ಸೂಪರ್ ಬೈಕ್ ಗಳ ಮೇಲಿನ ತೆರಿಗೆ ಶೇ. 12 ರಿಂದ 18ಕ್ಕೆ ಹೆಚ್ಚಳ

2017ರ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೂಪರ್ ಬೈಕ್ ಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದು ಇನ್ನುಂದೆ 1 ಲಕ್ಷ ರೂ ಅಧಿಕ ಮೊತ್ತದ...
ಸೂಪರ್ ಬೈಕ್
ಸೂಪರ್ ಬೈಕ್
ಬೆಂಗಳೂರು: 2017ರ ರಾಜ್ಯ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೂಪರ್ ಬೈಕ್ ಗಳ ಮೇಲಿನ ತೆರಿಗೆಯನ್ನು ಹೆಚ್ಚಳ ಮಾಡಿದ್ದು ಇನ್ನುಂದೆ 1 ಲಕ್ಷ ರೂ ಅಧಿಕ ಮೊತ್ತದ ಸೂಪರ್ ಬೈಕ್ ಖರೀದಿಸಿದರೆ ಹೆಚ್ಚುವರಿಯಾಗಿ ಶೇ. 6ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ. 
ಕಳೆದ 7 ವರ್ಷಗಳಿಂದ ರಾಜ್ಯದಲ್ಲಿ ಮೋಟಾರು ವಾಹನ ತೆರಿಗೆ ಹೆಚ್ಚಳ ಮಾಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ಬಾರಿ ಸರ್ಕಾರ ತೆರಿಗೆ ಹೆಚ್ಚಳ ಮಾಡಿದ್ದು 12ರಷ್ಟಿದ್ದ ತೆರಿಗೆಯನ್ನು 18ಕ್ಕೆ ಏರಿಸಲಾಗಿದೆ. ಹೀಗಾಗಿ 12 ಸಾವಿರ ಬದಲಿಗೆ ಇದೀಗ 18 ಸಾವಿರ ರುಪಾಯಿ ತೆರಿಗೆ ಕಟ್ಟಬೇಕಾಗಿದೆ. 
ಸಾರಿಗೆ ಇಲಾಖೆ ಮೂಲಗಳ ಪ್ರಕಾರ, ನಗರದಲ್ಲಿ ಶೇಖಡ 70ರಷ್ಟು ದ್ವಿಚಕ್ರ ವಾಹನಗಳಿವೆ. ಎಷ್ಟು ಸೂಪರ್ ಬೈಕ್ ಗಳು ನಗರದಲ್ಲಿ ನೊಂದಣಿಯಾಗಿವೆ ಮಾಹಿತಿ ಇಲಾಖೆ ಬಳಿ ಇಲ್ಲ. ಸೂಪರ್ ಬೈಕ್ ಗಳಿಗೆ ಬೆಂಗಳೂರು ಕೇಂದ್ರವಾಗಿದೆ. ಡುಕಟ್ಟಿ, ಟ್ರುಂಪ್, ಕವಸಾಕಿ, ಹಾರ್ಲೆ ಡೇವಿಡ್ ಸನ್ ಮತ್ತು ಡಿಎಸ್ಕೆ ಬೆನೆಲಿ ಮಾದರಿಯ ಸೂಪರ್ ಬೈಕ್ ಗಳು ರಸ್ತೆಯಲ್ಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com