ಬಜಾಜ್ ಪಲ್ಸರ್, ಹೊಂಡಾಗೆ ಸಡ್ಡು: 'ರೈಡರ್' ಬೈಕ್ ಲಾಂಚ್ ಮಾಡಿದ ಟಿವಿಎಸ್!; ಬೆಲೆ ಮತ್ತು ಇತರೆ ಮಾಹಿತಿ ಇಲ್ಲಿದೆ

ಮಧ್ಯಮ ವರ್ಗದ ಬೈಕ್ ಮಾರುಕಟ್ಟೆ ಮೇಲೆ ಬಿಗಿಯಾದ ಹಿಡಿತ ಸಾಧಿಸಿರುವ ಬಜಾಜ್ ಪಲ್ಸರ್ ಮತ್ತು ಹೊಂಡಾಗೆ ಪೈಪೋಟಿ ನೀಡುವ ಸಲುವಾಗಿ ಟಿವಿಎಸ್ ಮುಂದಾಗಿದ್ದು, ತನ್ನ ನೂತನ ಬೈಕ್ 'ರೈಡರ್' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 
ಟಿವಿಎಸ್ ರೈಡರ್ ಬೈಕ್
ಟಿವಿಎಸ್ ರೈಡರ್ ಬೈಕ್

ನವದೆಹಲಿ: ಮಧ್ಯಮ ವರ್ಗದ ಬೈಕ್ ಮಾರುಕಟ್ಟೆ ಮೇಲೆ ಬಿಗಿಯಾದ ಹಿಡಿತ ಸಾಧಿಸಿರುವ ಬಜಾಜ್ ಪಲ್ಸರ್ ಮತ್ತು ಹೊಂಡಾಗೆ ಪೈಪೋಟಿ ನೀಡುವ ಸಲುವಾಗಿ ಟಿವಿಎಸ್ ಮುಂದಾಗಿದ್ದು, ತನ್ನ ನೂತನ ಬೈಕ್ 'ರೈಡರ್' ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 

 ಹೊಸ ರೈಡರ್(Raider) ಬೈಕ್ ಸುಧಾರಿತ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗಿದ್ದು, ಈ ರೈಡರ್ ಬೈಕ್ 125ಸಿಸಿ ಬೈಕ್ ವಿಭಾಗದಲ್ಲಿಯೇ ವಿನೂತನ ಫೀಚರ್ಸ್ ಮತ್ತು ತಂತ್ರಜ್ಞಾನವನ್ನು ಹೊಂದಿದೆ.  ತಂತ್ರಜ್ಞಾನ ಸೌಲಭ್ಯಗಳ ಆಧಾರದ ಮೇಲೆ ಪ್ರಮುಖ ಮೂರು ವೆರಿಯೆಂಟ್ ಬಿಡುಗಡೆ ಮಾಡಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಡ್ರಮ್, ಡಿಸ್ಕ್ ಮತ್ತು ಕನೆಕ್ಟೆಡ್ ವೆರಿಯೆಂಟ್ ಬೈಕ್ ಗಳನ್ನು ಖರೀದಿಸಬಹುದಾಗಿದೆ.

ಹೊಸ ಬೈಕಿನಲ್ಲಿ ಆಕರ್ಷಕ ಹೆಡ್‌ಲ್ಯಾಂಪ್ ಸೆಟ್‌ಅಪ್, ಎಲ್ಇಡಿ ಲೈಟಂಗ್, ವಿಭಜಿತವಾದ ಎಲ್ಇಡಿ ಡಿಆರ್‌ಎಲ್‌ಗಳೊಂದಿಗೆ ಹಿಂಬದಿಯಲ್ಲೂ ಎಲ್ಇಡಿ ಟೈಲ್‌ಲ್ಯಾಂಪ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ 10-ಲೀಟರ್ ಡ್ಯುಯಲ್ ಫ್ಯೂಲ್ ಟ್ಯಾಂಕ್, ಸಿಂಗಲ್ ಪೀಸ್ ಹ್ಯಾಂಡಲ್ ಬಾರ್, ಡ್ಯುಯಲ್ ಟೋನ್ ಫ್ರಂಟ್ ಮಡ್‌ಗಾರ್ಡ್, ಕ್ರ್ಯಾಶ್ ಪ್ರೊಟೆಕ್ಟರ್, ಎಂಜಿನ್ ಸಂಪ್ ಗಾರ್ಡ್, ಸ್ಲ್ಪಿಟ್ ಸೀಟ್, ಅಪ್-ಸ್ವೆಪ್ಟ್ ಎಕ್ಸಾಸ್ಟ್, 17-ಇಂಚಿನ ಅಲಾಯ್ ವೀಲ್ಹ್, ಹೊಲೊಜೆನ್ ಟರ್ನ್ ಇಂಡಿಕೇಟರ್ ಅನ್ನು ಹೊಂದಿದೆ.

125 ಸಿಸಿ ಕಮ್ಯೂಟರ್ ಮೋಟಾರ್‌ಸೈಕಲ್ ವಿಭಾಗದಲ್ಲೇ ವಿಶೇಷ ತಂತ್ರಜ್ಞಾನ ಮತ್ತು ವೈಶಿಷ್ಟ್ಯತೆಗಳನ್ನು ಹೊಂದಿರುವ ರೈಡರ್ ಬೈಕ್ ಮಾದರಿಯು ನಗರ ಪ್ರಯಾಣಿಕರಿಗೆ ಅಗತ್ಯವಿರುವ ಎಲ್ಲಾ ಅಗತ್ಯ ವೈಶಿಷ್ಟ್ಯತೆಗಳನ್ನು ಮತ್ತು ಅನುಕೂಲಕಲತೆಗಳನ್ನು ಹೊಸ ಬೈಕ್‌ನಲ್ಲಿ ಸೇರಿಸಲಾಗಿದೆ. ಅಂತೆಯೇ ಟಾಪ್-ಸ್ಪೆಕ್ ರೂಪಾಂತರವು 5-ಇಂಚಿನ ಟಿಎಫ್‌ಟಿ ಸ್ಕ್ರೀನ್ ಅನ್ನು ಇನ್ಸ್ಟ್ರುಮೆಂಟ್ ಕ್ಲಸ್ಟರ್‌ಗೆ ಹೊಂದಿದ್ದು, ಇದರಲ್ಲಿ ಬ್ರ್ಯಾಂಡ್‌ನ ಸ್ಮಾರ್ಟ್‌ಎಕ್ಸ್‌ಕನೆಕ್ಟ್ ಸಂಪರ್ಕಿತ ತಂತ್ರಜ್ಞಾನವನ್ನು ಒಳಗೊಂಡಿದೆ. ಅಲ್ಲದೆ ಸ್ಮಾರ್ಟ್ ಫೋನ್ ಸಂಪರ್ಕಿತ ಟಿಎಫ್‌ಟಿ ಡಿಸ್‌ಪ್ಲೇ ಮೂಲಕ ಹಲವಾರು ಮಾಹಿತಿಗಳನ್ನು ತಿಳಿದುಕೊಳ್ಳಬಹುದಾಗಿದ್ದು, ಆರಂಭಿಕ ಮಾದರಿಗಿಂತಲೂ ಟಾಪ್ ಎಂಡ್ ಮಾದರಿಯಲ್ಲಿ ಹೆಚ್ಚಿನ ಮಟ್ಟದ ಕನೆಕ್ಟೆಡ್ ಫೀಚರ್ಸ್‌ಗಳಿರಲಿವೆ.

ಉಳಿದಂತೆ ಮಲ್ಟಿಪಲ್ ಟ್ರಿಪ್ ಮೀಟರ್, ಗೇರ್ ಪೋಷಿಷನ್ ಇಂಡಿಕೇಟರ್, ಎಂಜಿನ್ ಸೈಡ್-ಸ್ಟ್ಯಾಂಡ್ ಕಟ್-ಅಪ್ ಇಂಡಿಕೇಟರ್, ಟೈಮ್, ಟ್ಯಾಚೊಮೀಟರ್, ಫ್ಯೂಲ್ ರೇಂಜ್, ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ವಾಯ್ಸ್ ಅಸಿಸ್ಟೆನ್ಸ್, ಕಾರ್ ಮ್ಯಾನೆಜ್‌ಮೆಂಟ್, ಮೆಸೇಜ್ ನೋಟಿಫಿಕೇಷನ್ ಅಲರ್ಟ್, ಹೈ ಸ್ಪೀಡ್ ಅಲರ್ಟ್, ಲೋ ಫ್ಯೂಲ್ ಅಸಿಸ್ಟೆನ್ಸ್, ಡಿಜಿಟಲ್ ಡಾಕ್ಯುಮೆಂಟ್ ಸ್ಟೋರೇಜ್ ನಂತಹ ಅತ್ಯಾಧುನಿಕ ಫೀಚರ್ಸ್ ಗಳನ್ನು ಹೊಂದಿದೆ.

ಇದರ ಜೊತೆಗೆ ಹೊಸ ರೈಡರ್ ಬೈಕಿನ ಟಿಎಫ್‌ಟಿ ಡಿಸ್‌ಪ್ಲೇನಲ್ಲಿ ಆಟೋ ಬ್ರೈಟ್‌ನೆಸ್ ವೈಶಿಷ್ಟ್ಯತೆಯನ್ನು ಒಳಗೊಂಡಿದ್ದು, ಬೈಕ್ ಚಾಲನೆ ವೇಳೆ ಹಗಲು ಮತ್ತು ರಾತ್ರಿ ವೇಳೆಯಲ್ಲಿ ಹೆಡ್‌ಲ್ಯಾಂಪ್ ಬೆಳಕಿನ ಪ್ರಮಾಣವನ್ನು ಏರಿಳಿತ ಮಾಡಿಕೊಳ್ಳಬಹುದಾಗಿದೆ. ಇದರೊಂದಿಗೆ ಹೊಸ ಬೈಕಿನ ಹಿಂಬದಿಯ ಆಸನ ಕೆಳಗೂ ಸ್ಟೋರೇಜ್ ಫೇಸ್ ನೀಡಲಾಗಿದ್ದು, ಸಣ್ಣಗಾತ್ರದಲ್ಲಿರುವ ಸ್ಟೋರೇಜ್ ಫೇಸ್‌ನಲ್ಲಿ ಅಗತ್ಯವಿರುವ ವಸ್ತುಗಳು ಸಂಗ್ರಹ ಮಾಡಬಹುದಾಗಿದೆ.

ಇದನ್ನೂ ಓದಿ: ಚಾಲನಾ ಅನುಭವ: ಹಳೆ ವರ್ಚಸ್ಸು, ಹೊಸ ತಂತ್ರಜ್ಞಾನ ಅಳವಡಿಸಿಕೊಂಡ ರಾಯಲ್‌ ಎನ್‌ಫೀಲ್ಡ್‌ ಕ್ಲಾಸಿಕ್‌ 350
 
ಎಂಜಿನ್ ಸಾಮರ್ಥ್ಯ
ರೈಡರ್ ಬೈಕ್ ಮಾದರಿಯಲ್ಲಿ ಏರ್ ಕೂಲ್ಡ್, ಸಿಂಗಲ್ ಸಿಲಿಂಡರ್ 124.8 ಸಿಸಿ ಎಂಜಿನ್ ಜೋಡಣೆ ಮಾಡಿದ್ದು, ಇದು 5-ಸ್ಪೀಡ್ ಗೇರ್‌ಬಾಕ್ಸ್ ಸೌಲಭ್ಯದೊಂದಿಗೆ 11.2 ಬಿಎಚ್‌ಪಿ ಮತ್ತು 11.2 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹಾಗೆಯೇ ಹೊಸ ಬೈಕ್ ಮಾದರಿಯು ಇಂಧನ ದಕ್ಷತೆಯಲ್ಲೂ ಗಮನಸೆಳೆಯಲಿದ್ದು, ರೈಡರ್ ಬೈಕ್ ಮಾದರಿಯು ಇಕೋ ಮತ್ತು ಸ್ಪೋರ್ಟ್ ರೈಡಿಂಗ್ ಮೋಡ್‌ಗಳೊಂದಿಗೆ ಪ್ರತಿ ಲೀಟರ್‌ಗೆ 67 ಕಿ.ಮೀ ಮೈಲೇಜ್ ನೀಡುವುದಾಗಿ ಟಿವಿಎಸ್ ಕಂಪನಿಯು ಹೇಳಿಕೊಂಡಿದೆ.

ಪರ್ಫಾಮೆನ್ಸ್
ಪ್ರತಿ ಗಂಟೆಗೆ 99 ಕಿ.ಮೀ ಟಾಪ್ ಸ್ಪೀಡ್ ಹೊಂದಿರುವ ಹೊಸ ರೈಡರ್ ಬೈಕಿನಲ್ಲಿ ಕಂಪನಿಯು ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಸುರಕ್ಷತೆಗೂ ಆದ್ಯತೆ ನೀಡಿದ್ದು, 30 ಎಂಎಂ ಫ್ರಂಟ್ ಟೆಲಿಸ್ಕೋಫಿಕ್ ಸಸ್ಷೆಂಷನ್ ಮತ್ತು 5 ಹಂತದಲ್ಲಿ ಹೊಂದಾಣಿಕೆ ಮಾಡಬಹುದಾದ ರಿಯರ್ ಮೊನೊಶಾಕ್ ಪ್ರಿ-ಲೋಡ್ ಅಡ್ಜೆಸ್ಟ್ ಸಸ್ಷೆಂಷನ್ ಜೋಡಣೆಯನ್ನು ಹೊಂದಿದೆ. 

ಟೈರ್ ಮತ್ತು ಬ್ರೇಕ್ ಸಾಮರ್ಥ್ಯ
ಹೊಸ ಬೈಕಿನಲ್ಲಿ ಯುರೋಗ್ರಿಪ್ ರಿಮೊರಾ ಟ್ಯೂಬ್‌ಲೆಸ್ ಟೈರ್‌ನೊಂದಿಗೆ ಫ್ರಂಟ್ ಮತ್ತು ರಿಯರ್‌ನಲ್ಲಿ 17 ಇಂಚಿನ ಅಲಾಯ್ ವ್ಹೀಲ್, ಮುಂಭಾಗದ ಚಕ್ರದಲ್ಲಿ 240ಎಂಎಂ ಪೆಟಲ್ ಡಿಸ್ಕ್, ಹಿಂಬದಿಯ ಚಕ್ರದಲ್ಲಿ 130ಎಂಎಂ ಡ್ರಮ್ ಬ್ರೇಕ್ ನೀಡಲಾಗಿದೆ.
 
ಬಣ್ಣ
ರೈಡರ್ ಮಾದರಿಯಲ್ಲಿ ಟಿವಿಎಸ್ ಕಂಪನಿಯು ಬೈಕ್ ಡಿಸೈನ್‌ಗೆ ಹೊಂದುವ ಸ್ಟ್ರೀಕಿಂಗ್ ರೆಡ್, ಬ್ಲೇಜಿಂಗ್ ಬ್ಲ್ಯೂ, ಬ್ಲ್ಯಾಕ್ ಮತ್ತು ಫ್ಲೈರಿ ರೆಡ್ ಎಂಬ ನಾಲ್ಕು ಬಣ್ಣಗಳ ಆಯ್ಕೆ ನೀಡಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಬಣ್ಣದ ಆಯ್ಕೆ ಖರೀದಿಗೆ ಲಭ್ಯವಿರಲಿವೆ ಎಂದು ಹೇಳಿದೆ.  

ಬೆಲೆ
ದೆಹಲಿಯಲ್ಲಿ ಈ ಬೈಕ್ ನ ಎಕ್ಸ್ ಶೋರೂಂ ಬೆಲೆ 77, 500 ರೂಗಳಿಂದ ಆರಂಭವಾಗಲಿದ್ದು, ವಿವಿಧ ನಗರಗಳು, ಬೈಕ್ ಫೀಚರ್ಸ್, ವೇರಿಯಂಟ್ ಬೈಕ್ ಗಳ ಬೆಲೆ ಕೊಂಚ ಬದಲಾವಣೆಯಾಗಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com