ಮಹೀಂದ್ರ ಹೊಸ ಶಕ್ತಿಶಾಲಿ ಟ್ರ್ಯಾಕ್ಟರ್ ಮಾರುಕಟ್ಟೆಗೆ

ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಹೀಂದ್ರ ಆ್ಯಂಡ್ ಮಹೀಂದ್ರ ಹೊಸ ಟ್ರ್ಯಾಕ್ಟರ್ `ಕೇತ್ ಕಿ ಬಾಸ್' ಅಥವಾ ಮಹೀಂದ್ರ 415ಡಿಐ ಮಾದರಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ...
ಮಹೀಂದ್ರದ ಹೊಸ 415ಡಿಐ ಟ್ರ್ಯಾಕ್ಟರ್ (ಸಂಗ್ರಹ ಚಿತ್ರ)
ಮಹೀಂದ್ರದ ಹೊಸ 415ಡಿಐ ಟ್ರ್ಯಾಕ್ಟರ್ (ಸಂಗ್ರಹ ಚಿತ್ರ)

ರಾಂಚಿ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಮಹೀಂದ್ರ ಆ್ಯಂಡ್ ಮಹೀಂದ್ರ ಹೊಸ ಟ್ರ್ಯಾಕ್ಟರ್ `ಕೇತ್ ಕಿ ಬಾಸ್' ಅಥವಾ ಮಹೀಂದ್ರ 415ಡಿಐ ಮಾದರಿಯನ್ನು ಮಾರುಕಟ್ಟೆಗೆ  ಬಿಡುಗಡೆ ಮಾಡಿದೆ.

40 ಅಶ್ವಶಕ್ತಿಯ ಎಂಜಿನ್ ಹೊಂದಿರುವ ಈ ಟ್ರ್ಯಾಕ್ಟರ್ ಮರುವಿನ್ಯಾಸಗೊಳಿಸಿದ್ದು ಶಕ್ತಿಶಾಲಿ ಎಂಜಿನ್ ಮತ್ತು ಇಂಧನ ಮಿತವ್ಯಯ ಹೊಂದಿದೆ. 2.7 ಲೀಟರ್‍ನ 4 ಸಿಲಿಂಡರ್ ಹೊಂದಿರುವ ಕೇತ್ ಕಿ  ಬಾಸ್ ಈ ವರ್ಗದಲ್ಲಿಯೇ ಅತ್ಯುತ್ತಮ ಎಂಜಿನ್ ಆಗಿದೆ. ಶಕ್ತಿಶಾಲಿ ಮತ್ತು ಇಂಧನ ಮಿತವ್ಯಯ ಟ್ರ್ಯಾಕ್ಟರ್ ನತ್ತ ನೋಟ ಹರಿಸಿರುವವರಿಗೆ ಇದು ಸೂಕ್ತ ವಾಹನವಾಗಿದೆ. ಈ ವಾಹನವನ್ನು  ಮಾರುಕಟ್ಟೆಗೆ ಬಿಡುಗಡೆ ಮಾಡಿ ಮಾತನಾಡಿದ ಕಂಪನಿಯ ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರವೀಂದ್ರ ಶಾಹನೆ `ಮಹೀಂದ್ರ 415ಡಿಐ' 40 ಎಚ್‍ಪಿ ವರ್ಗದಲ್ಲಿ ಹೊಸ ದರ್ಜೆಯನ್ನು ಹುಟ್ಟುಹಾಕಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com