ರಾಯಲ್‌ ಎನ್‌ಫೀಲ್ಡ್ ನಿಂದ ಹೊಸ ಕ್ರೂಸರ್ ಬೈಕ್ ಮೀಟಿಯೋರ್ 350 ಮಾರುಕಟ್ಟೆಗೆ

ಕೋವಿಡ್‌ ಸಾಂಕ್ರಾಮಿಕ ವ್ಯಾಪಿಸಿದ ನಂತರ ರಾಯಲ್‌ ಎನ್‌ಫೀಲ್ಡ್‌ ಆರಂಭಿಸಿರುವ ‘ಸರ್ವಿಸ್‌ ಆನ್‌ ವ್ಹೀಲ್‌’ ಯೋಜನೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಸ್ಥೆಯ ಸಿಇಒ ವಿನೋದ್‌ ಕೆ ದಾಸರಿ ಹೇಳಿದ್ದಾರೆ.
ರಾಯಲ್‌ ಎನ್‌ಫೀಲ್ಡ್-ಕ್ರೂಸರ್ ಬೈಕ್ ಮೀಟಿಯೋರ್ 350
ರಾಯಲ್‌ ಎನ್‌ಫೀಲ್ಡ್-ಕ್ರೂಸರ್ ಬೈಕ್ ಮೀಟಿಯೋರ್ 350

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ವ್ಯಾಪಿಸಿದ ನಂತರ ರಾಯಲ್‌ ಎನ್‌ಫೀಲ್ಡ್‌ ಆರಂಭಿಸಿರುವ ‘ಸರ್ವಿಸ್‌ ಆನ್‌ ವ್ಹೀಲ್‌’ ಯೋಜನೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಸಂಸ್ಥೆಯ ಸಿಇಒ ವಿನೋದ್‌ ಕೆ ದಾಸರಿ ಹೇಳಿದ್ದಾರೆ.

ಮಧ್ಯಮ ಗಾತ್ರದ ಮೋಟಾರ್‌ಸೈಕಲ್‌ (250ಸಿಸಿ -750ಸಿಸಿ) ವಿಭಾಗದಲ್ಲಿ ಮುಂಚೂಣಿಯಲ್ಲಿರುವ ರಾಯಲ್‌ ಎನ್‌ಫೀಲ್ಡ್‌ ಎಲ್ಲಾ-ಹೊಸ ಸುಲಭ ಕ್ರೂಸರ್‌ ರಾಯಲ್ ಎನ್‌ಫೀಲ್ಡ್ ಟಿಯೋರ್ 350 ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ನಂತರ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಹೊಸ ಸಹಜತೆ ಡಿಜಿಟಲ್‌ ವ್ಯವಹಾರಕ್ಕೆ ಹೆಚ್ಚಿನ ಒತ್ತು ನೀಡಿದೆ. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ಸಲುವಾರಿ ‘ರಾಯಲ್‌ ಎನ್‌ಫೀಲ್ಡ್‌ ಮೆಕ್ಯಾನಿಕ್‌ ಆ್ಯಪ್‌’ ಒದಗಿಸಲಾಗಿದೆ. ಜೊತೆಗೆ, ‘ಡೂ ಇಟ್‌ ಯುವರ್‌ಸೆಲ್ಫ್‌’ ಎಂದು ಟೂಲ್‌ ಕಿಟ್‌ ಒದಗಿಸಲಾಗಿರುತ್ತದೆ. ಇದು ಗ್ರಾಹಕರಿಗೆ ಸ್ವಯಂ ರಿಪೇರಿ ಮಾಡಿಕೊಳ್ಳಲು  ನೆರವಾಗುತ್ತದೆ ಎಂದರು.

ಕೋವಿಡ್‌ ಸಾಂಕ್ರಾಮಿಕ ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ. ಆದರೆ, ರಾಯಲ್‌ ಎನ್‌ಫೀಲ್ಡ್‌ ಮೋಟಾರ್‌ ಬೈಕ್‌ಗಳಿಗೆ ಬೇಡಕೆ ಕುಸಿದಿಲ್ಲ. ಐದು ವರ್ಷಗಳ ಅವಧಿಯ ಗುರಿಯನ್ನು ಗಮನದಲ್ಲಿರಿಸಿಕೊಂಡಾಗ ಅಂತಹ ಪರಿಣಾಮಗಳನ್ನೇನು ಬೀರಿಲ್ಲ. ಶೀಘ್ರದಲ್ಲೇ ಎಲ್ಲಾ ಸಹಜ ಸ್ಥಿತಿಗೆ ಬರುವ ನಂಬಿಕೆಯಿದೆ ಎಂಬ  ವಿಶ್ವಾಸ ವ್ಯಕ್ತಪಡಿಸಿದರು. ಮೀಟಿಯೊರ್ 350 ಮೋಟಾರ್ ಬೈಕ್ ಗ್ರಾಹಕರು ಬಯಸಿದನ ರೈಡಿಂಗ್‌ ಅನುಭವ ನೀಡಲಿದೆ. ಸುದೀರ್ಘ ಡ್ರೈವ್‌ಗೆ ಇದು ಮುಧದಾಯಕವಾಗಲಿದೆ. ರಾಯಲ್ ಎನ್‌ಫೀಲ್ಡ್ ಟಿಯೋರ್‌ 350 ಫೈರ್‌ಬಾಲ್, ಸ್ಟೆರ್ಲಾ ಮತ್ತು ಸೂಪರ್‌ ನೋವಾ ಎಂಬ 3 ಎಡಿಶನ್‌‌‌‌ಗಳಲ್ಲಿ ಲಭ್ಯವಿರುತ್ತದೆ.  ಇದು ಗ್ರಾಹಕರಿಗೆ ಎಂಟು ಬಣ್ಣಗಳ ಆಯ್ಕೆ ಕೂಡ ನೀಡುತ್ತದೆ.

ರಾಯಲ್ಎನ್‌ಫೀಲ್ಡ್ ಮೀಟಿಯೋರ್ 350 ಬಿಡುಗಡೆಕುರಿತು ಪ್ರತಿಕ್ರಿಯಿಸಿದ ಐಷರ್‌ ಮೋಟಾರ್‌ ಲಿಮಿಟೆಡ್‌ ಮ್ಯಾನೇಜಿಂಗ್‌ ಡೈರೆಕ್ಟರ್‌ ಸಿದ್ದಾರ್ಥ ಲಾಲ್‌, ಮೀಟಿಯೋರ್ 350 ಅತ್ಯಂತಪರಿಷ್ಕೃತ, ಸುಲಭ ರೈಡಿಂಗ್ ಒದಗಿಸುವ ಮೋಟಾರ್‌ ಬೈಕ್‌  ಆಗಿದೆ. ಅತ್ಯಾಧುನಿಕ ತಾಂತ್ರಿಕತೆಗಳನ್ನು ಕ್ಲಾಸಿಕ್‌ ಕ್ರೂಸರ್‌ ಸ್ಟೈಲ್‌ ಆಗಿ ಸಂಯೋಜಿಸಲಾಗಿದೆ. ಹೊಸ ರೈಡರ್‌‌ಗಳು ಮತ್ತು ತಜ್ಞ ರೈಡರ್‌‌ಗಳಿಬ್ಬರಿಗೂ ಉತ್ತಮ ಪ್ರಯಾಣದ ಅನುಭವ ಒದಗಿಸುವ ಮೋಟಾರ್‌‌ ಸೈಕಲ್ ತಯಾರಿಸುವುದು ನಮ್ಮ ಇಚ್ಛೆಯಾಗಿತ್ತು. ಮೀಟಿಯೊರ್ 350 ಅವೆಲ್ಲವನ್ನು ಹೊಂದಿರುವ  ಪರಿಪೂರ್ಣವಾದ ಬೈಕ್ ಆಗಿದೆ. ಇದು ದೂರ ಪ್ರಯಾಣ, ರೈಡಿಂಗ್‌ ಮತ್ತು ಹೈವೇ ಪ್ರಯಾಣಕ್ಕಾಗಿ ಉತ್ತಮವಾಗಿದೆ. ಹಾಗಿದ್ದರೂ ಅತ್ಯುತ್ತಮ ಸಿಟಿ ರೈಡಿಂಗ್ ಅನುಭವವನ್ನೂ ನೀಡುತ್ತದೆ. ಮೋಟಾರ್‌‌ ಸೈಕಲ್‌‌ನ ಬ್ಯಾಲನ್ಸ್, ಚುರುಕಾದ ನಿರ್ವಹಣೆ ಮತ್ತು ಅಪ್ ರೇಟೆಡ್‌ ಬ್ರೇಕಿಂಗ್‌ ಉತ್ತಮ ಸವಾರಿ ಅನುಭವ  ಒದಗಿಸುತ್ತವೆ. 

ಜನರು ಪ್ರಯಾಣಿಸಬೇಕಾದ ರಸ್ತೆಯ ಬಗ್ಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಇದು ಸ್ಪಷ್ಟ ಮಾಹಿತ ನೀಡಿ ಸಹಕರಿಸಲಿದೆ. ಇದು ರೈಡರ್‌ಗೆ ಗೊಂದಲವಾಗದಂತೆ ನೋಡಿಕೊಳ್ಳುತ್ತದೆ ಮತ್ತುದಾರಿ ತಪ್ಪಿ ಕಷ್ಟ ನುಭವಿಸುವುದನ್ನು ತಡೆಯುತ್ತದೆ ಎಂದರು.

ಈ ಕುರಿತು ಮಾತನಾಡಿದ ದಾಸರಿ, ಮೀಟಿಯೊರ್ 350 ರೊಂದಿಗೆ, ನಾವು ಅದ್ಭುತವಾದ ಮೋಟಾರ್‌ಸೈಕಲ್ ಅನ್ನು ನೀಡಲು ಮುಂದಾಗಿದ್ದೇವೆ. ನಮ್ಮ ಗ್ರಾಹಕರು ತಮ್ಮ ಹೊಸ ಮೋಟರ್‌ ಸೈಕಲ್‌ಗಳನ್ನು ಆರ್ಡರ್ ಮಾಡುವಾಗ ವಿಶಾಲ ವ್ಯಾಪ್ತಿಯ ಪರ್ಸನಲೈಸೇಶನ್ ಆಪ್ಷನ್‌‌ ಗಳನ್ನು ನೀಡುವ ಮೊದಲ ಭಾರತೀಯ  ಮೋಟಾರ್‌ ಸೈಕಲ್‌ ಕಂಪನಿ ಎನ್ನುವ ಕುರಿತು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದರು.

349 ಸಿಸಿ ಏರ್-ಆಯಿಲ್ ಕೂಲ್ಡ್ ಸಿಂಗಲ್-ಸಿಲಿಂಡರ್ ಎಂಜಿನ್‌ನೊಂದಿಗೆ, 4000 ಆರ್‌ಪಿಎಂನಲ್ಲಿ 20.2 ಬಿಹೆಚ್‌ಪಿ ಮತ್ತು 27 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಬ್ಯಾಲೆನ್ಸರ್ ಶಾಫ್ಟ್‌ನೊಂದಿಗೆ ವಿನ್ಯಾಸಗೊಳಿಸಲಾಗಿರುವ ಈ ಹೊಸ ಪ್ಲಾಟ್‌ಫಾರ್ಮ್ ಸುಗಮ ಮತ್ತು ಸುಸಜ್ಜಿತ ಸವಾರಿ ಅನುಭವವನ್ನು  ನೀಡುತ್ತದೆ. ಹೊಸ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಐದನೇ ಗೇರ್ ಒತ್ತಡ ರಹಿತ ಮತ್ತು ಆರ್ಥಿಕ ಹೆದ್ದಾರಿ ಪ್ರಯಾಣಕ್ಕಾಗಿ ಸೂಕ್ತವಾಗಿದೆ ಮತ್ತು ಅಂತರ್ನಿರ್ಮಿತ ದಟ್ಟಣೆಯಲ್ಲಿ ಸುಲಭವಾದ ಗೇರ್ ಬದಲಾವಣೆಗಳಿಗೆ 7-ಪ್ಲೇಟ್ ಕ್ಲಚ್ ಹೊಂದಿದೆ. ಫೈರ್‌ಬಾಲ್ 350 ಆರಂಭಿಕ ದರದಲ್ಲಿ  1,75,817 ರೂ., ಫೈರ್‌ಬಾಲ್‌ಗೆ 1,81,326 ರೂ. ಮತ್ತು ರೂ. ಸೂಪರ್ನೋವಾ ಆವೃತ್ತಿಗಳಿಗೆ 1,90,536 ರೂ. (ಎಲ್ಲಾ ಎಕ್ಸ್ ಶೋರೂಂ ಚೆನ್ನೈ ಬೆಲೆಗಳು) ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com