ಚಿನ್ನದ ಅಂಡಮಾನ್

ಪೋರ್ಟ್‍ಬ್ಲೇರ್‍ನಲ್ಲಿ ಸೆಲ್ಯುಲರ್ ಜೈಲ್ ನಿರ್ಮಿಸಿ, ಅಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯಹೋರಾಟಗಾರರನ್ನು ಕೂಡಿ ಹಾಕುತ್ತಿದ್ದರು ಬ್ರಿಟಿಷರು. ತೀವ್ರ ಸ್ವರೋಪದ ಶಿಕ್ಷೆ ವೇಳೆ ಅವರೇನಾದರೂ...
ಅಂಡಮಾನ್ ದ್ವೀಪ ಸಮೂಹ (ಸಂಗ್ರಹ ಚಿತ್ರ)
ಅಂಡಮಾನ್ ದ್ವೀಪ ಸಮೂಹ (ಸಂಗ್ರಹ ಚಿತ್ರ)

ಅಂಡಮಾನಿನ ಎಲ್ಲ ದ್ವೀಪಗಳಲ್ಲೂ ನೈಸರ್ಗಿಕ ಗತ್ತಿದೆ. ರೋಸ್ ಐಲ್ಯಾಂಡ್ ಕೂಡ ಅಂಥದ್ದೇ. ಬೆಳಗ್ಗೆದ್ದು ದೋಣಿಯಲ್ಲಿ ಹೊರಟಾಗ ನಮಗೆ ಅಲ್ಲಿ ಸ್ವಾಗತ ಕೋರಿದ ಜಲಚರ ಜೆಲ್ಲಿ ಫಿಶ್. ನಮ್ಮೂರಿನಲ್ಲಿ ಗ್ರಾಮ ಸಿಂಹಗಳು ಹಿಂಬಾಲಿಸಿದಂತೆಯೇ ಜೆಲ್ಲಿ ಫಿಶ್‍ಗಳು ನಮ್ಮ ದೋಣಿ ಸಾಗಿದಂತೆ ಹಿಂದೆಹಿಂದೆಯೇ ಬರುತ್ತಿದ್ದವು. ಸುಮಾರು 2 ಕಿ.ಮೀ. ಸಾಗರದಲ್ಲಿ ಕ್ರಮಿಸಿ ರೋಸ್ ಐಲ್ಯಾಂಡ್ ಮುಟ್ಟಿದೆವು.

ಪೋರ್ಟ್‍ಬ್ಲೇರ್‍ನಲ್ಲಿ ಸೆಲ್ಯುಲರ್ ಜೈಲ್ ನಿರ್ಮಿಸಿ, ಅಲ್ಲಿ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೂಡಿ ಹಾಕುತ್ತಿದ್ದರು ಬ್ರಿಟಿಷರು. ತೀವ್ರ ಸ್ವರೋಪದ ಶಿಕ್ಷೆ ವೇಳೆ ಅವರೇನಾದರೂ ತಪ್ಪಿಸಿಕೊಂಡರೆ ಆಗುವ ಅನಾಹುತ ತಪ್ಪಿಸಲು ಬ್ರಿಟಿಷರಿಗೊಂದು ಸೂಕ್ತ ಭದ್ರ ನೆಲೆ ಬೇಕಿತ್ತು. ಅದಕ್ಕೆ ಅವರು ಆರಿಸಿಕೊಂಡಿದ್ದು ಈ ರೋಸ್ ಐಲ್ಯಾಂಡ್ ಅನ್ನು. ಒಂದೇ ಗಂಟೆ ಟೈಮು ಅವರಿಲ್ಲಿ ಏನೆಲ್ಲ ಸ್ಥಾಪಿಸಿಲ್ಲ? ಭವ್ಯ ಕಟ್ಟಡಗಳು, ಸ್ವಿಮ್ಮಿಂಗ್‍ಪೂಲ್, ಚರ್ಚ್, ಕ್ಲಬ್‍ಹೌಸ್, ನೀರು ಶುದಿಟಛೀಕರಣ ಕೇಂದ್ರ, ಹೋಟೆಲ್, ವಿಲಾಸಿ, ಗೋರಿ, ಸುಂದರ ಹೊಂಡ, ಆಸ್ಪತ್ರೆ, ಸಮುದಾಯ ಭವನ, ಸರ್ಕಾರಿ ಕಚೇರಿಗಳು- ಎಲ್ಲ ಇವೆ ಇಲ್ಲಿ. ಇಂದು ರೋಸ್ ಐಲ್ಯಾಂಡ್‍ನಲ್ಲಿ ಪಾಳು ಬಿದ್ದು ಗೋಡೆಗಳ ಮೇಲೆ ಆಲದ ಮರ ಬೆಳೆದುಕೊಂಡಿದೆ.

ಆಂಗ್ಲರ ವೈಭವದ ಕುರುಹುಗಳನ್ನು ಈ ಪಾಳು ಬಿದ್ದ ಗೋಡೆ ಅನಾಥ ಸ್ವರದಲ್ಲಿ ಹಾಡುತ್ತಿದೆ. ಅವಶೇಷಗಳನ್ನಷ್ಟೇ ಇಲ್ಲಿ ಸಂರಕ್ಷಿಸಿಡಲಾಗಿದೆ. ಈ ದ್ವೀಪವನ್ನು ನೋಡಿದವರಿಗೆ ಇಲ್ಲಿಯೇ ಮನೆ ಕಟ್ಟಿಕೊಂಡು ಇರಬೇಕೆಂದು ಅನಿಸುವುದು ಸಹಜ. ಆದರೆ ರೋಸ್ ದ್ವೀಪ ಭಾರತದ ನೌಕಾಸೇನೆಗೆ ಸೇರಿದ್ದರಿಂದ ಇಲ್ಲಿ ಜನವಸತಿ ನಿಷಿದಟಛಿ. ಇಲ್ಲಿ ಜಿಂಕೆಗಳು ಮತ್ತು ನವಿಲುಗಳನ್ನು ತಂದುಬಿಡಲಾಗಿದೆ. ಈ ಐಲ್ಯಾಂಡ್ ನಲ್ಲಿರಲು ಕೇವಲ ಒಂದು ತಾಸು ಅವಕಾಶವಷ್ಟೇ. ಸಮಯ ಮುಗಿದ ಕೊಡಲೇ ದೋಣಿ ಏರಬೇಕು. ಮುಖ್ಯದ್ವಾರದಲ್ಲಿ ಸ್ವೈಪಿಂಗ್ ಮಷಿನ್ ಇಟ್ಟಿದ್ದಾರೆ. ಕಾರ್ಡ್ ಉಜ್ಜಿಯೇ ಹೋಗಬೇಕು.

ಅಲ್ಲಿ ನಿಧಿ ಇದೆಯೇ?
ಈ ದ್ವೀಪದ ಇತಿಹಾಸವೂ ಅಷ್ಟೇ ಕೌತುಕ. 1941ರ ಭೂಕಂಪ ರೋಸ್ ದ್ವೀಪಕ್ಕೆ ಭಾರಿ ಹಾನಿ ಮಾಡಿತು. ಆ ಕೂಡಲೇ ಆಂಗ್ಲರು ರೋಸ್ ದ್ವೀಪದಿಂದ ಆಡಳಿತ ಕಚೇರಿಯನ್ನು ಪೋರ್ಟ್‍ಬ್ಲೇರ್‍ಗೆ ವರ್ಗಾಯಿಸಿದರು. 1942ರ ಎರಡನೇ ಮಹಾಯುದಟಛಿದ ವೇಳೆ ಒಂದು ಸುತ್ತು ಗುಂಡನ್ನೂ ಹಾರಿಸದೇ ಆಂಗ್ಲರು ಸೋತು ಶರಣಾಗಿ ಜಪಾನೀ ಸೇನೆಗೆ ಬಿಟ್ಟುಕೊಟ್ಟರು. ಅಂಡಮಾನಿನಲ್ಲಿ ನೇತಾಜಿ ಮೊದಲು ರಾಷ್ಟ್ರಧ್ವಜ ಹಾರಿಸಿದ್ದೂ ಇಲ್ಲಿಯೇ. ಬ್ರಿಟಿಷರಿಂದ ಸ್ವತಂತ್ರ ಪಡೆದ ಭಾರತದ ಮೊದಲ ಸ್ಥಳವಿದು. ರೋಸ್ ಐಲ್ಯಾಂಡ್ ವೈಭವದಿಂದ ಮೆರೆದ ದ್ವೀಪ. ಭಾರತದಿಂದ 1370 ಕಿ.ಮೀ. ದೂರದಲ್ಲಿದೆ.

ಬ್ರಿಟಿಷರಿಗೆ ಲೂಟಿಗೈದ ಸಂಪತ್ತನ್ನು ಸೇಫಾಗಿಡಲು ಇದಕ್ಕಿಂತ ಪ್ರಶಸ್ತ ಜಾಗ ಬೇರೆಲ್ಲೂ ಇರಲಿಲ್ಲ. ಆಂಗ್ಲರು ಜಗತ್ತನ್ನೇ ಕೊಳ್ಳೆ ಹೊಡೆದರು. ಅಪಾರ ನಿಧಿಯನ್ನು ಇಲ್ಲಿಯೇ ಬಚ್ಚಿಟ್ಟಿರಬಹುದು ಎಂಬುದು ಇವತ್ತಿಗೂ ಅಂಡಮಾನಿಗರಿಗೆ ಕಾಡುವ ಗುಮಾನಿ. ಇಲ್ಲಿ ಕಳ್ಳರಿಂದ ನೆಲ ಅಗೆಯುವ ಕೆಲಸಗಳೂ ಆಗಿವೆ. ರೋಸ್ ಐಲ್ಯಾಂಡ್‍ನ ಪ್ರಕೃತಿಯ ಪುಟಗಳನ್ನು ಮನಸ್ಸಿನೊಳಗೆ ಅಚ್ಚು ಹಾಕುತ್ತಾ ಸಂತೋಷದಿಂದ `ಗುಡ್ ಬೈ' ಎಂದು ಹೇಳಿ ದೋಣಿಯನ್ನೇರಿದೆ. ಅಲ್ಲೊಂದು ಲೈಟ್‍ಹೌಸ್ ಇರುವ ದ್ವೀಪ ಕಾಣಿಸಿತು. ಅದು ನಾರ್ತ್ ಬೇ ಐಲ್ಯಾಂಡ್.

ನೋಟಿನ ಮೇಲೆ ಕೂತ ದ್ವೀಪ ನಿಮ್ಮ ಬಳಿ 20 ರುಪಾಯಿಯ ನೋಟಿದ್ದರೆ ಅದನ್ನೊಮ್ಮೆ ಸೂಕ್ಷ್ಮವಾಗಿ ನೋಡಿ. ನೋಟಿನ ಹಿಂಭಾಗದಲ್ಲೊಂದು ದ್ವೀಪವಿದೆ. ಅದೇ ನಾರ್ತ್ ಬೇ ಐಲ್ಯಾಂಡ್ ಎನ್ನುತ್ತಾರೆ ಅಂಡಮಾನಿಗರು. ಇದಕ್ಕೆ ಪುರಾವೆಗಳು ಏನೂ ಇಲ್ಲ. ಇದ್ದರೂ ಇರಬಹುದು ಅಂತ ಒಪ್ಪಿಕೊಳ್ಳುವುದರಲ್ಲಿ ಏನೋ ಸಮಾಧಾನ. ಏಕೆಂದರೆ, ನಾನು ಅಲ್ಲಿಗೆ ಇಷ್ಟಪಟ್ಟು ಹೋದ ಪ್ರವಾಸಿಗ. ಇದು ರೋಸ್ ಐಲ್ಯಾಂಡ್‍ಗಿಂತ ದೊಡ್ಡ ದ್ವೀಪ. ಅಂಡಮಾನಿನ ಎರಡನೇ ಅತಿ ದೊಡ್ಡ ಶಿಖರ ಮೌಂಟ್ ಹ್ಯಾರಿಯೇಟ್ ಇರುವುದೂ ಇಲ್ಲಿಯೇ.

ಮೌಂಟ್ ಹ್ಯಾರಿಯೇಟಿನ ತುದಿಯನ್ನು ಮೆಟ್ಟಿ ನಿಲ್ಲುವ ಅಸೆ ಇದ್ದರೆ ಅಗತ್ಯವಾಗಿ ನೀವು ಚಾರಣ ಕೈಗೊಳ್ಳಬಹುದು. ಪೋರ್ಟ್‍ಬ್ಲೇರ್ ಹತ್ತಿರವಿರುವುದರಿಂದ ಹಾಗೂ ಹವಳದ ದಂಡೆಗಳು ಹೆಚ್ಚಾಗಿರುವ ಕಾರಣ ಇಲ್ಲಿ ಸೀ ವಾಕಿಂಗ್, ಸ್ಕೂಬಾ ಡೈವಿಂಗ್, ಸ್ನೋರ್ಕೆಲ್ಲಿಂಗ್ ನಡೆಸುತ್ತಾರೆ. ಟೈಂಪಾಸಿಗೆ ಹೇಳಿಮಾಡಿಸಿದ ಸ್ಥಳ.

- ಮಧುಚಂದ್ರ ಎಚ್ ಬಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com