ರಾಜಧಾನಿಯ ಟ್ರಾಫಿಕ್ ಜಂಜಾಟಕ್ಕೆ ವೀಕೆಂಡ್ ಬ್ರೇಕ್; ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸಕ್ಕೆ ದಿ ಬೆಸ್ಟ್ ಪ್ರವಾಸಿ ತಾಣಗಳು!

Weekend Trips: ನಿರಂತರ ಕೆಲಸದ ಒತ್ತಡ ಮತ್ತು ಟ್ರಾಫಿಕ್‌ನಿಂದ ಬೇಸತ್ತ ಬೆಂಗಳೂರಿಗರಿಗೆ ವೀಕೆಂಡ್ ಬಂತೆಂದರೆ ಸಾಕು, ಎಲ್ಲಾದರೂ ದೂರ ಪ್ರಯಾಣ ಮಾಡಬೇಕೆನಿಸುವುದು ಸಹಜ. ಹಾಗಾಗಿ, ಇಲ್ಲಿದೆ ನೋಡಿ ಸಿಲಿಕಾನ್ ಸಿಟಿಯಿಂದ ಕೆಲವೇ ಗಂಟೆಗಳ ಪ್ರಯಾಣ ಮಾಡಿ ಪ್ರವಾಸವನ್ನ ಎಂಜಾಯ್ ಮಾಡೋ ಸ್ಥಳಗಳ ಕುರಿತ ಮಾಹಿತಿ:
ರಾಜಧಾನಿಯ ಟ್ರಾಫಿಕ್ ಜಂಜಾಟಕ್ಕೆ ವೀಕೆಂಡ್ ಬ್ರೇಕ್; ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸಕ್ಕೆ ದಿ ಬೆಸ್ಟ್ ಪ್ರವಾಸಿ ತಾಣಗಳು!
Online Desk

ಬೆಂಗಳೂರು: ನಿರಂತರ ಕೆಲಸದ ಒತ್ತಡ ಮತ್ತು ಸಿಟಿಯ ಟ್ರಾಫಿಕ್‌ನಿಂದ ಬೇಸತ್ತ ಬೆಂಗಳೂರಿಗರಿಗೆ ವೀಕೆಂಡ್ ಬಂತೆಂದರೆ ಸಾಕು, ಎಲ್ಲಾದರೂ ದೂರ ಪ್ರಯಾಣ ಮಾಡಬೇಕೆನಿಸುವುದು ಸಹಜ. ಆದರೆ, ಎಲ್ಲಿಗೆ ಹೋಗಬೇಕು? ಯಾವ ಯಾವ ಸ್ಥಳ ನೋಡಬೇಕು ಅನ್ನೋದೇ ದೊಡ್ಡ ಕಂಪ್ಯೂಷನ್! ಹಾಗಾಗಿ, ಇಲ್ಲಿದೆ ನೋಡಿ ಸಿಲಿಕಾನ್ ಸಿಟಿಯಿಂದ ಕೆಲವೇ ಗಂಟೆಗಳ ಪ್ರಯಾಣ ಮಾಡಿ ಪ್ರವಾಸವನ್ನ ಎಂಜಾಯ್ ಮಾಡೋ ಸ್ಥಳಗಳ ಕುರಿತ ಮಾಹಿತಿ:

ಮಂಜಿನ ನಗರಿ ಚಿಕ್ಕಮಗಳೂರು (ಕರ್ನಾಟಕ)

Chikkamagaluru, the Misty City (Karnataka)
Online Desk

ಕರ್ನಾಟಕದ ಕಾಫಿ ನಾಡು ಎಂದೇ ಪ್ರಸಿದ್ಧಿಯಾಗಿರುವ ಚಿಕ್ಕಮಗಳೂರು, ಪ್ರಕೃತಿ ಪ್ರೇಮಿಗಳ ಮೊದಲ ಆಯ್ಕೆ. ಬೆಂಗಳೂರಿನಿಂದ ಸುಮಾರು 245 ಕಿ.ಮೀ ದೂರದಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಈ ಗಿರಿಧಾಮವು ಸದಾ ಮಂಜಿನಿಂದ ಆವೃತವಾಗಿರುತ್ತದೆ. ಅದರಂತೆ, ಚಿಕ್ಕಮಗಳೂರಿನಲ್ಲಿ ಕರ್ನಾಟಕದ ಅತಿ ಎತ್ತರದ ಶಿಖರವಾದ ಮುಳ್ಳಯ್ಯನಗಿರಿ, ಐತಿಹಾಸಿಕ ಬಾಬಾಬುಡನ್‌ಗಿರಿ, ಜರಿ ಜಲಪಾತ ಮತ್ತು ಹೆಬ್ಬೆ ಜಲಪಾತಗಳನ್ನ ಮಿಸ್ ಮಾಡಬೇಡಿ. ಇನ್ನೂ, ಕಾಫಿನಾಡಿನ ಪ್ರವಾಸದ ವೇಳೆ, ಕಾಫಿ ಎಸ್ಟೇಟ್‌ಗಳ ಮಧ್ಯೆ ಇರುವ ಹೋಮ್‌ಸ್ಟೇಗಳಲ್ಲಿ ತಂಗಿದರೆ ವಿಶೇಷ ಅನುಭವ ನೀಡುತ್ತದೆ.

ಪ್ರಕೃತಿಯ ಮಡಿಲು ವೈನಾಡು (ಕೇರಳ)

Wayanad (Kerala)
Online Desk

ಕರ್ನಾಟಕ ಹಾಗೂ ಕೇರಳದ ಗಡಿಯಲ್ಲಿರುವ ವೈನಾಡು ಹಸಿರು ಕಾಡುಗಳು, ಸಾಂಬಾರ ಪದಾರ್ಥಗಳ ತೋಟಗಳು ಮತ್ತು ಜಲಪಾತಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ, ಬೆಂಗಳೂರಿನಿಂದ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಮೂಲಕ ಸಾಗುವ ಸುಂದರ ರಸ್ತೆ ಪ್ರಯಾಣವೇ ಒಂದು ಅದ್ಭುತ ಅನುಭವ. ಸಿಲಿಕಾನ್ ಸಿಟಿಯಿಂದ ಸುಮಾರು 270 ಕಿ.ಮೀ. ದೂರದಲ್ಲಿರುವ ಇಲ್ಲಿ ಏಷ್ಯಾದ ಎರಡನೇ ಅತಿ ದೊಡ್ಡ ಮಣ್ಣಿನ ಅಣೆಕಟ್ಟಾದ ಬಾಣಾಸುರ ಸಾಗರ್, ಇತಿಹಾಸ ಪ್ರಸಿದ್ಧ ಎಡಕ್ಕಲ್ ಗುಹೆಗಳು, ಪೂಕೋಡ್ ಸರೋವರ ಮತ್ತು ಮುತ್ತಂಗ ವನ್ಯಜೀವಿ ಧಾಮಗಳನ್ನು ಮಿಸ್ ಮಾಡೋ ಹಾಗೆ ಇಲ್ಲ.

ಫ್ರೆಂಚ್ ಶೈಲಿಯ ಪಾಂಡಿಚೇರಿ (ಪುದುಚೇರಿ)

French-style Pondicherry (Puducherry)
Online Desk

ಗಿರಿಧಾಮಗಳಿಗಿಂತ ಸಮುದ್ರ ತೀರ ಮತ್ತು ವಿಭಿನ್ನ ಸಂಸ್ಕೃತಿಯನ್ನು ಸವಿಯುವ ಆಸೆಯಿದ್ದರೆ ಪಾಂಡಿಚೇರಿ ದಿ ಬೆಸ್ಟ್ ಆಯ್ಕೆ. ಹಳೆಯ ಫ್ರೆಂಚ್ ವಸಾಹತು ಶೈಲಿಯ ಕಟ್ಟಡಗಳು ಮತ್ತು ಕ್ಲೀನ್ ಆಗಿರೋ ಬೀಚ್‌ಗಳು ನಿಮ್ಮ ವೀಕೆಂಡ್‌ಗೆ ಹೊಸ ಕಳೆ ನೀಡುತ್ತವೆ. ಬೆಂಗಳೂರಿನಿಂದ ಸುಮಾರು 310 ಕಿ.ಮೀ. ದೂರದಲ್ಲಿರುವ ಇಲ್ಲಿನ ಪ್ರೊಮೆನೇಡ್ ಬೀಚ್, ಪ್ಯಾರಡೈಸ್ ಬೀಚ್, ಪ್ರಸಿದ್ಧ ಆರೋವಿಲ್ಲೆ ಆಶ್ರಮ ಮತ್ತು ಫ್ರೆಂಚ್ ಕ್ವಾರ್ಟರ್ಸ್ನ ವರ್ಣರಂಜಿತ ರಸ್ತೆಗಳನ್ನು ನೋಡೋದೇ ಚಂದ!

ಭಾರತದ ಸ್ಕಾಟ್‌ಲ್ಯಾಂಡ್ ಕೊಡಗು (ಕರ್ನಾಟಕ)

Scotland of India: Kodagu (Karnataka)
Online Desk

ಭಾರತದ ಸ್ಕಾಟ್‌ಲ್ಯಾಂಡ್ ಖ್ಯಾತಿಯ ಕೊಡಗು (ಕೂರ್ಗ್) ಹಚ್ಚ ಹಸಿರಿನ ಕಾಫಿ ತೋಟಗಳು, ಮಂಜು ಮುಸುಕಿದ ಬೆಟ್ಟಗಳು ಮತ್ತು ಸುಂದರ ಜಲಪಾತಗಳಿಂದಾಗಿ ಬೆಂಗಳೂರಿಗರ ನೆಚ್ಚಿನ ವೀಕೆಂಡ್ ತಾಣವಾಗಿದೆ. ರಾಜಧಾನಿಯಿಂದ ಸುಮಾರು 249 ಕಿ.ಮೀ ದೂರದಲ್ಲಿರುವ ಇಲ್ಲಿಗೆ ಭೇಟಿ ನೀಡಿದಾಗ ಬೈಲಕುಪ್ಪೆಯ ಭವ್ಯ ಗೋಲ್ಡನ್ ಟೆಂಪಲ್, ಕಾವೇರಿ ನಿಸರ್ಗಧಾಮ, ಧುಮುಕುವ ಅಬ್ಬೆ ಜಲಪಾತ, ರಾಜಾ ಸೀಟ್‌ನ ಸೂರ್ಯಾಸ್ತ ಮತ್ತು ದುಬಾರೆ ಶಿಬಿರದಲ್ಲಿ ಆನೆಗಳ ಒಡನಾಟವನ್ನು ಸವಿಯಬಹುದು. ಅದರಲ್ಲೂ, ಕಾಫಿ ಎಸ್ಟೇಟ್‌ಗಳ ಮಧ್ಯೆ ಇರುವ ಸುಂದರ ಹೋಮ್‌ಸ್ಟೇಗಳಲ್ಲಿ ತಂಗುತ್ತಾ, ಸಾಂಪ್ರದಾಯಿಕ ಕೊಡವ ಆಹಾರ ಸವಿದು, ಶುದ್ಧ ಕಾಫಿ ಪುಡಿ ಹಾಗೂ ಹೋಂಮೇಡ್ ಚಾಕೊಲೇಟ್‌ಗಳನ್ನು ಖರೀದಿಸಲು ಕೊಡಗು ಅತ್ಯುತ್ತಮ ಪ್ರವಾಸಿ ಸ್ವರ್ಗವಾಗಿದೆ.

ರಾಜಗಾಂಭೀರ್ಯದ ಊಟಿ ಮತ್ತು ಕೂನೂರು (ತಮಿಳುನಾಡು)

The majestic Ooty and Coonoor (Tamil Nadu)
Online Desk

ಗಿರಿಧಾಮಗಳ ರಾಣಿ ಎಂದೇ ಕರೆಯಲ್ಪಡುವ ಊಟಿ, ದಶಕಗಳಿಂದಲೂ ಬೆಂಗಳೂರಿಗರ ನೆಚ್ಚಿನ ತಾಣ. ಬೆಂಗಳೂರಿನಿಂದ ಸುಮಾರು 270 ಕಿ.ಮೀ. ದೂರದಲ್ಲಿರುವ ಇಲ್ಲಿ, ಟೀ ತೋಟಗಳು ಮತ್ತು ಬ್ರಿಟಿಷ್ ಶೈಲಿಯ ವಾತಾವರಣ ಮನಸೆಳೆಯುತ್ತದೆ. ಬೊಟಾನಿಕಲ್ ಗಾರ್ಡನ್, ಟಾಯ್ ಟ್ರೈನ್, ದೊಡ್ಡಬೆಟ್ಟ ಶಿಖರ, ಊಟಿ ಲೇಕ್ ರಾಜಧಾನಿಗರ ಹಾಟ್ ಫೇವರಿಟ್. ಇನ್ನೂ, ಊಟಿಯ ಜೊತೆಗೆ ಕೇವಲ 20 ಕಿ.ಮೀ ದೂರದಲ್ಲಿರುವ ಕೂನೂರು ಗಿರಿಧಾಮವನ್ನೂ ವೀಕ್ಷಿಸಬಹುದು. ಅದರಲ್ಲೂ, ಊಟಿ ಹನಿಮೂನ್ ಕಪಲ್ಸ್ ಮತ್ತು ಮಕ್ಕಳೊಂದಿಗೆ ಸುಂದರ ಸಮಯ ಕಳೆಯಲು ಬಯಸುವ ಫ್ಯಾಮಿಲಿ ಟ್ರಿಪ್‌ಗೆ ಇದು ಅತ್ಯುತ್ತಮ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com