ಬೇಬಿಮೂನ್ ಟ್ರಿಪ್ ಈಗ ಕಪಲ್ಸ್ ಫೇವರಿಟ್; ಜನಪ್ರಿಯವಾಗುತ್ತಿದೆ ಹೊಸ ಟ್ರೆಂಡ್, ಗರ್ಭಧಾರಣೆಯ ಒತ್ತಡ ಮರೆಸುವ ಅತ್ಯುತ್ತಮ ತಾಣಗಳು ಇಲ್ಲಿವೆ...

ಮದುವೆಯ ನಂತರದ ಹನಿಮೂನ್ ಹೇಗೆ ವಿಶೇಷ ಅನುಭವವೋ, ಹಾಗೆಯೇ ಮಗುವಿನ ಆಗಮನಕ್ಕೂ ಮುನ್ನದ ಈ ವಿಶ್ರಾಂತಿ ಪ್ರವಾಸ, ದಂಪತಿಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶವಾಗಿದೆ.
File photo
ಸಂಗ್ರಹ ಚಿತ್ರ

ಮಗು ಜನಿಸುವ ಕ್ಷಣವು ಪ್ರತಿಯೊಂದು ದಂಪತಿಯ ಜೀವನದಲ್ಲೂ ಅತ್ಯಂತ ಭಾವನಾತ್ಮಕ ಮತ್ತು ಹೊಸ ಅಧ್ಯಾಯದ ಆರಂಭವಾಗಿರುತ್ತದೆ. ಆ ಸಂತಸದ ನಿರೀಕ್ಷೆಯ ನಡುವೆ, ಪಾಲಕರಾಗಲಿರುವ ದಂಪತಿಗಳು ತಮ್ಮಿಬ್ಬರಿಗಾಗಿ ಕೆಲವು ಅಮೂಲ್ಯ ಕ್ಷಣಗಳನ್ನು ಉಳಿಸಿಕೊಳ್ಳಲು ಬಯಸುತ್ತಾರೆ. ಇದೇ ಕಾರಣಕ್ಕೆ ಇತ್ತೀಚಿನ ವರ್ಷಗಳಲ್ಲಿ “ಬೇಬಿಮೂನ್” ಎಂಬ ಪರಿಕಲ್ಪನೆ ಜಗತ್ತಿನಾದ್ಯಂತ ಜನಪ್ರಿಯವಾಗುತ್ತಿದೆ.

ಮದುವೆಯ ನಂತರದ ಹನಿಮೂನ್ ಹೇಗೆ ವಿಶೇಷ ಅನುಭವವೋ, ಹಾಗೆಯೇ ಮಗುವಿನ ಆಗಮನಕ್ಕೂ ಮುನ್ನದ ಈ ವಿಶ್ರಾಂತಿ ಪ್ರವಾಸ ದಂಪತಿಗಳ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಅವಕಾಶವಾಗಿದೆ.

ಗರ್ಭಧಾರಣೆಯ ಅವಧಿಯಲ್ಲಿ ಮಹಿಳೆಯ ದೇಹ ಮತ್ತು ಮನಸ್ಸು ಹಲವು ಬದಲಾವಣೆಗಳನ್ನು ಅನುಭವಿಸುತ್ತವೆ. ಈ ಸಂದರ್ಭದಲ್ಲಿ ಒತ್ತಡದಿಂದ ದೂರವಾಗಿ, ಶಾಂತ ವಾತಾವರಣದಲ್ಲಿ ಸಮಯ ಕಳೆಯುವುದು ಆರೋಗ್ಯಕ್ಕೂ ಒಳ್ಳೆಯದು.

ಸಮುದ್ರ ತೀರದ ಗಾಳಿ, ಬೆಟ್ಟಗಳ ಮಧ್ಯದ ನಿಶ್ಶಬ್ದ ಪ್ರಕೃತಿ, ಐಷಾರಾಮಿ ಸ್ಪಾ ಚಿಕಿತ್ಸೆಗಳು, ಸುಂದರ ಸೂರ್ಯಾಸ್ತದ ಕ್ಷಣಗಳು—ಇವೆಲ್ಲವೂ ಗರ್ಭಿಣಿಯರಿಗೆ ಮಾನಸಿಕ ನೆಮ್ಮದಿ ನೀಡುವುದರ ಜೊತೆಗೆ ದಂಪತಿಗಳಿಗೆ ಮರೆಯಲಾಗದ ನೆನಪುಗಳನ್ನು ನೀಡುತ್ತವೆ.

File photo
ಸಂಗ್ರಹ ಚಿತ್ರ

ಇಂದು ಅನೇಕ ಐಷಾರಾಮಿ ರೆಸಾರ್ಟ್‌ಗಳು ಮತ್ತು ಹೋಟೆಲ್‌ಗಳು ಗರ್ಭಿಣಿಯರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿಶೇಷ “ಬೇಬಿಮೂನ್ ಪ್ಯಾಕೇಜ್”ಗಳನ್ನು ಪರಿಚಯಿಸಿವೆ.

ಪ್ರೀನೇಟಲ್ ಮಸಾಜ್, ಆಯುರ್ವೇದ ಚಿಕಿತ್ಸೆಗಳು, ಆರೋಗ್ಯಕರ ಆಹಾರ, ಯೋಗ ಹಾಗೂ ಪ್ರಕೃತಿಯ ನಡುವೆ ವಿಶ್ರಾಂತಿ—all-in-one ಅನುಭವವನ್ನು ಇವು ಒದಗಿಸುತ್ತಿವೆ.

ಮಾಲ್ಡೀವ್ಸ್‌ನ ನೀಲಿ ಸಮುದ್ರದ ದ್ವೀಪಗಳಿಂದ ಹಿಡಿದು ರಾಜಸ್ಥಾನದ ಅರಾವಳ್ಳಿ ಬೆಟ್ಟಗಳ ನೆಮ್ಮದಿವರೆಗೂ, ಜಗತ್ತಿನ ಹಲವು ತಾಣಗಳು ಈಗ ಬೇಬಿಮೂನ್ ಪ್ರವಾಸಿಗರ ನೆಚ್ಚಿನ ಗಮ್ಯಸ್ಥಾನಗಳಾಗಿವೆ.

ಮಗುವಿನ ಆಗಮನಕ್ಕೂ ಮುನ್ನ ಇಬ್ಬರೂ ಒಟ್ಟಿಗೆ ನೆಮ್ಮದಿಯ ಕ್ಷಣಗಳನ್ನು ಕಳೆಯಲು, ಜೀವನದ ಹೊಸ ಅಧ್ಯಾಯವನ್ನು ಸಂಭ್ರಮದಿಂದ ಸ್ವಾಗತಿಸಲು, ಈ ಸುಂದರ ತಾಣಗಳು ಪರಿಪೂರ್ಣ ಆಯ್ಕೆಯಾಗಿವೆ. ಪ್ರಕೃತಿ ಮಡಿಲಿನಲ್ಲಿ ನೆಮ್ಮದಿಯ ಕ್ಷಣಗಳನ್ನು ನೀಡುವ ಐದು ಅದ್ಭುತ ತಾಣಗಳು ಇಲ್ಲಿವೆ...

File photo
ಕೇದಾರನಾಥಕ್ಕೆ ಹೋಗ್ತಿದ್ದೀರಾ? ಹಾಗಾದ್ರೆ ದೇವಸ್ಥಾನದ ಸುತ್ತಮುತ್ತ ಇರುವ ಈ ಅದ್ಭುತ ಜಾಗಗಳನ್ನ ಮಿಸ್ ಮಾಡ್ಬೇಡಿ!

1. ಸನ್ ಸಿಯಾಮ್ ಇರು ಫುಶಿ (Sun Siyam Iru Fushi)

Sun Siyam Iru Fushi
ಸನ್ ಸಿಯಾಮ್ ಇರು ಫುಶಿ

ಮಾಲ್ಡೀವ್ಸ್‌ನಲ್ಲಿರುವ ಒಂದು ಸುಂದರವಾದ ಐಷಾರಾಮಿ ರೆಸಾರ್ಟ್ ಇದಾಗಿದ್ದು, ಈ ರೆಸಾರ್ಟ್ ಬೇಬಿಮೂನ್‌ಗೆ ಪರಿಪೂರ್ಣ ತಾಣವಾಗಿದೆ.

ಇಲ್ಲಿನ “ಥಾಲ್ಗೋ ಫ್ರಾನ್ಸ್ ಸ್ಪಾ” ಗರ್ಭಿಣಿಯರಿಗಾಗಿ ವಿಶೇಷ ಚಿಕಿತ್ಸೆಗಳು, ಆರಾಮದಾಯಕ ಮಸಾಜ್‌ಗಳು ಮತ್ತು ಆಯುರ್ವೇದ ಚಿಕಿತ್ಸೆಯನ್ನು ನೀಡುತ್ತದೆ. ಚಂದಿರ ಬೆಳಕಿನಲ್ಲಿನ ಸಿನೆಮಾ ಅನುಭವ, ಡಾಲ್ಫಿನ್ ವೀಕ್ಷಣೆ ಹಾಗೂ ಸಮುದ್ರದ ತೀರದಲ್ಲಿ ನಿಶ್ಶಬ್ದ ನಡಿಗೆಗಳು ದಂಪತಿಗಳಿಗೆ ಮರೆಯಲಾಗದ ನೆನಪುಗಳನ್ನು ನೀಡುತ್ತವೆ.

2. ಮಾರ್ಟಿನ್‌ಹಾಲ್ ಲಿಸ್ಬನ್ ಒರಿಯೆಂಟೆ (Martinhal Lisbon Oriente)

Martinhal Lisbon Oriente
ಮಾರ್ಟಿನ್‌ಹಾಲ್ ಲಿಸ್ಬನ್ ಒರಿಯೆಂಟೆ

ಪೋರ್ಚುಗಲ್‌ನ ಲಿಸ್ಬನ್ ನಗರದಲ್ಲಿರುವ ಒಂದು ಅತ್ಯಂತ ಜನಪ್ರಿಯ 5-ಸ್ಟಾರ್ ಐಷಾರಾಮಿ ಅಪಾರ್ಟ್‌ಮೆಂಟ್ ಮಾದರಿಯ ಹೋಟೆಲ್ ಆಗಿದೆ. ಟೇಗಸ್ ನದಿಯ ತೀರದಲ್ಲಿರುವ ಈ ಹೋಟೆಲ್‌ನಲ್ಲಿ ಹೀಟೆಡ್ ಸ್ವಿಮ್ಮಿಂಗ್ ಪೂಲ್, ಗರ್ಭಿಣಿಯರಿಗಾಗಿ ವಿಶೇಷ ಪ್ರೀನೇಟಲ್ ಮಸಾಜ್ ಹಾಗೂ ನದಿಯ ತೀರದ ಶಾಂತ ವಾಕಿಂಗ್ ಟ್ರೇಲ್‌ಗಳು ಅತ್ಯುತ್ತಮ ಅನುಭವ ನೀಡುತ್ತದೆ. ಆರೋಗ್ಯ ಮತ್ತು ಕುಟುಂಬ ಜೀವನದ ಸಮತೋಲನಕ್ಕೆ ಒತ್ತು ನೀಡುವ ಈ ತಾಣ ಬೇಬಿಮೂನ್‌ಗೆ ಅತ್ಯುತ್ತಮ ಆಯ್ಕೆ.

3. ಲೆ ಗ್ರ್ಯಾಂಡ್ ಗಾಲ್ (Le Grand Galle)

Le Grand Galle
ಲೆ ಗ್ರ್ಯಾಂಡ್ ಗಾಲ್

ಲೆ ಗ್ರ್ಯಾಂಡ್ ಗಾಲ್ ಶ್ರೀಲಂಕಾದ ದಕ್ಷಿಣ ಕರಾವಳಿಯಲ್ಲಿರುವ ಒಂದು ಅತ್ಯಂತ ಸುಂದರವಾದ 5-ಸ್ಟಾರ್ ಐಷಾರಾಮಿ ಬೂಟೀಕ್ ಹೋಟೆಲ್ ಆಗಿದೆ. ಪ್ರಕೃತಿ ಮತ್ತು ಸಮುದ್ರದ ನಡುವೆ ನೆಮ್ಮದಿ ಹುಡುಕುವ ದಂಪತಿಗಳಿಗೆ ಸೂಕ್ತ ತಾಣವಾಗಿದೆ.

ಇಲ್ಲಿನ ಬ್ಲೂ ರೆಸ್ಟೊರೆಂಟ್‌ನಲ್ಲಿ ತಾಜಾ ಸೀ ಫುಡ್, ಗರ್ಭಿಣಿಯರಿಗಾಗಿ ವಿಶೇಷ ಹೈ ಟೀ ಹಾಗೂ ಸಮುದ್ರ ಗಾಳಿಯ ನಡುವೆ ವಿಶ್ರಾಂತಿ ಪಡೆಯಲು ಅವಕಾಶ ನೀಡುತ್ತದೆ.

File photo
ರಾಜ-ಮಹಾರಾಜರ ಕಾಲದ ವಿಲಾಸ, ರಾಜವೈಭವದ ಅನುಭವ ಪಡೆಯಬೇಕೇ? ಈ ಹೇರಿಟೇಜ್ ಹೋಟೆಲ್‌ಗಳಿಗೆ ಭೇಟಿ ನೀಡಿ...

4. ಅಮನ್‌ಬಾಗ್ (Amanbagh)

Amanbagh
ಅಮನ್‌ಬಾಗ್

ಅಮನ್‌ಬಾಗ್ ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಅರಾವಳಿ ಬೆಟ್ಟಗಳ ಮಧ್ಯೆ ಇರುವ ಒಂದು ಅತ್ಯಂತ ಐಷಾರಾಮಿ 5-ಸ್ಟಾರ್ ರೆಸಾರ್ಟ್ ಆಗಿದ್ದು, ಪ್ರಕೃತಿಯ ನಡುವೆ ಶಾಂತ ವಾಸ್ತವ್ಯ ಬಯಸುವ ದಂಪತಿಗಳಿಗೆ ಪರಿಪೂರ್ಣ ತಾಣವಾಗಿದೆ.

ಇಲ್ಲಿ ಆಯುರ್ವೇದ ಚಿಕಿತ್ಸೆಗಳು, ಯೋಗ ತರಗತಿಗಳು, ಗರ್ಭಿಣಿಯರಿಗಾಗಿ ಆಹಾರ ಸಲಹೆಗಳು ಹಾಗೂ ವಿಶಾಲ ಉದ್ಯಾನವನಗಳು ಮನಸ್ಸಿಗೆ ವಿಶ್ರಾಂತಿ ನೀಡುತ್ತವೆ. ನಗರ ಜೀವನದ ಗದ್ದಲದಿಂದ ದೂರ, ಸಂಪೂರ್ಣ ನೆಮ್ಮದಿಯ ಅನುಭವ ಇಲ್ಲಿ ದೊರೆಯುತ್ತದೆ.

5. ಚೂಟನ್ ಗ್ಲೆನ್ (Chewton Glen)

Chewton Glen
ಚೂಟನ್ ಗ್ಲೆನ್

ಇಂಗ್ಲೆಂಡ್‌ನ ದಕ್ಷಿಣ ಕರಾವಳಿಯಲ್ಲಿರುವ ಅತ್ಯಂತ ಪ್ರಸಿದ್ಧ ಹಾಗೂ ಐತಿಹಾಸಿಕ 5-ಸ್ಟಾರ್ ಐಷಾರಾಮಿ ಕಂಟ್ರಿ ಹೌಸ್ ಹೋಟೆಲ್ ಮತ್ತು ಸ್ಪಾ ಇದಾಗಿದ್ದು, 130 ಎಕರೆಗಳಷ್ಟು ವಿಶಾಲವಾದ ಹಸಿರು ಪರಿಸರದಲ್ಲಿ ಹರಡಿಕೊಂಡಿರುವ ಈ ಹೋಟೆಲ್, ಬ್ರಿಟಿಷ್ ರಾಜಮನೆತನದ ಶೈಲಿಯ ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಪ್ರಕೃತಿಯ ನಡುವೆ ವಿಶ್ರಾಂತಿ ಪಡೆಯಲು ಬಯಸುವವರಿಗೆ ಸೂಕ್ತ ತಾಣವಾಗಿದೆ.

ಇಲ್ಲಿನ ಟ್ರೀಹೌಸ್ ಸೂಟ್‌ಗಳು ಅರಣ್ಯದ ಮಧ್ಯೆ ಖಾಸಗಿ ವಾಸ್ತವ್ಯದ ಅನುಭವ ನೀಡುತ್ತವೆ. ಹೈಡ್ರೋಥೆರಪಿ ಪೂಲ್‌ಗಳು, ಸ್ಪಾ ಚಿಕಿತ್ಸೆ ಹಾಗೂ ನಿಶ್ಶಬ್ದ ವಾತಾವರಣ ದಂಪತಿಗಳಿಗೆ ಸಂಪೂರ್ಣ ವಿಶ್ರಾಂತಿ ನೀಡುತ್ತದೆ.

ಮಗು ಜನಿಸುವ ಮುನ್ನದ ಈ ವಿಶೇಷ ಕಾಲವನ್ನು ನೆನಪಿನಲ್ಲಿಡಲು ಬೇಬಿಮೂನ್ ಪ್ರವಾಸಗಳು ದಂಪತಿಗಳಿಗೆ ಹೊಸ ಅನುಭವ ನೀಡುತ್ತಿವೆ. ಪ್ರಕೃತಿ, ಐಷಾರಾಮಿ ಹಾಗೂ ಮನಸ್ಸಿಗೆ ಶಾಂತಿ—all in one ಅನುಭವವನ್ನು ಈ ತಾಣಗಳು ನೀಡುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com