ನಂದಿ ಗಿರಿಧಾಮಕ್ಕೆ ಪ್ರಶಸ್ತಿ ಗರಿ

ನಂದಿ ಗಿರಿಧಾಮ ಭಾರತದಲ್ಲಿ ಅತ್ಯಂತ ಪ್ರವಾಸ ಯೋಗ್ಯ ಸ್ಥಳವಾಗಿದೆ. ನಂದಿ ಗಿರಿಧಾಮಕ್ಕೆ ಭೇಟಿ ನೀಡಿದ ವಿದೇಶಿ ಸೇರಿದಂತೆ ಇತರೆ ಪ್ರವಾಸಿಗರ ಅಭಿಪ್ರಾಯ...
ನಂದಿ ಗಿರಿಧಾಮ
ನಂದಿ ಗಿರಿಧಾಮ
ನವದೆಹಲಿ: ನಂದಿ ಗಿರಿಧಾಮ ಭಾರತದಲ್ಲಿ ಅತ್ಯಂತ ಪ್ರವಾಸ ಯೋಗ್ಯ ಸ್ಥಳವಾಗಿದೆ. ನಂದಿ ಗಿರಿಧಾಮಕ್ಕೆ ಭೇಟಿ ನೀಡಿದ ವಿದೇಶಿ ಸೇರಿದಂತೆ ಇತರೆ ಪ್ರವಾಸಿಗರ ಅಭಿಪ್ರಾಯ ಪಡೆದು ಈ ಪ್ರಶಸ್ತಿ ಘೋಷಿಸಲಾಗಿದೆ. 
ನಂದಿ ಗಿರಿಧಾಮ ಉತ್ತಮ ವ್ಯವಹಾರಿಕ ಕೇಂದ್ರವೂ ಹೌದು' ಎಂದೂ ಸಂಸ್ಥೆ ಬಣ್ಣಿಸಿದೆ. ಪ್ರಶಸ್ತಿ ಪತ್ರವನ್ನು ಗಿರಿಧಾಮದ ನಿರ್ದೇಶಕರಿಗೆ ನೀಡಿರುವ ಟ್ರಿಪ್ ಅಡ್ವೆಂಚರ್ ಸಂಸ್ಥೆಯ ಅಧ್ಯಕ್ಷ ಮಾರ್ಕ್‍ಚರಾನ್, ಈ ತಾಣದಲ್ಲಿ ಮತ್ತಷ್ಟು ಸೌಲಭ್ಯ ಒದಗಿಸುವಂತೆ ಕೋರಿದ್ದಾರೆ. 
ಕಳಂಕ ತೊಡೆಯುವ ಯತ್ನ: ಬೆಂಗಳೂರಿಗೆ ಹತ್ತಿರುವಿರುವ ಕಾರಣಕ್ಕೆ ಇಲ್ಲಿ ಬೆಂಗಳೂರಿನ ಯುವ ಜೋಡಿಗಳ ಕಾರುಬಾರು ಹಿಂದೆ ಜೋರಾಗಿತ್ತು. ಪಡ್ಡೆ ಹುಡುಗರು ಮತ್ತು ಕಾಲೇಜು ಓದುತ್ತಿದ್ದ ವಿದ್ಯಾರ್ಥಿಗಳು ಇಲ್ಲಿಗೆ ಅಧಿಕವಾಗಿ ಬರುತ್ತಿದ್ದರು. ಅಲ್ಲದೆ, ಅನೈತಿಕ ಚಟುವಟಿಕೆಗಳಿಗೇನೂ ಕೊರತೆ ಇರಲಿಲ್ಲ. ಇದರಿಂದಾಗಿ ಸಭ್ಯಸ್ಥರು ಮತ್ತು ಕುಟುಂಬ ಸಮೇತ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರ ಸಂಖ್ಯೆ ತೀರಾ ಕಡಿಮೆಯಾಗಿತ್ತು. 
ನಂದಿ ಗಿರಿಧಾಮ ಪ್ರೇಮಿಗಳಿಗೆ ಮಾತ್ರ, ಇಲ್ಲಿ ಅನೈತಿಕ ಚಟುವಟಿಕೆಗಳೇ ಹೆಚ್ಚು ಎಂಬ ಕಳಂಕ ನಿವಾರಿಸಲು ಈವರೆಗೆ ಯಾರೂ ಪ್ರಯತ್ನಿಸಿರಲಿಲ್ಲ. ಆದರೆ ಇತ್ತೀಚೆಗೆ ತೋಟಗಾರಿಕೆ ಇಲಾಖೆ ತೆಗೆದುಕೊಂಡಿರುವ ಕಠಿಣ ನಿಲುವುಗಳ ಪರಿಣಾಮ ನಂದಿ ಬೆಟ್ಟಕ್ಕೆ ಅಂಟಿದ್ದ ಕಳಂಕ ದೂರವಾಗುವ ಸೂಚನೆಗಳು ಕಾಣುತ್ತಿವೆ. ಸಂಜೆ 6 ಗಂಟೆ ನಂತರ ನಂದಿ ಬೆಟ್ಟ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಸಂಜೆ ವೇಳೆ ಆಗಮಿಸುತ್ತಿದ್ದ ಕಳ್ಳ ಪ್ರೇಮಿಗಳಿಗೆ ಕಡಿವಾಣ ಬಿದ್ದಿದೆ. ಇಷ್ಟೇ ಅಲ್ಲ, ನಂದಿ ಬೆಟ್ಟದಲ್ಲಿನ ರಸ್ತೆಗಳಿಗೆ ಕೊನೆಗೂ ಮೋಕ್ಷ ಲಭಿಸಿದೆ. ನಂದಿ ಬೆಟ್ಟವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲು ಇಲಾಖೆ ಕ್ರಮ ಕೈಗೊಂಡಿದ್ದು ರು. 1.5 ಕೋಟಿ ವೆಚ್ಚದಲ್ಲಿ ಬೆಟ್ಟದ ರಸ್ತೆಗಳನ್ನು ದುರಸ್ತಿಪಡಿಸಲು ಇತ್ತೀಚಿಗಷ್ಟೇ ಟೆಂಡರ್ ಆಹ್ವಾನಿಸಿದೆ.
ಅಡ್ವೆಂಚರ್ ಗೇಮ್ಸ್: ಪ್ರವಾಸಿಗರನ್ನು ಆಕರ್ಷಿಸಲು ಇಲಾಖೆ ವತಿಯಿಂದ ಬೆಟ್ಟದ ಮೇಲೆ ಅಡ್ವೆಂಚರ್ ಗೇಮ್ಸ್ ಆರಂಭಿಸಿದೆ. ಪುಟ್ಟ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಆಡಿ ನಲಿಯಲು ಅನುಕೂಲವಾಗುವಂತೆ ನಾನಾ ರೀತಿಯ ಸಾಹಸ ಕ್ರೀಡೆಗಳು ಇಲ್ಲಿ ಲಭ್ಯವಿವೆ. ಇದು ಪ್ರವಾಸಿಗರ ಮೆಚ್ಚುಗೆಗೂ ಪಾತ್ರವಾಗಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಬೆಟ್ಟದ ಮೇಲೆ ಸೈಕಲ್ ವಿಹಾರ ಆರಂಬಿsಸಲಾಗಿದೆ. ಗಂಟೆಗೆ ರು.100 ರಂತೆ ಸೈಕಲ್ ಬಾಡಿಗೆ ಪಡೆಯಲಾಗುತ್ತಿದೆ. 
ಸಂದಿಗಿರಿಧಾಮ ರಾಜ್ಯದಲ್ಲೇ ಅತಿ ಎತ್ತರದ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಬೆಂಗಳೂರಿನ ಹತ್ತಿರವಾದ ಪ್ರಮುಖ ಪ್ರವಾಸ ತಾಣವಾಗಿದೆ ಮಹಾತ್ಮಗಾಂಧೀಜಿ, ಜವಹರಲಾಲ್ ನೆಹರು ಮತ್ತಿತ್ತರ ಪ್ರಮುಖರು ಹಿಂದೆ ಇಲ್ಲಿ ನೆಲೆಸಿದ್ದರು. ಟಿಪ್ಪುಸುಲ್ತಾನ್ ಸಹ ಗಿರಿಧಾಮದಲ್ಲಿ ಆಗಾಗ ಬಂದು ನೆಲೆಸುತ್ತಿದ್ದರು. 1980ರ ದಶಕದಲ್ಲಿ ಸಾರ್ಕ್ ಶೃಂಗಸಭೆಯನ್ನು ಇಲ್ಲಿ ನಡೆಸಲಾಗಿತ್ತು. ಪಾಕಿಸ್ತಾನದ ಆಗಿನ ಪ್ರಧಾನಿ ಬೆನಜೀರ್ ಭುಟ್ಟೋ, ರಾಜೀವ್ ಗಾಂಧಿ ಸೇರಿದಂತೆ ಸಾರ್ಕ್ ದೇಶಗಳ ಪ್ರಧಾನಿಗಳು ಪಾಲ್ಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com