ಪ್ಯೂಜೊ ಕಂಪನಿಗೆ ಅಂಬಾಸಿಡರ್ ಬ್ರಾಂಡ್ ಮಾರಾಟ

ಭಾರತದ ಕಾರುಗಳಲ್ಲಿ ಐಕಾನಿಕ್ ಬ್ರಾಂಡ್ ಆಗಿದ್ದ ಅಂಬಾಸಿಡರ್ ನ್ನು ಹಿಂದೂಸ್ತಾನ್ ಮೋಟಾರ್ಸ್ ಯುರೋಪ್ ನ ಕಾರು ತಯಾರಿಕಾ ಸಂಸ್ಥೆ ಪ್ಯೂಜೊ(Peugeot) ಗೆ ಮಾರಾಟ ಮಾಡಿದೆ.
ಅಂಬಾಸಿಡರ್
ಅಂಬಾಸಿಡರ್
ನವದೆಹಲಿ: ಭಾರತದ ಕಾರುಗಳಲ್ಲಿ ಐಕಾನಿಕ್ ಬ್ರಾಂಡ್ ಆಗಿದ್ದ ಅಂಬಾಸಿಡರ್ ನ್ನು ಹಿಂದೂಸ್ತಾನ್ ಮೋಟಾರ್ಸ್ ಯುರೋಪ್ ನ ಕಾರು ತಯಾರಿಕಾ ಸಂಸ್ಥೆ ಪ್ಯೂಜೊ(Peugeot) ಗೆ ಮಾರಾಟ ಮಾಡಿದೆ.
80 ಕೋಟಿ ರೂಪಾಯಿಗಳಿಗೆ ಅಂಬಾಸಿಡರ್ ಬ್ರಾಂಡ್ ನ್ನು ಹಿಂದೂಸ್ತಾನ್ ಮೋಟಾರ್ಸ್ ಮಾರಾಟ ಮಾಡಿದ್ದು, ಸಿಕೆ ಬಿರ್ಲಾ ಸಮೂಹ ಸಂಸ್ಥೆ ಯುರೋಪ್ ನ ಪ್ಯೂಜೊ ಕಂಪನಿಯೊಂದಿಗೆ ಮಾರಾಟದ ಒಪ್ಪಂದಕ್ಕೆ ಸಹಿ ಹಾಕಿದೆ. ಟ್ರೇಡ್ ಮಾರ್ಕ್ ಸೇರಿದಂತೆ ಅಂಬಾಸಿಡರ್ ಬ್ರಾಂಡ್ ನ್ನು ಪುಝೋ ಸಂಸ್ಥೆಗೆ 80 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಲಾಗಿದೆ ಎಂದು ಹಿಂದೂಸ್ತಾನ್ ಮೋಟಾರ್ಸ್ ತಿಳಿಸಿದೆ. 
ಭಾರತೀಯ ಮಾರುಕಟ್ಟೆ ಪ್ರವೇಶಿಸಲು ಯುರೋಪ್ ಮೂಲದ ಸಂಸ್ಥೆ ಪಿಎಸ್ಎ ಕಳೆದ ತಿಂಗಳು  100 ಮಿಲಿಯನ್ ಯುರೋ (ಸುಮಾರು 700 ಕೋಟಿ) ರೂ ಹೂಡಿಕೆ ಮಾಡುವ ಮೂಲಕ ಸಿಕೆ ಬಿರ್ಲಾ ಸಮೂಹ ಸಂಸ್ಥೆಯೊಂದಿಗೆ ಪಾಲುದಾರಿಕೆ ಪಡೆದಿತ್ತು. ನಂತರ ತಮಿಳುನಾಡಿನಲ್ಲಿ ವಾಹನ ತಯಾರಿಕಾ ಘಟಕ ಹಾಗೂ ಪವರ್ ಟ್ರೈನ್ ಉತ್ಪಾದನೆಯ ಘಟಕಗಳನ್ನು ಪ್ರಾರಂಭಿಸಿತ್ತು. 
ಯುರೋಪ್-ಭಾರತೀಯ ಸಂಸ್ಥೆಗಳ ಪಾಲುದಾರಿಕೆಯಿಂದ ಭಾರತೀಯ ಅಟೋಮೊಬೈಲ್ ಮಾರುಕಟ್ಟೆ ಮತ್ತಷ್ಟು ಅಭಿವೃದ್ಧಿಯಾಗುವ ನಿರೀಕ್ಷೆಗಳಿದ್ದು, 2025 ರ ವೇಳೆಗೆ 8-10 ಮಿಲಿಯನ್ ಕಾರುಗಳ ಗುರಿ ತಲುಪುವ ಸಾಧ್ಯತೆ ಇದೆ. ಯುರೋಪ್ ನ ಪಿಎಸ್ಎ ಸಮೂಹ ಸಂಸ್ಥೆ ಪುಝೋ, ಸಿಟ್ರಾನ್, ಡಿಎಸ್ ಬ್ರಾಂಡ್ ಗಳ ಕಾರುಗಳನ್ನು ಮಾರಾಟ ಮಾಡುತ್ತಿದೆ. ಈ ಹಿಂದೆಯೂ ಪಿಎಸ್ಎ ಹಿಂದೂಸ್ತಾನ್ ಮೋಟಾರ್ಸ್ ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದ ಉದಾಹರಣೆಗಳಿವೆ. ಆದರೆ ಈ ಸಂಸ್ಥೆಗಳ ಪಾಲುದಾರಿಕೆ ಒಪ್ಪಂದ 2001 ರಲ್ಲಿ ಅಂತ್ಯಗೊಂಡಿತ್ತು.  2009, 2011 ರಲ್ಲಿ ಪಿಎಸ್ಎ ಸಮೂಹ ಸಂಸ್ಥೆ ಭಾರತ ಮಾರುಕಟ್ಟೆಯನ್ನು ಪ್ರವೇಶಿಸಲು ಸಾಕಷ್ಟು ಯತ್ನಿಸಿತ್ತಾದರೂ ಅದು ಸಾಧ್ಯವಾಗಿರಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com