ಜಿ20 ಪ್ರತಿನಿಧಿಗಳಿಗೆ ಹಂಪಿ, ನಂದಿ ಬೆಟ್ಟ ಪ್ರವಾಸ ಆಯೋಜನೆ!

ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಮತ್ತು ಕೈಗಾರಿಕಾ ಮತ್ತು ತಂತ್ರಜ್ಞಾನದ ಶಕ್ತಿಯನ್ನು ಜಿ20 ಪ್ರತಿನಿಧಿಗಳ ಮುಂದೆ ಪ್ರದರ್ಶಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಮತ್ತು ಕೈಗಾರಿಕಾ ಮತ್ತು ತಂತ್ರಜ್ಞಾನದ ಶಕ್ತಿಯನ್ನು ಜಿ20 ಪ್ರತಿನಿಧಿಗಳ ಮುಂದೆ ಪ್ರದರ್ಶಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಕೇಂದ್ರ ಹಣಕಾಸು ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆಯೋಜಿಸಿರುವ ಮೊದಲ ಜಿ 20 ಹಣಕಾಸು ಮತ್ತು ಕೇಂದ್ರ ಬ್ಯಾಂಕ್ ಡೆಪ್ಯೂಟೀಸ್ (ಎಫ್‌ಸಿಬಿಡಿ) ಸಭೆಯು ಡಿಸೆಂಬರ್ 13 ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ.

ಭಾರತದ ಅಧ್ಯಕ್ಷತೆಯಲ್ಲಿ ಜಿ20 ಫೈನಾನ್ಸ್‌ ಟ್ರ್ಯಾಕ್‌ನ ಕಾರ್ಯಸೂಚಿಯ ಮೇಲಿನ ಚರ್ಚೆಗಳ ಆರಂಭವನ್ನು ಸೂಚಿಸುವ ಈ ಸಭೆಯನ್ನು ಕೇಂದ್ರ ಹಣಕಾಸು ಸಚಿವಾಲಯ ಮತ್ತು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಜಂಟಿಯಾಗಿ ಆಯೋಜಿಸಿವೆ.

“ಕರ್ನಾಟಕವು 14 ಜಿ 20 ಸಭೆಗಳನ್ನು ಆಯೋಜಿಸುತ್ತಿದ್ದು, ಬೆಂಗಳೂರಿನಲ್ಲಿ 11, ಹಂಪಿಯಲ್ಲಿ ಎರಡು ಮತ್ತು ಮೈಸೂರಿನಲ್ಲಿ ಒಂದು ಸಭೆಗಳು ನಡೆಯಲಿದೆ.  ದೆಹಲಿ-ಎನ್‌ಸಿಆರ್ ಹೆಚ್ಚು ಸಭೆಗಳು ನಡೆಯುತ್ತಿದ್ದು, ರಾಜ್ಯಕ್ಕೂ ಅವಕಾಶ ನೀಡಿ ಗೌರವಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಜಿ20 ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ಪ್ರತಿನಿಧಿಗಳಿಗೆ ಬೆಂಗಳೂರಿನ ಜೊತೆಗೆ ನಂದಿ ಬೆಟ್ಟ, ಭೋಗ ನಂದೀಶ್ವರ ದೇವಸ್ಥಾನ, ಮೈಸೂರು ಮತ್ತು ಹಂಪಿಯಲ್ಲಿ ವಿಹಾರ ಕರೆದುಕೊಂಡು ಹೋಗಲು ಪ್ರವಾಸೋದ್ಯಮ ಇಲಾಖೆ ಸಿದ್ದತೆ ನಡೆಸಿದೆ.

ಡಿಸೆಂಬರ್ 13-17 ರವರೆಗೆ ಮೊದಲ ಸೆಟ್ ಜಿ 20 ಸಭೆ ನಡೆಯಲಿದ್ದು, ಜೆಡಬ್ಲ್ಯೂ ಮ್ಯಾರಿಯೊಟ್ ಪ್ರೆಸ್ಟೀಜ್ ಗಾಲ್ಫ್‌ಶೈರ್‌ನಲ್ಲಿ ಪ್ರತಿನಿಧಿಗಳ ಸ್ವಾಗತಿಸಲು ಕರ್ನಾಟಕ ಸಜ್ಜಾಗಿದೆ.

ಹಣಕಾಸು ಮತ್ತು ಕೇಂದ್ರ ಪ್ರತಿನಿಧಿಗಳ ಸಭೆಯು ಡಿಸೆಂಬರ್ 13-15 ರವರೆಗೆ ನಡೆಯಲಿದ್ದು, ಫ್ರೇಮ್ ವರ್ಕ್ ಗ್ರೂಪ್ ಸಭೆಯು ಡಿಸೆಂಬರ್ 16 ಮತ್ತು 17 ರಂದು ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com