ಬೇಬಿ ರಾಣಿ ಮೌರ್ಯ ಅವರಿಗೆ ರಾಜೀನಾಮೆ ಪತ್ರವನ್ನು ರಾವತ್ ಹಸ್ತಾಂತರಿಸಿದ್ದಾರೆ.

published on : 3rd July 2021

ಉತ್ತರಾಖಂಡ್ ಸಿಎಂ ತೀರ್ಥ ಸಿಂಗ್ ರಾವತ್ ದೆಹಲಿಗೆ ಭೇಟಿ; ಮತ್ತೆ ನಾಯಕ್ವ ಬದಲಾವಣೆಯ ಬಗ್ಗೆ ಚರ್ಚೆ?

ಉತ್ತರಾಖಂಡ್ ನಲ್ಲಿ ಮತ್ತೆ ನಾಯಕತ್ವದ ಬದಲಾವಣೆ ಬಗ್ಗೆ ಚರ್ಚೆಯಾಗುತ್ತಿದೆ. ಕೇಂದ್ರ ನಾಯಕರನ್ನು ಭೇಟಿ ಮಾಡಲು ತೀರ್ಥ ಸಿಂಗ್ ರಾವತ್ ಜೂ.30 ರಂದು ನವದೆಹಲಿಗೆ ಭೇಟಿ ನೀಡಿದ್ದು, ಇನ್ನು 2 ವಾರಗಳಲ್ಲಿ ನಾಯಕತ್ವದ ಬದಲಾವಣೆಯಾಗುವ ಸಾಧ್ಯತೆಗಳ ಬಗ್ಗೆ ವದಂತಿಗಳು ಹಬ್ಬಿವೆ. 

published on : 1st July 2021

ಉತ್ತರಾಖಂಡ್ ಸಿಎಂ ತಿರಥ್ ಸಿಂಗ್ ರಾವತ್ ಗೆ ಕೊರೋನಾ ಪಾಸಿಟಿವ್

ತಮಗೆ ಕೋವಿಡ್ -19 ಪಾಸಿಟಿವ್ ದೃಢಪಟ್ಟಿದೆ ಎಂದು ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು ಸೋಮವಾರ ಹೇಳಿದ್ದಾರೆ.

published on : 22nd March 2021

''ಭಾರತವನ್ನು ಅಮೆರಿಕ 200 ವರ್ಷ ಆಳಿತು.....''

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊಗಳುವ ಭರದಲ್ಲಿ ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಎಡವಟ್ಟು ಮಾಡಿಕೊಂಡಿದ್ದು, ಭಾರತವನ್ನೂ ಸೇರಿದಂತೆ ಅಮೆರಿಕ ಇಡೀ ವಿಶ್ವವನ್ನು 200 ವರ್ಷ ಆಳ್ವಿಕೆ ಮಾಡಿತು ಎಂದು ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ.

published on : 21st March 2021

ತಿರಥ್ ಸಿಂಗ್ ರಾವತ್ 'ಕ್ಷಮೆಯಾಚನೆ', ಆದರೂ ಹರಿದ ಜೀನ್ಸ್ ಧರಿಸುವುದು ಸರಿಯಲ್ಲ ಎಂದ ಉತ್ತರಾಖಂಡ್ ಸಿಎಂ

ಮಹಿಳೆಯರ ಹರಿದ ಜೀನ್ಸ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ತೀವ್ರ ಟೀಕೆಗೆ ಗುರಿಯಾಗಿದ್ದ ಉತ್ತರಾಖಂಡ್ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು, ತಮ್ಮ ಹೇಳಿಕೆ ಯಾರಿಗಾದರೂ ನೋವುಂಟು ಮಾಡಿದ್ದರೆ...

published on : 19th March 2021

ಓ ದೇವರೇ, ಅವರ ಮೊಣಕಾಲು ಕಾಣುತ್ತಿದೆ: ಪ್ರಧಾನಿ ಮೋದಿ ಫೋಟೋ ಟ್ವೀಟಿಸಿ ಪ್ರಿಯಾಂಕಾ ವಾದ್ರಾ ಲೇವಡಿ

ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಅವರ ಹರಿದ ಜೀನ್ಸ್ ಹೇಳಿಕೆ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದು ಇದೀಗ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ಟ್ವೀಟ್ ಮಾಡಿ ಲೇವಡಿ ಮಾಡಿದ್ದಾರೆ.

published on : 19th March 2021

ಜೀನ್ಸ್ ಪ್ಯಾಂಟ್ ಸ್ಟೈಲಿಷ್ ಆಗಿ ಕಾಣಲು ಎಲ್ಲೆಲ್ಲಿ ಎಷ್ಟೆಷ್ಟು ಹರಿದಿರಬೇಕು?: ಇಲ್ಲಿದೆ ಕಂಗನಾ ಟಿಪ್ಸ್!

ಉತ್ತರಾಖಂಡ ಮುಖ್ಯಮಂತ್ರಿ ತಿರತ್ ಸಿಂಗ್ ರಾವತ್ ಹರಿದ ಜೀನ್ಸ್ ಧರಿಸಿದ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಟೀಕೆಗಳು ವ್ಯಕ್ತವಾಗುತ್ತಿದ್ದು ಇದೀಗ ಬಾಲಿವುಡ್ ನಟಿ ಸಹ ಹರಿದ ಜೀನ್ಸ್ ಕುರಿತಂತೆ ಟ್ವೀಟ್ ಮಾಡಿದ್ದಾರೆ.

published on : 18th March 2021

ಕುಂಭಮೇಳ ಯಾತ್ರಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ: ಅಚ್ಚರಿ ಮೂಡಿಸಿದ ಉತ್ತರಾಖಂಡ ಸಿಎಂ ಹೇಳಿಕೆ!

ಉತ್ತರಾಖಂಡದಲ್ಲಿ ಆಯೋಜಿಸಲಾಗಿರುವ ಕುಂಭಮೇಳಕ್ಕೆ ಆಗಮಿಸುವ ಯಾತ್ರಾರ್ಥಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದು ಹೇಳುವ ಮೂಲಕ ಉತ್ತರಾಖಂಡ ಸಿಎಂ ತೀರಥ್ ಸಿಂಗ್ ರಾವತ್ ಅಚ್ಚರಿ ಮೂಡಿಸಿದ್ದಾರೆ.

published on : 14th March 2021

ಉತ್ತರಾಖಂಡ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಸಂಸದ ತಿರತ್ ಸಿಂಗ್ ರಾವತ್ ಪ್ರಮಾಣ

ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಸಂಸದ ತಿರತ್ ಸಿಂಗ್ ರಾವತ್ ಅವರು ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. 

published on : 10th March 2021

ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಸಂಸದ ತಿರತ್ ಸಿಂಗ್ ರಾವತ್ ಆಯ್ಕೆ!

ಉತ್ತರಾಖಂಡದ ನೂತನ ಮುಖ್ಯಮಂತ್ರಿಯಾಗಿ ತಿರತ್ ಸಿಂಗ್ ರಾವತ್ ಅವರು ಆಯ್ಕೆಯಾಗಿದ್ದಾರೆ ಎಂದು ಮಾಜಿ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಘೋಷಣೆ ಮಾಡಿದ್ದಾರೆ.

published on : 10th March 2021

ರಾಶಿ ಭವಿಷ್ಯ