

ಬೆಂಗಳೂರು: ಅಡಿಗಾಸ್ ಯಾತ್ರಾ ಸಂಸ್ಥೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಹೊಸ ಆಕರ್ಷಕ ಆಫರ್ ಘೋಷಿಸಿದ್ದು, ‘ನಮ್ಮ ಗ್ಯಾರಂಟಿ’ ಯೋಜನೆಯಡಿ ಅಂತರರಾಷ್ಟ್ರೀಯ ಪ್ರವಾಸ ಪ್ಯಾಕೇಜ್‌ಗಳ ಮೇಲೆ 20,000 ರೂ.ವರೆಗೆ ಭಾರೀ ರಿಯಾಯಿತಿ ನೀಡುವುದಾಗಿ ಪ್ರಕಟಿಸಿದೆ.
ಜಾಗತಿಕ ಮಟ್ಟದಲ್ಲಿ ಪ್ರವಾಸ ವೆಚ್ಚಗಳು ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಪ್ರವಾಸಿಗರಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
ಪ್ರವಾಸೋದ್ಯಮ ಕ್ಷೇತ್ರದಲ್ಲಿ ದೀರ್ಘಕಾಲದಿಂದ ವಿಶ್ವಾಸಾರ್ಹ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಅಡಿಗಾಸ್ ಯಾತ್ರಾ, ಸೀಮಿತ ಅವಧಿಗೆ ಈ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ.
ಇದರಡಿ ಪ್ರವಾಸಿಗರು ಆಯ್ಕೆ ಮಾಡುವ ಅಂತರರಾಷ್ಟ್ರೀಯ ಪ್ರವಾಸ ಪ್ಯಾಕೇಜ್‌ಗಳ ಮೇಲೆ ರೂ.2,000ರಿಂದ ಗರಿಷ್ಠ ರೂ.20,000ವರೆಗೆ ರಿಯಾಯಿತಿ ಪಡೆಯಬಹುದು. ಇನ್ನೊಂದು ವಿಶೇಷ ಅಂಶವೆಂದರೆ, ಗರಿಷ್ಠ ರಿಯಾಯಿತಿಯನ್ನು ಸಂಪೂರ್ಣವಾಗಿ ಬಳಸದೇ ಇದ್ದಲ್ಲಿ ಉಳಿದ ಮೊತ್ತದ ಮೇಲೆ ಹೆಚ್ಚುವರಿ ರೂ.5,000 ಮೌಲ್ಯದ ಆಫರ್ ಅನ್ನು ದೇಶೀಯ ಅಥವಾ ಮತ್ತೊಂದು ವಿದೇಶಿ ಪ್ರವಾಸ ಪ್ಯಾಕೇಜ್‌ಗೆ ಬಳಸಿಕೊಳ್ಳುವ ಅವಕಾಶವನ್ನೂ ನೀಡಿದೆ.
ಸಂಸ್ಥೆಯ ಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕೆ. ನಾಗರಾಜ ಅಡಿಗ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಪ್ರವಾಸ ವೆಚ್ಚಗಳು ಹೆಚ್ಚಾಗಿರುವುದನ್ನು ಉಲ್ಲೇಖಿಸಿದರು.
ಜಾಗತಿಕ ಆರ್ಥಿಕ ಬಿಕ್ಕಟ್ಟು, ರೂಪಾಯಿ ಮೌಲ್ಯ ಕುಸಿತ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇರಾನ್-ಅಮೆರಿಕ ಸಂಘರ್ಷ ಸೇರಿದಂತೆ ಹಲವು ಕಾರಣಗಳಿಂದ ವಿದೇಶಿ ಪ್ರವಾಸ ದುಬಾರಿಯಾಗಿದೆ. ಆದರೂ ಜನರು ಉತ್ತಮ ಪ್ರವಾಸ ಅನುಭವದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ವಿಶೇಷ ರಿಯಾಯಿತಿ ಯೋಜನೆ ಘೋಷಿಸಿದ್ದೇವೆ ಎಂದು ಹೇಳಿದರು.
ಈ ಆಫರ್‌ನಡಿ ಹಲವು ಜನಪ್ರಿಯ ಪ್ರವಾಸಿ ತಾಣಗಳಿಗೆ ರಿಯಾಯಿತಿ ಲಭ್ಯವಿದೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಇಂಗ್ಲೆಂಡ್, ಯೂರೋಪ್, ಸಿಂಗಾಪುರ, ಮಲೇಷ್ಯಾ, ಥೈಲ್ಯಾಂಡ್, ದಕ್ಷಿಣ ಆಫ್ರಿಕಾ, ವಿಯೆಟ್ನಾಂ, ಕಂಬೋಡಿಯಾ, ಬಾಲಿ, ಶ್ರೀಲಂಕಾ, ನೇಪಾಳ-ಮುಕ್ತಿನಾಥ ಹಾಗೂ ಕೈಲಾಸ ಮಾನಸಸರೋವರ ಯಾತ್ರೆ ಸೇರಿದಂತೆ ಹಲವು ಅಂತರರಾಷ್ಟ್ರೀಯ ಪ್ಯಾಕೇಜ್‌ಗಳು ಯೋಜನೆಯೊಳಗೆ ಸೇರಿವೆ.
ಅಡಿಗಾಸ್ ಯಾತ್ರಾ ಸಂಸ್ಥೆ ತನ್ನ ಗುಣಮಟ್ಟದ ಸೇವೆಗಾಗಿ ಹೆಸರುವಾಸಿಯಾಗಿದೆ. ಐಷಾರಾಮಿ ಸ್ಟಾರ್ ಹೋಟೆಲ್ ವಸತಿ, ವೈವಿಧ್ಯಮಯ ಆಹಾರ ವ್ಯವಸ್ಥೆ, ಪ್ರವಾಸಿ ತಾಣಗಳ ಪ್ರವೇಶ ಟಿಕೆಟ್‌ಗಳು ಹಾಗೂ ಸುಗಮ ಪ್ರಯಾಣ ವ್ಯವಸ್ಥೆಗಳನ್ನು ಒಳಗೊಂಡ ಸಂಪೂರ್ಣ ಪ್ಯಾಕೇಜ್‌ಗಳನ್ನು ಸಂಸ್ಥೆ ನೀಡುತ್ತಿದೆ.
“ಪ್ರವಾಸಿಗನೇ ರಾಜ” ಎಂಬ ಧೋರಣೆಯೊಂದಿಗೆ ಯಾವುದೇ ಸೇವಾ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ನಾಗರಾಜ ಅಡಿಗ ತಿಳಿಸಿದ್ದಾರೆ.
ಸಂಸ್ಥೆಯ ಸಿಇಒ ಆಶಾ ಎನ್. ಅಡಿಗ ಮಾತನಾಡಿ, ಆಸಕ್ತರು ಸಂಸ್ಥೆಯ ಕಚೇರಿಗಳಿಗೆ ನೇರವಾಗಿ ಭೇಟಿ ನೀಡಬಹುದು ಅಥವಾ 080-26616678 / 7022259008 / 9449478944 ದೂರವಾಣಿ ಮೂಲಕ ಮಾಹಿತಿ ಪಡೆಯಬಹುದು ಎಂದು ತಿಳಿಸಿದ್ದಾರೆ. ಜೊತೆಗೆ http://www.adigasyatra.com ಅಧಿಕೃತ ವೆಬ್‌ಸೈಟ್ ಮೂಲಕವೂ ಪ್ಯಾಕೇಜ್ ವಿವರಗಳನ್ನು ತಿಳಿದುಕೊಳ್ಳಬಹುದು ಎಂದು ಹೇಳಿದ್ದಾರೆ.
Advertisement