ಬಜಾಜ್ ನ ವೇಗದ 200!

ಪಲ್ಸರ್ ಮತ್ತೆ ಪ್ರಕಾಶಿಸಲಿದೆ! ಬಜಾಜ್ ಆಟೋ ಸಂಸ್ಥೆಯು ಪ್ರಖ್ಯಾತ ಬೈಕ್ ಪಲ್ಸರ್ ಸರಣಿಯಲ್ಲಿ ಹೊಸ ಬೈಕನ್ನು ಮಾರುಕಟ್ಟೆಗೆ ಬಿಟ್ಟಿದೆ...
ಬಜಾಜ್ 200 ಎಸ್ ಎಸ್
ಬಜಾಜ್ 200 ಎಸ್ ಎಸ್

ಪಲ್ಸರ್ ಮತ್ತೆ ಪ್ರಕಾಶಿಸಲಿದೆ! ಬಜಾಜ್ ಆಟೋ ಸಂಸ್ಥೆಯು ಪ್ರಖ್ಯಾತ ಬೈಕ್ ಪಲ್ಸರ್ ಸರಣಿಯಲ್ಲಿ ಹೊಸ ಬೈಕನ್ನು ಮಾರುಕಟ್ಟೆಗೆ ಬಿಟ್ಟಿದೆ. ಆರ್‍ಎಸ್ 200ಸಿಸಿ ಬೈಕ್ ಇದಾಗಿದ್ದು, ನೋಡಲು ಅತ್ಯಾಕರ್ಷಕ. ಇದು ಕ್ರೀಡಾ ಬೈಕ್ ಮಾದರಿ. ಯುವಕರನ್ನು ಗುರಿಯಾಗಿಸಿಕೊಂಡು ರೂಪಿಸಲಾಗಿದೆ.

ಬೈಕ್‍ನಲ್ಲಿ ಎಚ್‍ಡಿ ಫೋಕಸ್ ಟ್ವಿನ್ ಪ್ರೊಜೆಕ್ಟರ್ ಹೆಡ್‍ಲೈಟ್‍ಗಳಿವೆ. ಅಂದರೆ ಇಲ್ಲಿ ಎರಡು ಹೆಡ್‍ಲೈಟ್ ಗಳು ಕಾರ್ಯನಿರ್ವಹಿಸಲಿದ್ದು, ರಸ್ತೆಯು ಸ್ಪಷ್ಟವಾಗಿ ಕಾಣಲು ಈ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಪ್ರೊಜೆಕ್ಟರ್ ಹೆಡ್‍ಲೈಟ್‍ಗಳು ಆಧುನಿಕ ಮಾದರಿಯಾಗಿದ್ದು, ಬೆಳಕು ಹೆಚ್ಚು ಫೋಕಸ್ ಆಗಿ ರಸ್ತೆಯ ಮೇಲೆ ಬೀಳಲಿದೆ. ಬೈಕ್‍ನ ಹಿಂಬದಿ ಕ್ರಿಸ್ಟಲ್ ಎಲ್‍ಇಡಿ ಹಿಂಬದಿ ದೀಪವನ್ನು ಅಳವಡಿಸಲಾಗಿದ್ದು, ಹಿಂಬದಿ ಸವಾರರಿಗೆ ಸ್ಪಷ್ಟವಾಗಿ ಗೋಚರಿಸುತ್ತದೆ. ಅಲ್ಲದೇ ಎಷ್ಟೇ ವೇಗದಲ್ಲಿದ್ದರೂ ಸುಲಭವಾಗಿ ನಿರ್ವಹಿಸುವಂತೆ ಮಾಡಲು ಉತ್ತಮ ತಂತ್ರಜ್ಞಾನ ಅಳವಡಿಸಲಾಗಿದೆ.

ಎಂಜಿನ್ ಬಾಳ್ವಿಕೆಯನ್ನು ಉತ್ತಮ ಪಡಿಸುವ ನಿಟ್ಟಿನಲ್ಲಿ ಲಿಕ್ವಿಡ್ ಕೂಲಿಂಗ್ ಹಾಗೂ ಫ್ಯೂಯಲ್ ಇಂಜೆಕ್ಷನ್‍ನೊಂದಿಗೆ ಎ4-ವಾಲ್ವ್ ಟ್ರಿಪಲ್ ಸ್ಪಾರ್ಕ್ ಡಿಟಿಎಸ್‍ಐ ಎಂಜಿನ್ ರೀತಿಯಲ್ಲಿ ರೂಪುಗೊಳಿಸಲಾಗಿದೆ. ಎಷ್ಟೇ ವೇಗದಲ್ಲಿದ್ದರೂ ತಕ್ಷಣ ನಿಯಂತ್ರಿಸಲು ಎಬಿಎಸ್ ವ್ಯವಸ್ಥೆ ಇರುವ 300 ಎಂಎಂ ಡಿಸ್ಕ್ ಬ್ರೇಕ್ ಇಲ್ಲಿದೆ. ತಿರುವುಗಳಲ್ಲಿ ಚಾಲನೆ ಮಾಡುವಾಗ ಸ್ಥಿರತೆ ಕಾಯ್ದುಕೊಳ್ಳಲೆಂದು ಪೆರಿಮೀಟರ್ ಫ್ರೇಂ ಇದ್ದು, ಬೈಕ್ ರೈಡಿಂಗ್‍ನ ಮಜಾ ಕೊಡಲು ಹಿಂಬದಿಗೆ ನೈಟ್ರಾಕ್ಸ್ ಮೊನೊ ಸಸ್ಪೆನ್ಷನ್ ವ್ಯವಸ್ಥೆಯನ್ನು ಪಲ್ಸರ್ 200 ಹೊಂದಿದೆ. ಇದಲ್ಲದೆ 24.5 ಪಿಎಸ್ ಪವರ್ ಇದ್ದು, 11,000 ಆರ್‍ಪಿಎಂನಲ್ಲಿ ಗಂಟೆಗೆ 141 ಕಿ. ಮೀ. ವೇಗವನ್ನು ಇದು ಹೊಂದಿದೆ. ಕರ್ನಾಟಕದಲ್ಲಿ ಇದರ ಎಕ್ಸ್ ಶೋ ರೂಂ ಬೆಲೆ ರು 1,19,641ರಿಂದ ಆರಂಭಗೊಂಡು ಪು1,31,849ರವರೆಗೆ ನಿಗದಿ ಮಾಡಲಾಗಿದೆ.

ಸದ್ಯ ಆಯ್ದ ಬಜಾಜ್ ಡೀಲರ್ ಶಿಪ್‍ನಲ್ಲಿ ಮಾತ್ರ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲೆಡೆ ದೊರೆಯಲಿದೆ ಎಂದು ಬಜಾಜ್ ಆಟೋ ಲಿ.ನ ಮೋಟಾರ್ ಸೈಕಲ್ ವ್ಯಾಪಾರ ವಿಭಾಗದ ಅಧ್ಯಕ್ಷ ಎರಿಕ್ ವಾಸ್ ಹೇಳಿದ್ದಾರೆ. ಬಜಾಜ್ ಕಂಪನಿ ಪಲ್ಸರ್ ಸರಣಿಯಲ್ಲಿ ಮುಂದಿನ 3 ತಿಂಗಳಲ್ಲಿ ಮತ್ತೆ 3 ಹೊಸ ಬೈಕ್‍ಗಳನ್ನು ಬಿಡುಗಡೆ ಮಾಡುವ  ಸಿದ್ಧತೆಯಲ್ಲಿದೆ. ಪಲ್ಸರ್ 400 ಸಿಸಿ ಬೈಕ್ ಕೂಡ ಮಾರುಕಟ್ಟೆಗೆ ಇಳಿಯಲಿದೆ. ಡ್ಯೂಕ್, ಕವಾಸಾಕಿ, ಹೊಂಡಾ ಸೇರಿದಂತೆ ವಿವಿಧ ಕಂಪನಿಗಳ ಸ್ಪೋಟ್ರ್ಸ್ ಬೈಕ್‍ಗಳ ಬಗ್ಗೆ ಗ್ರಾಹಕರು ಹೆಚ್ಚು ಆಕರ್ಷಿತರಾಗುತ್ತಿರುವುದನ್ನು ಗಮನಿಸಿರುವ ಕಂಪನಿ, ಹೆಚ್ಚು ಎಂಜಿನ್ ಸಾಮಥ್ರ್ಯದ ಸ್ಪೋಟ್ರ್ಸ್ ಬೈಕ್‍ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ತೀರ್ಮಾನಿಸಿದೆ. ಈ ಬೈಕ್ ಮಾದರಿಗಳನ್ನು ಈಗಾಗಲೇ ಜಿನೀವಾ ಮೋಟಾರ್ ಶೋನಲ್ಲಿ ಕಂಪನಿ ಪ್ರದರ್ಶಿಸಿದೆ.

ಇಂಥಹ ಬೈಕು ವಿರಳ
ಈ ಬೈಕ್ ಅನ್ನು ಗ್ರಾಹಕರ ಆದ್ಯತೆಗಳನ್ನು ಆಧರಿಸಿ ತಯಾರಿಸಲಾಗಿದ್ದು, ಭಾರತದಲ್ಲಿ ಕ್ರೀಡಾ ಮಾದರಿಯ ಬೈಕ್‍ಗಳು ವಿರಳವಾಗಿವೆ. ಹೀಗಾಗಿ ಸಹಜವಾಗಿಯೇ ಇದಕ್ಕೆ ಬೇಡಿಕೆ ಹೆಚ್ಚಿದ್ದರಿಂದ ವಿನೂತನ ಮಾದರಿಯಲ್ಲಿ ಬೈಕ್ ತಯಾರಿಸಿದ್ದೇವೆ. ಇದು ಖಂಡಿತವಾಗಿ ಯುವಕರಿಗೆ ಇಷ್ಟವಾಗುತ್ತದೆ. ಕ್ರೀಡಾ ಬೈಕ್‍ಗಳ ವಲಯದಲ್ಲಿ ಭಾರತದಲ್ಲಿ  ನಾವೀಗಾಗಲೇ ಹಿಡಿತ ಸಾ„ಸಿದ್ದು, ಮುಂದಿನ ದಿನಗಳಲ್ಲಿ ಸೂಪರ್ ಸ್ಪೋರ್ಟ್ಸ್ ವಲಯದಲ್ಲೂ ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುತ್ತೇವೆ.

- ವಕ್ರದಂತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com