ಈಶಾನ್ಯ ಭಾರತ ಪ್ರವಾಸಕ್ಕೆ IRCTCಯಿಂದ ಭರ್ಜರಿ ಆಫರ್! ಕೇವಲ 46 ಸಾವಿರಕ್ಕೆ 6 ದಿನಗಳ ಟೂರ್ ಪ್ಯಾಕೇಜ್

ಈಶಾನ್ಯ ಭಾರತ ನೋಡಬೇಕು ಎಂಬುದು ಅನೇಕರ ಕನಸು. ಆದರೆ ಹೇಗೆ ಹೋಗುವುದು, ಎಲ್ಲಿ ಉಳಿಯುವುದು ಎಂಬ ಚಿಂತೆ ಬಿಡುವುದಿಲ್ಲ. ಈಗ IRCTC ಟೂರಿಸಂ ಇದಕ್ಕಾಗಿಯೇ ಒಂದು ರೆಡಿಮೇಡ್ ಪ್ಯಾಕೇಜ್ ತಂದಿದೆ. ಆ ಕುರಿತ ವರದಿ ಇಲ್ಲಿದೆ:
IRCTC Splendors of North East Ex Bengaluru Tour Package, Kalimpong Gangtok Darjeeling Trip Price and Dates
ಈಶಾನ್ಯ ಭಾರತ ಪ್ರವಾಸಕ್ಕೆ IRCTCಯಿಂದ ಭರ್ಜರಿ ಆಫರ್
Updated on: 

ಬೆಂಗಳೂರು: ಬೆಂಗಳೂರಿನಿಂದ ಈಶಾನ್ಯ ಭಾರತದ ಬೆಟ್ಟಗಳ ಸೌಂದರ್ಯ ನೋಡಬೇಕು ಎಂದುಕೊಂಡವರಿಗೆ IRCTC  ದು ಅದ್ಭುತ ಅವಕಾಶ ತಂದಿದೆ.! ಸ್ಪ್ಲೆಂಡರ್ಸ್ ಆಫ್ ನಾರ್ತ್ ಈಸ್ಟ್ ಎಕ್ಸ್ ಬೆಂಗಳೂರು ಹೆಸರಿನ ಈ ವಿಶೇಷ ಪ್ಯಾಕೇಜ್ ನವೆಂಬರ್ 17 ರಂದು ಶುರುವಾಗಲಿದೆ. ಕೇವಲ 5 ರಾತ್ರಿ 6 ಹಗಲು ಅವಧಿಯಲ್ಲಿ ಕಲಿಂಪಾಂಗ್, ಗ್ಯಾಂಗ್ಟಕ್ ಮತ್ತು ಡಾರ್ಜಿಲಿಂಗ್ ನಂತಹ ಪ್ರಸಿದ್ಧ ತಾಣಗಳನ್ನು ನೋಡಬಹುದು. ವಿಮಾನ ಪ್ರಯಾಣ, ಉಳಿದುಕೊಳ್ಳುವ ವ್ಯವಸ್ಥೆ, ಊಟ ಎಲ್ಲವೂ ಒಂದೇ ಪ್ಯಾಕೇಜ್ ನಲ್ಲಿ ಸಿಗುವುದರಿಂದ ಕುಟುಂಬ ಸಮೇತ ಆರಾಮವಾಗಿ ಪ್ರವಾಸ ಮಾಡಬಹುದು. ಆ ಕುರಿತ ವರದಿ ಇಲ್ಲಿದೆ:

ಪ್ರಯಾಣದ ವಿವರ:

ನವೆಂಬರ್ 17 ರಂದು ಬೆಳಿಗ್ಗೆ 9 ಗಂಟೆ 10 ನಿಮಿಷಕ್ಕೆ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ 6e443 ವಿಮಾನ ಹೊರಡುತ್ತದೆ. ಮಧ್ಯಾಹ್ನ 11 ಗಂಟೆ 50 ನಿಮಿಷಕ್ಕೆ ಬಾಗ್ಡೋಗ್ರಾ ತಲುಪುತ್ತದೆ. ವಾಪಸ್ ನವೆಂಬರ್ 22 ರಂದು ಮಧ್ಯಾಹ್ನ 12 ಗಂಟೆ 30 ನಿಮಿಷಕ್ಕೆ ಬಾಗ್ಡೋಗ್ರಾದಿಂದ 6e445 ವಿಮಾನ ಹೊರಟು ಸಂಜೆ 3 ಗಂಟೆ 45 ನಿಮಿಷಕ್ಕೆ ಬೆಂಗಳೂರು ತಲುಪುತ್ತದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಕನಿಷ್ಠ 2 ಗಂಟೆ ಮೊದಲೇ ತಲುಪಬೇಕು.

IRCTC Splendors of North East Ex Bengaluru Tour Package, Kalimpong Gangtok Darjeeling Trip Price and Dates
ರಾಮಾಯಣ ಕಥೆಗೆ ಜೀವ ತುಂಬಿದ ಅದ್ಭುತ ತಾಣ; ಕೇರಳದ 'ಮಸ್ಟ್ ವಿಸಿಟ್' ಪ್ಲೇಸ್: ಕಣ್ಣು ಹಾಯಿಸಿದಷ್ಟೂ ಮುದ ನೀಡುವ Jatayu Earth's Centre..!

ದಿನವಾರು ಪ್ರವಾಸ ಹೇಗಿರುತ್ತದೆ?

  • ದಿನ 1: ಗುಹಾವಟಿಗೆ ತಲುಪಿದ ನಂತರ ಹೋಟೆಲ್ ಗೆ ಚೆಕ್ ಇನ್. ಸಂಜೆ ಬ್ರಹ್ಮಪುತ್ರ ನದಿ ದಡದಲ್ಲಿ ಸಮಯ ಕಳೆಯಬಹುದು.

  • ದಿನ 2: ಗುಹಾವಟಿ - ಶಿಲ್ಲಾಂಗ್. ಬೆಳಗ್ಗೆ ಕಾಮಾಖ್ಯ ದೇವಸ್ಥಾನ ದರ್ಶನ, ನಂತರ ಉಮಿಯಂ ಸರೋವರ ನೋಡಿಕೊಂಡು ಶಿಲ್ಲಾಂಗ್ ಗೆ ಪ್ರಯಾಣ.

  • ದಿನ 3: ಶಿಲ್ಲಾಂಗ್ - ಚಿರಾಪುಂಜಿ - ಶಿಲ್ಲಾಂಗ್. ಎಲಿಫೆಂಟ್ ಫಾಲ್ಸ್, ನೋಹ್ಕಲಿಕಾಯ್ ಜಲಪಾತ, ಮಾವ್ಸ್ ಮಾಯಿ ಗುಹೆ, ಸೆವೆನ್ ಸಿಸ್ಟರ್ಸ್ ಫಾಲ್ಸ್ ದರ್ಶನ.

  • ದಿನ 4: ಶಿಲ್ಲಾಂಗ್ - ಡಾವ್ಕಿ - ಮಾವ್ಲಿನ್ನಾಂಗ್ - ಶಿಲ್ಲಾಂಗ್. ಬಾಂಗ್ಲಾದೇಶ ಗಡಿಯಲ್ಲಿರುವ ಡಾವ್ಕಿ ನದಿಯಲ್ಲಿ ಬೋಟಿಂಗ್ ಮತ್ತು ಏಷ್ಯಾದ ಅತ್ಯಂತ ಸ್ವಚ್ಛ ಗ್ರಾಮ ಮಾವ್ಲಿನ್ನಾಂಗ್ ಭೇಟಿ.

  • ದಿನ 5: ಶಿಲ್ಲಾಂಗ್ - ಗುಹಾವಟಿ. ವಾಪಸ್ ಬರುವಾಗ ಶಿಲ್ಲಾಂಗ್ ಪೀಕ್, ಸ್ಥಳೀಯ ಮಾರುಕಟ್ಟೆಯಲ್ಲಿ ಶಾಪಿಂಗ್.

  • ದಿನ 6: ಗುಹಾವಟಿಯಿಂದ ವಾಪಸ್. ಬೆಳಗಿನ ಉಪಹಾರದ ನಂತರ ಏರ್ ಪೋರ್ಟ್ ಅಥವಾ ರೈಲ್ವೆ ಸ್ಟೇಷನ್ ಗೆ ಡ್ರಾಪ್.

ಹಾಗಾದ್ರೆ, ವಸತಿ ಮತ್ತು ಪ್ಯಾಕೇಜ್ ಬೆಲೆ ಎಷ್ಟು?

ಕಲಿಂಪಾಂಗ್ ನಲ್ಲಿ ಗೋಲ್ಡನ್ ಸ್ಟರ್ಲಿಂಗ್ ಪಾರ್ಕ್, ಗ್ಯಾಂಗ್ಟಕ್ ನಲ್ಲಿ ಹೋಟೆಲ್ ಸಮಿಟ್ ನಮ್ನಾಂಗ್, ಡಾರ್ಜಿಲಿಂಗ್ ನಲ್ಲಿ ಹೋಟೆಲ್ ಸಮಿಟ್ ಹರ್ಮನ್ ಅಥವಾ ಇದೇ ಮಟ್ಟದ ಹೋಟೆಲ್ ನಲ್ಲಿ ವಸತಿ ಇರುತ್ತದೆ. ಒಬ್ಬರಿಗೆ 61,200 ರೂಪಾಯಿ, ಇಬ್ಬರು ಒಟ್ಟಿಗೆ ಇದ್ದರೆ ತಲಾ 46,750 ರೂಪಾಯಿ, ಮೂವರು ಇದ್ದರೆ ತಲಾ 45,500 ರೂಪಾಯಿ. 5 ರಿಂದ 11 ವರ್ಷದ ಮಕ್ಕಳಿಗೆ ಹಾಸಿಗೆ ಸಹಿತ 43,100 ರೂಪಾಯಿ, ಹಾಸಿಗೆ ರಹಿತ 40,800 ರೂಪಾಯಿ. 2 ರಿಂದ 4 ವರ್ಷದ ಮಕ್ಕಳಿಗೆ 31,500 ರೂಪಾಯಿ. ಒಟ್ಟು 29 ಸೀಟುಗಳು ಮಾತ್ರ ಇವೆ.

IRCTC Splendors of North East Ex Bengaluru Tour Package, Kalimpong Gangtok Darjeeling Trip Price and Dates
ದಸರಾ ರಜೆಗೆ ಎಲ್ಲಿಗೆ ಹೋಗ್ತೀರಾ? ಕರ್ನಾಟಕದಲ್ಲೇ ಇವೆ ನೋಡಲೇಬೇಕಾದ ಸ್ವರ್ಗಸದೃಶ ತಾಣಗಳು!

ಪ್ಯಾಕೇಜ್ ನಲ್ಲಿ ಏನಿದೆ, ಏನಿಲ್ಲ?

ಪ್ಯಾಕೇಜ್ ನಲ್ಲಿ ಬೆಂಗಳೂರು ಬಾಗ್ಡೋಗ್ರಾ ವಿಮಾನ ಟಿಕೆಟ್, 5 ರಾತ್ರಿ ಹೋಟೆಲ್ ವಸತಿ, ಬೆಳಗಿನ ಉಪಾಹಾರ ಮತ್ತು ರಾತ್ರಿ ಊಟ, ವಾಹನ ವ್ಯವಸ್ಥೆ, ಪ್ರಯಾಣ ವಿಮೆ ಮತ್ತು ಜಿಎಸ್ ಟಿ ಸೇರಿದೆ. ಪ್ರವೇಶ ಶುಲ್ಕ, ನಾಥುಲಾ ಪಾಸ್ ಪ್ರವಾಸ, ಗೈಡ್ ಶುಲ್ಕ, ಟಿಪ್ಸ್ ಮತ್ತು ವೈಯಕ್ತಿಕ ಖರ್ಚು ಸೇರಿಲ್ಲ. ರದ್ದತಿಗೆ ನಿಯಮದಂತೆ ಶುಲ್ಕ ಇರುತ್ತದೆ. ಆಸಕ್ತರು ಬೇಗ ಬುಕ್ ಮಾಡುವುದು ಒಳ್ಳೆಯದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X