ಈ ವರ್ಷ ಆಡಿಯದ್ದೇ ಆಟ!

ಭಾರತದಲ್ಲಿ ಐಷಾರಾಮಿ ಕಾರುಗಳ ಮಾರುಕಟ್ಟೆಯಲ್ಲಿ ಅಗ್ರಗಣ್ಯನಾಗಿರುವ ಆಡಿ ಕಂಪನಿ 2015ರಲ್ಲಿ ಮೊದಲ ಸ್ಥಾನ ಕಾಯ್ದುಕೊಳ್ಳಲು ಸಕಲ ಸಿದ್ಧತೆ ನಡೆಸಿದೆ...
ಹೊಸ ಆಡಿ ಸಂಸ್ಥೆಯ ಕಾರುಗಳು (ಸಂಗ್ರಹ ಚಿತ್ರ)
ಹೊಸ ಆಡಿ ಸಂಸ್ಥೆಯ ಕಾರುಗಳು (ಸಂಗ್ರಹ ಚಿತ್ರ)

ಭಾರತದಲ್ಲಿ ಐಷಾರಾಮಿ ಕಾರುಗಳ ಮಾರುಕಟ್ಟೆಯಲ್ಲಿ ಅಗ್ರಗಣ್ಯನಾಗಿರುವ ಆಡಿ ಕಂಪನಿ 2015ರಲ್ಲಿ ಮೊದಲ ಸ್ಥಾನ ಕಾಯ್ದುಕೊಳ್ಳಲು ಸಕಲ ಸಿದ್ಧತೆ ನಡೆಸಿದೆ. ಅದಕ್ಕಾಗಿ ಈ ವರ್ಷ 10 ಹೊಸ ಕಾರುಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲು ಆಡಿ ಕಂಪನಿ ಉದ್ದೇಶಿಸಿದೆ.

ಈಗಾಗಲೇ ಆಡಿ ಕಂಪನಿ ಆರ್8 ಎಲ್ ಎಂಎಕ್ಸ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಆಡಿ ಕಂಪನಿಯ ಅತ್ಯಂತ ವೇಗವಾಗಿ ಹೋಗುವ ಕಾರು ಎಂದು ಜನಜನಿತವಾಗಿದೆ. ಈ ಕಾರು ಹೈ ಲೇಸರ್ ಬೀಮ್ ಹೆಡ್‍ಲೈಟ್‍ಗಳನ್ನು ಹೊಂದಿರುವುದು ವಿಶೇಷ. 2014ರಲ್ಲಿ ಆಡಿ ಕಂಪನಿ ದೇಶದಲ್ಲಿ 10,851 ಕಾರುಗಳನ್ನು ಮಾರಾಟ ಮಾಡಿದ್ದು, ಇದು ದೇಶದಲ್ಲಿ ಮಾರಾಟವಾದ ಒಟ್ಟು ಐಷಾರಾಮಿ ಕಾರುಗಳ ಶೇ.34ರಷ್ಟಾಗುತ್ತದೆ. ಈ ಬೆಳವಣಿಗೆ ಕಂಪನಿಯ ಯಾವುದೇ ಒಂದು ಕಾರಿನ ಮೇಲೆ ನಿರ್ಭರವಾಗಿರಲಿಲ್ಲ. ಬದಲಾಗಿ ಆಡಿ ಕಂಪನಿಯ ವಿವಿಧ ಮಾದರಿಯ ಕಾರುಗಳು ಗ್ರಾಹಕರನ್ನು ಸಮನಾಗಿ ಆಕರ್ಷಿಸಲು ಯಶಸ್ವಿಯಾಗಿವೆ.

ಇದರಿಂದಾಗಿಯೇ ಆಡಿ ಕಂಪನಿ ಭಾರತದಲ್ಲಿ ಐಶಾರಾಮಿ ಕಾರುಗಳ ನಂ.1 ಕಂಪನಿಯಾಗಿ  ಹೊರಹೊಮ್ಮಿದೆ. ಹಿಂದಿನ ವರ್ಷ ಬಿಡುಗಡೆ ಮಾಡಿದ ಎ3ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನುತ್ತಾರೆ ಕಂಪನಿಯ ಭಾರತೀಯ ವಿಭಾಗದ ಮುಖ್ಯಸ್ಥ ಜಾಯ್ ಕಿಂಗ್. ಭಾರತೀಯ ಗ್ರಾಹಕರು ಆಡಿ ಕಾರುಗಳ ಮೇಲೆ ಇಟ್ಟಿರುವ ಭರವಸೆ ಮತ್ತು ಪ್ರೀತಿಯನ್ನು ಕಂಪನಿ 10 ಹೊಸ ಕಾರುಗಳ ಮೂಲಕ ಮುಂದಿನ ವರ್ಷವೂ ಉಳಿಸಿಕೊಳ್ಳಲಿದೆ. ಪ್ರತಿ ವಿಭಾಗದಲ್ಲಿ ಒಂದು ಹೊಸ ಕಾರನ್ನು ಭಾರತೀಯ ಗ್ರಾಹಕರಿಗೆ ಕಂಪನಿ ಒದಗಿಸಲಿದೆಯಂತೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com