ಹಂಪಿಯಲ್ಲಿ ಅಳಿವು-ಉಳಿವಿಗಾಗಿ ವಾನರ ಸಾಹಸ; ಪ್ರಾಣ ಪಣಕ್ಕಿಟ್ಟು, ಆಹಾರಕ್ಕಾಗಿ ಬರುವ ಕೋತಿಗಳು

ವಿಶ್ವ ವಿಖ್ಯಾತ ಹಂಪಿ ಕೇವಲ ಶಿಲಾ ಸ್ಮಾರಕಗಳನ್ನ ಹೊಂದಿರುವ ಪ್ರವಾಸಿತಾಣ ಮಾತ್ರವಲ, ಹಲವು ಜೀವ ವೈವಿಧ್ಯತೆಗಳನ್ನ ಒಳಗೊಂಡಿರುವ ತೆರೆದ ಪ್ರಾಣಿ ಸಂಗ್ರಾಲಯ ಎನ್ನುವುದಕ್ಕೆ ಈ ಸ್ಟೋರಿ ಒಂದು ಪಕ್ಕಾ ಉದಾಹರಣೆ
ಹಂಪಿಯಲ್ಲಿ ಕೋತಿಗಳ ಸಾಹಸ
ಹಂಪಿಯಲ್ಲಿ ಕೋತಿಗಳ ಸಾಹಸ

ವಿಶ್ವ ವಿಖ್ಯಾತ ಹಂಪಿ ಕೇವಲ ಶಿಲಾ ಸ್ಮಾರಕಗಳನ್ನ ಹೊಂದಿರುವ ಪ್ರವಾಸಿತಾಣ ಮಾತ್ರವಲ, ಹಲವು ಜೀವ ವೈವಿಧ್ಯತೆಗಳನ್ನ ಒಳಗೊಂಡಿರುವ ತೆರೆದ ಪ್ರಾಣಿ ಸಂಗ್ರಾಲಯ ಎನ್ನುವುದಕ್ಕೆ ಈ ಸ್ಟೋರಿ ಒಂದು ಪಕ್ಕಾ ಉದಾಹರಣೆ

ಕರಡಿ,ಚಿರತೆ, ನೀರುನಾಯಿ, ಮೊಸಳೆ,ಮೀನು, ನವಿಲು ಸೇರಿದಂತೆ ಹಲವು ಜಾತಿಯ ಪಕ್ಷಿಗಳು ಇಲ್ಲಿ ನೆಲೆ ಕಂಡಿವೆ. ಅದರಲ್ಲಿ ಹಂಪಿಗೆ ಬರುವ ಪ್ರವಾಸಿಗರನ್ನ ಹೆಚ್ಚು ಆಕರ್ಶಿಸುವ ಪ್ರಾಣಿ ಎಂದರೆ ಇಲ್ಲಿರುವ ಕೋತಿಗಳು. ತಮ್ಮದೇ ರೀತಿಯ ಚೇಷ್ಠೆಯಿಂದ ಪ್ರವಾಸಿಗರನ್ನ ನಕ್ಕು ನಗಲಿಸುವ ಈ ಕೋತಿಗಳು ಕೆಲವೊಂದು ಬಾರಿ ಸಾಕಷ್ಟು ಕಷ್ಟಗಳನ್ನ ಎದುರಿಸಿ ತಮ್ಮ ಪ್ರಾಣವನ್ನ ಕಾಪಾಡಿಕೊಳ್ಳುತ್ತವೆ. 

ಹೌದು ಹಂಪಿಯ ಚಕ್ರತೀರ್ಥ ಪ್ರದೇಶದಲ್ಲಿರುವ ಕೋದಂಡ ರಾಮಸ್ವಾಮಿ ದೇವಸ್ಥಾನದ ಮುಂಬಾಗದಲ್ಲಿ ಕೋತಿಗಳ ಅಳಿವು ಉಳಿವಿನ ಮೂಖ ರೋಧನದ ಹೋರಾಟ ಪ್ರತಿದಿನ ಇಲ್ಲಿ ಗೋಚರವಾಗುತ್ತದೆ. ಈ ವಾನರ ಸೈನ್ಯ ಹಂಪಿಯ ಕೋದಂಡ ರಾಮಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರು ಕೊಡುವ ಹಣ್ಣು ಹಂಪಲು ಮತ್ತು ಪ್ರಸಾದವನ್ನ ತಿಂದು ಇಲ್ಲಿ ವಾಸವಾಗಿವೆ. ಆದರೆ ಇತ್ತೀಚೆಗೆ ಇಲ್ಲಿರುವ ಕೋತಿಗಳಿಗೆ ಚಿರತೆ ಭಯ ಕಾಡತೊಡಗಿದೆ. ಚಿರತೆ ಬಾಯಿಯಿಂದ ತಪ್ಪಿಸಿಕೊಳ್ಳಲು ತುಂಗಭದ್ರ ನದಿಯನ್ನ ಎರಡು ಬಾರಿ ಈಜಿ ದಾಟುವ ಮೂಲಕ ತಮ್ಮ ಪ್ರಾಣ ಉಳಿಸಿಕೊಳ್ಳುತ್ತಿವೆ. ಸಂಜೆಯಾಗುತಿದ್ದಂತೆ ಕೋದಂಡರಾಮಸ್ವಾಮಿ ದೇವಸ್ಥಾನದ ಮುಂಬಾಗದಲ್ಲಿರುವ ಋಷಿ ಮುಖ ಪರ್ವತವನ್ನ ಹತ್ತುವ ಕೋತಿಗಳು, ರಾತ್ರಿ ಪೂರ್ತಿ ಅಲ್ಲಿಯೇ ಉಳಿದು ಬೆಳಗಿನ ಜಾವ ಮತ್ತೆ ಹೋದ ದಾರಿಯಲ್ಲೇ ನದಿಯಲ್ಲಿ ಈಜಿ ಕೋದಂಡ ರಾಮಸ್ವಾಮಿ ದೇವಸ್ಥಾನವನ್ನ ತಲುಪುತ್ತವೆ. 

ಸೂರ್ಯ ಉದಯದ ನಂತರ ಸೂರ್ಯಾಸ್ಥದ ಮೊದಲು ಈ ಕೋತಿಗಳು ಕೆಲ ಹೊತ್ತು ನದಿಯಲ್ಲಿ ಈಜಿ ಹರ ಸಾಹಸ ಪಟ್ಟು ನದಿ ದಾಟಬೇಕು. ಅದರಲ್ಲೂ ಕೆಲವು ತಾಯಿ ಕೊತಿಗಳು ತಮ್ಮ ಮರಿಗಳನ್ನ ಹೆಗಲ ಮೇಲೆ ಹೊತ್ತು ಕೊಂಡು ನದಿಯನ್ನ ಈಜಿ ದಾಟುವ ದೃಶ್ಯ ಎಂತಹವರ ಕರುಳು ಕಿತ್ತು ಬರುವಂತಿರುತ್ತದೆ. ಒಂದು ವೇಳೆ ನದಿ ದಾಟದೆ ಕೋದಂಡರಾಮಸ್ವಾಮಿ ದೇವಸ್ಥಾನದ ಸುತ್ತಮುತ್ತಲಿನ ಕಲ್ಲು ಬೆಟ್ಟಗಳಲ್ಲಿ ಕೋತಿಗಳು ವಾಸಮಾಡಿದರೆ, ಆ ರಾತ್ರಿ ಕೋತಿಗಳು ಚಿರತೆಗೆ ಆಹಾರ ಆಗುವುದು ಖಚಿತ, ಕಾರಣ ಕೋದಂಡರಾಮಸ್ವಾಮಿ ದೇವಸ್ಥಾನ ಹಿಂಬಾಗದಲ್ಲಿರುವ ಈ ಕಲ್ಲು ಗುಡ್ಡ ಚಿರತೆಗಳ ಆವಾಸಸ್ಥಾನವಾಗಿದೆ,ಹಗಲು ಹೊತ್ತಿನಲ್ಲಿ ಕಲ್ಲು ಗುಹೆಯಲ್ಲಿ ಅಡಗಿಕೊಳ್ಳುವ ಚಿರತೆಗಳು ರಾತ್ರಿ ಆದರೆ ಸಾಕು ಆಹಾರಕ್ಕಾಗಿ ಕೋತಿಗಳನ್ನ ಭೇಟೆಗೆ ಬೆನ್ನಟ್ಟುತ್ತವೆ. ಕೆಲವೊಂದು ಬಾರಿ ಹಂಪಿಯ ಪ್ರವಾಸಿ ಪೋಲಿಸ್ ಠಾಣೆಯ ಬಳಿ ವರಗೆ ಕೋತಿಗಳನ್ನ ಬೆನ್ನಟ್ಟಿ ಬಂದ ಉದಾರಣೆಗಳು ಇವೆ.

ಹಾಗಾಗಿ ಕೋತಿಗಳು ಜನಗಳ ಸುಳಿವು ಇರುವವರೆಗೆ ಈ ಭಾಗದಲ್ಲಿ ಸಂಚರಿಸಿ ತಮ್ಮ ಹೊಟ್ಟೆ ತುಂಬಿಸಿಕೊಂಡು ನಂತರ ಋಷಿ ಮುಖ ಪರ್ವತ ಏರುತ್ತವೆ. ಬೆಳಗ್ಗೆ ಮತ್ತೆ ಜನ ಸಂದಣಿ ಹೆಚ್ಚಾದ ಮೇಲೆ ಈಜಿ ದೇವಸ್ಥಾನದ ಆವರಣ ಪ್ರವೇಶಿಸುತ್ತವೆ. ಹಾಗಾಗಿಯೇ ಹಂಪಿಯಲ್ಲಿ ಸಾಕಷ್ಟು ಚಿರತೆಗಳು ಅಡಗಿಕೊಂಡಿದ್ದರೂ ಇಲ್ಲಿನ ಯಾವೊಬ್ಬ ಮನುಷ್ಯನ ಮೇಲೆ ಅಥವಾ ಹಂಪಿಗೆ ಬರುವ ಪ್ರವಾಸಿಗರ ಮೇಲೆ ಚಿರತೆ ದಾಳಿ ನಡೆಸಿದ ಉದಾಹರಣೆಗಳಿಲ್ಲ, ಕಲ್ಲು ಬೆಟ್ಟಗಳ ಮೇಲೆ ಕಣ್ಣಿಗೆ ಕಾಣುವ ರೀತಿಯಲ್ಲಿ ಕುಳಿತುಕೊಳ್ಳುವ ಚಿರತೆಗಳು ಕೆಲವೊಂದು ಬಾರಿ ಹಂಪಿಯ ಪ್ರವಾಸಿಗರ ಆಕರ್ಷಣೀಯವಾಗಿಬಿಡುತ್ತವೆ. ಕೋತಿಗಳು ಪಡುವ ಈ ಕಷ್ಟ ಮನುಷ್ಯನಿಗೆ ಬಂದಿದ್ದರೆ ಇದುವರೆಗೆ ಎಷ್ಟೆಲ್ಲ ರಾದ್ದಾಂತಗಳು ಆಗಿಬಿಡುತ್ತಿದ್ದವೋ ಏನೊ, ಆದರೆ ಇದು ಪ್ರಾಣಿ ಸಂಕುಲದ ಆಹಾರ ಪದ್ದತಿಯ ಸರಪಳಿ ಆಗಿದೆ. ಒಂದು ಕಾಡು ಪ್ರಾಣಿ ಮತ್ತೊಂದು ಪ್ರಾಣಿಯನ್ನ ಭೇಟೆಯಾಡೆ ತಿಂದರೆನೇ ಇಲ್ಲಿ ಮನುಷ್ಯ ಕ್ಷೇಮವಾಗಿರುವುದಕ್ಕೆ ಸಾಧ್ಯ. ಅದೇ ರೀತಿ ಪರಿಸರ ಸಮತೋಲನವಾಗಿರಲು ಸಾಧ್ಯ,ಇಲ್ಲದಿದ್ದರೆ ಹಂಪಿಗೆ ಬರುವ ಪ್ರತಿಯೊಬ್ಬ ಪ್ರವಾಸಿಗರು ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತು.

ಮಾಹಿತಿ: ಆರ್ ಸಿ ನೆಟ್ವರ್ಕ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com