
ಹಂಪಿಯಲ್ಲಿ ಪ್ರವಾಸಿಗರ ದಂಡು
ಹುಬ್ಬಳ್ಳಿ: ಹೊಸ ವರ್ಷದ ಸಂಭ್ರಮಕ್ಕೆ ಇನ್ನು 20 ದಿನಗಳು ಬಾಕಿ ಇರುವಂತೆಯೇ ಉತ್ತರ ಕರ್ನಾಟಕದ ಪ್ರವಾಸೋದ್ಯಮ ತಾಣಗಳಿಗೆ ಭಾರಿ ಬೇಡಿಕೆ ಬಂದಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಎರಡು ವರ್ಷಗಳಿಂದ ಕಠಿಣ ಸಮಯವನ್ನು ಎದುರಿಸಿದ ಪ್ರವಾಸೋದ್ಯಮ ಈ ವರ್ಷ ಸಂಪೂರ್ಣ ಚೇತರಿಸಿಕೊಂಡಿದೆ. ಹೊಸ ವರ್ಷದ ಸಂಭ್ರಮಕ್ಕಾಗಿ ಈಗ ಹಂಪಿ, ಗೋಕರ್ಣ, ಜೋಯಿಡಾ ಮತ್ತು ದಾಂಡೇಲಿಯಂತಹ ತಾಣಗಳಲ್ಲಿ ಪ್ರವಾಸಿಗರು ರೆಸಾರ್ಟ್, ಮತ್ತು ಹೋಸ್ಟೇಗಳನ್ನು ಬುಕ್ ಮಾಡುತ್ತಿದ್ದಾರೆ.
ಇದನ್ನು ಓದಿ: ಜಿ20 ಪ್ರತಿನಿಧಿಗಳಿಗೆ ಹಂಪಿ, ನಂದಿ ಬೆಟ್ಟ ಪ್ರವಾಸ ಆಯೋಜನೆ!
ಹಂಪಿ ಮತ್ತು ಸುತ್ತಮುತ್ತಲಿನ ಅನೇಕ ರೆಸಾರ್ಟ್‌ಗಳು, ಹೋಮ್‌ಸ್ಟೇಗಳನ್ನು ದೇಶಿ ಮತ್ತು ವಿದೇಶಿ ಪ್ರವಾಸಿಗರು ಬುಕ್ ಮಾಡಿದ್ದಾರೆ. ಸ್ಥಳೀಯ ಮಾರ್ಗದರ್ಶಕರ ಪ್ರಕಾರ ಹಂಪಿಯಲ್ಲಿ ವಿದೇಶಿ ಪ್ರಜೆಗಳ ನೋಂದಣಿ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಡಬಲ್ ಆಗಿದೆ.
"ಡಿಸೆಂಬರ್ ಮೊದಲ ವಾರದಲ್ಲಿಯೇ ಅತಿಥಿ ಬುಕಿಂಗ್‌ಗಾಗಿ ವಿಚಾರಿಸಲಾಗುತ್ತದೆ. ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಡಿಸೆಂಬರ್ ಮತ್ತು ಜನವರಿಯಲ್ಲಿ ಗೋವಾಕ್ಕೆ ಭೇಟಿ ನೀಡುತ್ತಾರೆ. ಆದರೆ ಈ ಬಾರಿ ಹಂಪಿ, ಕಮಲಾಪುರ ಮತ್ತು ಆನೆಗುಂದಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ" ಎಂದು ಹಂಪಿಯ ಹಿರಿಯ ಪ್ರವಾಸಿ ಮಾರ್ಗದರ್ಶಿ ನಾಗರಾಜ್ ಎನ್ ಅವರು ತಿಳಿಸಿದ್ದಾರೆ.
ಗಣೇಶಗುಡಿಯ ಹಾರ್ನ್‌ಬಿಲ್ ರೆಸಾರ್ಟ್‌ನ ಮಾಲೀಕ ಉಮೇಶ್ ಜಿ ಇ ಮಾತನಾಡಿ, ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. "ದಾಂಡೇಲಿಗೆ ಭೇಟಿ ನೀಡುವ ಅನೇಕ ಪ್ರವಾಸಿಗರು ಕಾಳಿ ನದಿಯ ಉದ್ದಕ್ಕೂ ಜಲಕ್ರೀಡೆಗಳನ್ನು ಆಯ್ಕೆ ಮಾಡುತ್ತಾರೆ. ವಿವಿಧ ರೀತಿಯ ಜಲಕ್ರೀಡೆಗಳನ್ನು ಒದಗಿಸುವ ಅನೇಕ ಪರವಾನಗಿ ಪಡೆದ ನಿರ್ವಾಹಕರು ಇದ್ದಾರೆ" ಎಂದು ಅವರು ವಿವರಿಸಿದ್ದಾರೆ.